ಜನ ಸ್ಪರ್ಶಿ ಆಡಳಿತಕ್ಕೆ ಶಾಸಕರ ಕಟ್ಟಪ್ಪಣೆ.
ಕೂಡ್ಲಿಗಿ ಜು.12

ದಿನಾಂಕ 11.07.2024 ರಂದು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ತಾಲೂಕಾ ಪ್ರಗತಿ ಪರಿಶೀಲನ ಸಭೆ ಜರುಗಿಸಿ ಮಾತನಾಡಿದರು. ಆಡಳಿತ ಜನ ಸ್ಪರ್ಶಿ ಯಾಗಿರಬೇಕು, ಸ್ಪಂದನೆ ತಲಸ್ಪರ್ಶಿ ಯಾಗಿರಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವೆಂದು ತಾಲೂಕು ಕೆಡಿಪಿ ಸುದೀರ್ಘ ಸಭೆಯಲ್ಲಿ ಇದೇ ಅಂಶವನ್ನು ಮನವರಿಕೆ ಮಾಡಿ ಕೊಟ್ಟಿದ್ದಾರೆ.ಸುಗಮ ಪರಿಣಾಮಕಾರಿ ಆಡಳಿತ, ಸರ್ಕಾರದ ಕಾರ್ಯಕ್ರಮಗಳು ಸಕಾಲಕ್ಕೆ ಫಲಾನುಭವಗಳಿಗೆ ತಲುಪಬೇಕು. ತಾಲೂಕಾ ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ತಾಲೂಕಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಪರಂಪರೆಯನ್ನು ಅರಿತರೆ ಜನ ಪರವಾಗಿ ಕೆಲಸ ಮಾಡುವುದು ಸುಲಭವಾಗುತ್ತದೆ ಎಂದರು.” ಅಧಿಕಾರಿಗಳಿಗೆ ಕಟ್ಟಪ್ಪಣೆ” ಕಳಪೆ ಬೀಜ ಮತ್ತು ಗೊಬ್ಬರ ತಡೆಗಟ್ಟಲು ಕೃಷಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೃಷಿ ಭಾಗ್ಯ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು ರೈತರಿಗೆ ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣ ನಿಯಂತ್ರಿಸ ಬೇಕು ರಸ್ತೆ ಅಪಘಾತ ತಡೆಯುವ ಯೋಜನೆಗಳನ್ನು ರೂಪಿಸಬೇಕು. ತಾಲೂಕಾ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ಪಶು ಆಸ್ಪತ್ರೆ ಮೇಲ್ದರ್ಜೆಗೆ ಗುರಿಯನ್ನು ನಿಗದಿ ಗೊಳಿಸಬೇಕು ಕೆರೆ ನೀರು ತುಂಬಿಸುವ ಯೋಜನೆ ಕಾಮಗಾರಿ ಜರೂರಾಗಿ ಮುಗಿಸಬೇಕು ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು ಶೈಕ್ಷಣಿಕ ಚಟುವಟಿಕೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ವಿವಿಧ ಇಲಾಖೆ ಅಭಿವೃದ್ಧಿ ಅನುಷ್ಠಾನದಲ್ಲಿ ನಿಧಾನ ಗತಿ, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಗತಿ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ತಾ. ಪಂ. ಆಡಳಿತ ಅಧಿಕಾರಿಗಳು & ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕಾ ಮಟ್ಟದ ಅಧಿಕಾರಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.