ಶಾಸಕ ವಿಜಯಾನಂದ ಕಾಶಪ್ಪನವರ ಇಂದಿರಾ ಕ್ಯಾಂಟೀನ್ ಭೂಮಿ ಪೂಜೆ ನೆರವೇರಿಸಿದರು.
ಇಲಕಲ್ಲ ಜು.09

ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಯೋಜನೆ ಹಂತ 02 ರಡಿ ಇಳಕಲ್ ನಗರದ ಹಳೆ ಪೊಲೀಸ್ ಸ್ಟೇಶನ್ ಕಟ್ಟಡದ ಪಕ್ಕದಲ್ಲಿ ಇಂದು ಇಂದಿರಾ ಕ್ಯಾಂಟೀನ್ ಕಾಮಗಾರಿ ಭೂಮಿ ಪೂಜೆಯನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರು ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕ ವಿಜಯಾನಂದ ಎಸ್.ಕಾಶಪ್ಪನವರು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ನಗರ ಸಭೆಯ ಪೌರಾಯುಕ್ತರಾದ ಶ್ರೀನಿವಾಸ ಜಾದವ್, ನಗರ ಸಭೆಯ ಸದಸ್ಯರು, ಮಲ್ಲಿಕಾರ್ಜುನ ಅಗ್ನಿ, ಮಹಾಂತೇಶ ನರಗುಂದ, ಯಲ್ಲಪ್ಪ ರಾಜಾಪೂರ, ಎಚ್. ಎಸ್.ಮುಚಖಂಡಿ, ಪಂಪಣ್ಣ ಮಾಗನೂರ, ಅಬ್ಬು ಹಳ್ಳಿ, ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ. ಇಲಕಲ್ಲ.