ಆಗಷ್ಟ 30 ರಂದು ಗೃಹ ಲಕ್ಷ್ಮೀ ಯೋಜನೆ ಜಾರಿಗೆ.
ಹನಗುಂದ ಆಗಷ್ಟ:28

ಪಟ್ಟಣದ ಬಸವಮಂಟಪ ಸೇರಿದಂತೆ ವಿವಿಧ ಕಡೆಗೆ ಆ.೩೦ ಬುಧವಾರ ದಂದು ಮಧ್ಯಾಹ್ನ ೧೨ ಗಂಟೆಗೆ ಗೃಹ ಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲಾಗುವುದು.ಆ.೩೦ ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಯ್ಯನವರು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆ ಲೋಕಾರ್ಪಣೆ ಗೊಳಿಸುತ್ತಿದ್ದು ಅದೇ ದಿನ ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದ ಬಸವ ಮಂಟಪ, ಮೇಗಲಪೇಟೆಯ ಕಲ್ಯಾಣ ಮಂಟಪ,ಸಂಗಮೇಶ್ವರ ಕಲ್ಯಾಣ ಮಂಟಪ, ಶ್ಯಾದಿ ಮಹಲ್ ಹಾಗೂ ಪುರಸಭೆ ಕಲ್ಯಾಣ ಮಂಟಪದಲ್ಲಿ ಯೋಜನೆ ಜಾರಿ ಗೊಳಿಸಲಾಗುವುದು ಅಂದು ನೋಂದಾಯಿತ ಎಲ್ಲ ಮಹಿಳಾ ಫಲಾನುವಿಗಳು, ಸಾರ್ವಜನಿಕರು ಚುನಾಯಿತ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಸತೀಶಕುಮಾರ ಚವಡಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ