ಉನ್ನತೀಕರಿಸಿದ ಸರ್ಕಾರಿ ಶಾಲೆ ಹಿರೇ ನಗನೂರಿನಲ್ಲಿ ಯುವ ಬೆಂಗಳೂರು ಟ್ರಸ್ಟ್ ಸಂಸ್ಥೆಯಿಂದ – ಮಕ್ಕಳಿಗೆ ಬ್ಯಾಗ್ ನೋಟ್ ಬುಕ್ ವಿತರಣೆ.

ಲಿಂಗಸಗೂರು ಜು.09

ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗು ನೋಟ್ ಬುಕ್ ವಿತರಣೆ ಕಾರ್ಯಕ್ರಮ ನಡೆಯಿತು.ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಸಂಸ್ಥೆಯ ಸ್ವಯಂ ಸೇವಕರಾದ ನಮ್ಮೂರಿನ ಹುಡುಗ ಚವರನಾಥ್ ಡಬ್ಬೆರ್ ಇವರ ಪ್ರಯತ್ನದಿಂದ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಹಾಗೂ 7ನೇ ತರಗತಿಯಲ್ಲಿ ಓದುವಂತ ಬಡ ಮಕ್ಕಳಿಗೆ ಶಾಲೆ ಬ್ಯಾಗ್ ಹಾಗೂ ನೋಟ್ ಪುಸ್ತಕವನ್ನು.ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಕೊಡಿಸುವಂತ ಕೆಲಸ ಮಾಡಿದ್ದಾರೆ. ಇವರಿಗೂ ಹಾಗೂ ಯುವ ಬೆಂಗಳೂರು ಟ್ರಸ್ಟ್ ಇವರಿಗೂ ಗ್ರಾಮದ ಹಿರಿಯರು ಅಭಿನಂದನೆಗಳನ್ನು ಸಲ್ಲಿಸಿದರು.ಯುವ ಬೆಂಗಳೂರು ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರು ಕಿರಣ್ ಸಾಗರ್. ಮುಖ್ಯ ಕಾರ್ಯದರ್ಶಿಯಾದ ಶ್ವೇತಾ ಕಿರಣ್ ಸಾಗರ್. ಮತ್ತು ಈ ಸಂಸ್ಥೆಯು ಉಪ ಅಧ್ಯಕ್ಷರಾದ ಸುನಿಲ್ ಕುಮಾರ್ ಇವರಿಗೆ ಪ್ರಥಮವಾಗಿ ಧನ್ಯವಾದಗಳು ಹೇಳಿ. ಈ ಸಂಸ್ಥೆಯು ಉದ್ದೇಶ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು.

ಹಾಗೂ ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಾರ್ಥ ಮನೋಭಾವನೆ ಯಿಂದ ತಮ್ಮ ಕೈಲಾದ ಸಹಾಯ ಮಾಡುವ ಉದ್ದೇಶ ಈ ಸಂಸ್ಥೆಯ ಉದ್ದೇಶವಾಗಿದೆ. ಅದೇ ರೀತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಮಾರ್ಗದರ್ಶನ ದಿಂದ ಪ್ರಭಾವಿತರಾಗಿ 2008 ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿ ಕೇವಲ ಒಂದು ಶಾಲೆಯಿಂದ ಪ್ರಾರಂಭ ಮಾಡಿ ಇವತ್ತು 450 ಕ್ಕೂ ಹೆಚ್ಚು ಶಾಲೆಗಳನ್ನು ತೆಗೆದುಕೊಂಡು ಅದರಲ್ಲಿರುವ 20 ಸಾವಿರಕ್ಕೂ ಅಧಿಕ ಮಕ್ಕಳಿಗೆ ಹಾಗೂ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಒಂದು ದೊಡ್ಡ ಸಂಸ್ಥೆ ಇದಾಗಿದೆ. ಆರಂಭದಲ್ಲಿ 10 ಜನರ ಸ್ವಯಂ ಸೇವಕರಿಂದ ಕೂಡಿದ ಈ ಸಂಸ್ಥೆ ಇಂದು 20000 ಸ್ವಯಂ ಸೇವಕರಿಂದ ಕೂಡಿದ ಬೃಹತ್ ಸಂಸ್ಥೆಯಾಗಿ ಬೆಳೆದಿದೆ.ಬೆಂಗಳೂರು.ಮಂಡ್ಯ ರಾಮನಗರ.ಮಾಗಡಿ. ಇನ್ನು ಅನೇಕ ಕಡೆಗಳಲ್ಲಿ ತನ್ನ ಸ್ವಸಾಯ ಕಾರ್ಯಗಳನ್ನು ಮುಂದುವರಿಸುತ್ತಾ ಬಂದಿದೆ. ಈ ಸಂಸ್ಥೆಯು ಕೇವಲ ಶಾಲೆ ಅಭಿವೃದ್ಧಿಗೆ ಮತ್ತು ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ. ಶಿಕ್ಷಣದಿಂದ ವಂಚಿತರಾದ ಹಾಗೂ ವೃದ್ಧಾಶ್ರಮ ಅನಾಥರ್ಶಗಳಿಗೂ ತನ್ನದೇ ಆದ ಕಾಣಿಕೆಯನ್ನು ನಿರಂತರವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ಗ್ರಾಮದ ಅಂತೋನಿ ಕಂದಳ್ಳಿ ಇವರು. ಸಂಸ್ಥೆಯ ಬಗ್ಗೆ ಕಿರು ಪರಿಚಯ ಮಾಡಿದರು.ಈ ಕಾರ್ಯಕ್ರಮ ಉದ್ದೇಶಿಸಿ ಊರಿನ ಹಿರಿಯರಾದ ಬಸವರಾಜಪ್ಪ ಕುರುಗೋಡು ಅವರು ಕಾರ್ಯಕ್ರಮದ ಬಗ್ಗೆ ಮಾತನಾಡಿ ಸರಕಾರಿ ಶಾಲೆಗೆ ಬರುವಂತ ಮಕ್ಕಳು ಬಡವರ ಮಕ್ಕಳು ಆದರೆ ದೊಡ್ಡ ದೊಡ್ಡ ಶ್ರೀಮಂತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಶಿಕ್ಷಣವನ್ನು ಕೊಡಿಸುತ್ತಾರೆ. ಆದರೆ ಸರಕಾರಿ ಶಾಲೆಯಲ್ಲಿ ಬರುವಂತಹ ಮಕ್ಕಳು ಬಹುತೇಕ ಬಡವರು ಇಂಥ ಸರಕಾರಿ ಶಾಲೆಯ ಮಕ್ಕಳಿಗೆ ಸಹಾಯವನ್ನು ನೀಡುವಂತ ಇಂತಹ ಸಂಸ್ಥೆಗಳು ಬೆಳೆಯುತ್ತಾ ಸಾಗಲಿ ಎಂದು ಯುವ ಬೆಂಗಳೂರು ಟ್ರಸ್ಟ್ ಗೆ ಶುಭ ಕೋರಿದರು ಅದೇ ರೀತಿ ನಮ್ಮ ಗ್ರಾಮದಲ್ಲಿ ಇಂಥ ಸಂಸ್ಥೆಗಳಿಗೆ ಸಪೋರ್ಟ್ ಮಾಡುವಂತಹ ಗೆಳೆಯರ ಬಳಗವು ಕಾರ ನೀಡುತ್ತಾ ಇದನ್ನು ಮುಂದುವರಿಸಿಕೊಂಡು ಹೋಗೋಣ ನಮ್ಮೂರ ಸರಕಾರಿ ಶಾಲೆಯನ್ನು ಬೆಳವಣಿಗೆಯಲ್ಲಿ ಹೆಚ್ಚಿನ ರೀತಿಯಲ್ಲಿ ಬೆಳೆಸುವುದಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಮತಾ. ಬಸವರಾಜ್ ಸರ್. ಹಾಗೂ ಸಹ ಶಿಕ್ಷಕಿಯರು.ಗ್ರಾಮದ ಹಿರಿಯರಾದ ಬಸವರಾಜಪ್ಪ ಕುರುಗೋಡು.ಮಾಜಿ ತಾಲೂಕ ಪಂಚಾಯತ್ ಸದಸ್ಯ ತಿಮ್ಮನಗೌಡ. ವಿರೂಪಾಕ್ಷಪ್ಪ ಮಾಲಿಪಾಟೀಲ್.ಎಸ್ ಶಿವನಗೌಡ. ಮೌನುದ್ದೀನ್ ಬೂದಿನಾಳ.ಅಬ್ರಾಹಿಂ ಸಲಾಬೂರ್.ಅಮರೇಶ್ ಪರಮ್ಮ.ಅಮರಪ್ಪ ಹಿರೇ ಕುರುಬರು.ಅಮರೇಶ್ ಬೆಂಚುಮಟ್ಟಿ.ರಫಿ ಎಚ್‌ಜಿಎಂ. ಆನಂದ್ ಕಂದಳ್ಳಿ.ನಿಂಗಪ್ಪ ಬೆಂಚಮಟ್ಟಿ. ಪ್ರಕಾಶಪ್ಪ ಕಂದಳ್ಳಿ. ಹಂಚೇಲಮ್ಮ. ಕಿಲಾರೆಮ್ಮ.ಹಾಗೂ ಮಕ್ಕಳು ಸೇರಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ.ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button