ನೆಪ ಮಾತ್ರದ ಜನತಾ ದರ್ಶನ ಈಡೇರದ ಬೇಡಿಕೆ ಸಾರ್ವಜನಿಕ ರಿಂದ ಭಿನ್ನ ನಿಲುವು.

ಕೊಟ್ಟೂರು ಜು .05

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 5 ಜುಲೈ 2024 ರಂದು ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ ಮತ್ತು ಶಾಸಕರಾದ ಕೆ ನೇಮಿರಾಜ್ ನಾಯಕ್ ವಿಧಾನ ಸಭಾ ಕ್ಷೇತ್ರದ ಇವರ ಘನ ಉಪಸ್ಥಿತಿಯಲ್ಲಿ ಎಪಿಎಂಸಿ ಆವರಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ಕುಂಡಲಕ್ಕೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮ ಇವರ ಉಪಸ್ಥಿತಿಯಲ್ಲಿ ಎರಡನೇ ಬಾರಿ ನಡೆಯುತ್ತಿರುವುದು ಆದರೆ ಕೆಲ ಸಾರ್ವಜನಿಕರಿಗೆ ಬೇಸರ ವಾಗಿದೆಯಂತೆ ಅಲ್ಲಲ್ಲಿ ಮಾತನಾಡಿ ಕೊಳ್ಳುತ್ತಿದ್ದರು. ಏಕೆಂದರೆ ಮೊದಲನೇ ಜನತಾ ದರ್ಶನದ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿಗಳು ಕೆಲವೇ ಕೆಲವು ಸಾರ್ವಜನಿಕರಿಗೆ ಅನುಕೂಲ ವಾಗಿವೆಯಂತೆ ಆದರೆ ಇನ್ನು ಆದರೂ ಅನೇಕ ಅರ್ಜಿಗಳು ಕೇವಲ ನೆಪ ಮಾತ್ರಕ್ಕೆ ತೆಗೆದು ಕೊಂಡಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಾ ಮತ್ತೆ ಅರ್ಜಿಗಳನ್ನು ನೀಡುತ್ತಿದ್ದರಂತೆ ಹೀಗಾಗಿ ಕೆಲ ಸಾರ್ವಜನಿಕರ ಮನಸ್ಥಿತಿಗೆ ಅನುಗುಣವಾಗಿ ಅಧಿಕಾರಿಗಳಾಗಲಿ ಜನನಾಯಕರಾಗಲಿ ಕೆಲಸ ಮಾಡಿ ಕೊಡುವುದು ಇಲ್ಲಿನ ಸಾರ್ವಜನಿಕರ ಬೇಡಿಕೆಯಾಗಿದೆ. ನೂತನ ಕೊಟ್ಟೂರು ತಾಲೂಕು ಆದರು ಅನೇಕ ಕಚೇರಿಗಳು ತೆರೆದಿಲ್ಲ ಮತ್ತು ಅತ್ಯ ಅವಶ್ಯಕವಾಗಿರುವ ಬಸ್ಟ್ಯಾಂಡ್ ಆಗುತ್ತೆ ಮಾಡೋಣ ಎನ್ನುತ್ತಲೇ ಬಂದಿದ್ದಾರೆ ಹಾಗೇನೆ ಸರ್ಕಾರಿ ಆಸ್ಪತ್ರೆ ಸಮಸ್ಯೆಗಳು ಯಾವಾಗ ಬಗೆ ಹರಿವುದು ಎಂಬುದು ಸಾರ್ವಜನಿಕರ ಕೆಲ ಮುಖಂಡರ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿವೆ.

ಈ ಒಂದು ಸಂದರ್ಭದಲ್ಲಿ ಎರಡನೇ ಬಾರಿ ಜನತಾ ದರ್ಶನದ ಕಾರ್ಯಕ್ರಮದಲ್ಲಿ ಬಂದಂತ ಅರ್ಜಿಗಳು ಆಹಾರ-3, ಕಂದಾಯ-61 , ಪಶುಪಾಲನೆ -1 , ಭೂಮಾಪನ -3, ಸಾರಿಗೆ- 3 , ಪಟ್ಟಣ ಪಂಚಾಯಿತಿ-19, ಎಪಿಎಂಸಿ -ಆರೋಗ್ಯ- 1 ಸಿಡಿಪಿಒ -4 , ಪಂಚಾಯಿತಿ-10, ಜೆಸ್ಕಾಂ- ತೋಟಗಾರಿಕೆ -1, ಶಿಕ್ಷಣ-2, ಕೃಷಿ-12 ಒಟ್ಟು – 125 ಸ್ಥಳದಲ್ಲೇ ವಿಲೇ -12 ಬಾಕಿ- 113 ಅರ್ಜಿಗಳು ಬಂದಿವೆಯಂತೆ ಆದರೆ ಇದರಲ್ಲಿ ಎಷ್ಟು ಅರ್ಜಿಗಳಿಗೆ ನ್ಯಾಯ ಸಿಗಬಹುದು ಎಂಬುದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ? ಇದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಯಾವ ರೀತಿ ಅಧಿಕಾರಿಗಳು ನೀಡುತ್ತಾರೆ ಇದಕ್ಕೆ ಜಿಲ್ಲಾಧಿಕಾರಿಗಳ ಕಾರ್ಯಕ್ರಮ ಹೇಗೆ ನಡೆಯುತ್ತದೆ. ಎಂಬುದು ಮುಂದಿನ ದಿನ ಮಾನಗಳಲ್ಲಿ ನೋಡುವುದು ಸೂಕ್ತ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಸಂದರ್ಭದಲ್ಲಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಉಪ ವಿಭಾಗಾಧಿಕಾರಿಗಳು ಸಲೀಂ ಪಾಶಾ ಎಸ್ ಪಿ ಮತ್ತು ದಂಡಾಧಿಕಾರಿಗಳಾದ ಜಿಕೆ ಅಂಬರೀಶ್ ರವಿಕುಮಾರ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ರೈತ ಮುಖಂಡರು ಸಂಘ ಸಂಸ್ಥೆಯ ಮುಖಂಡರುಗಳು ಸಾರ್ವಜನಿಕರು ಅನೇಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button