ಉತ್ತಮ ಸಮಾಜದ ಸಂಕಲ್ಪಕ್ಕಾಗಿ ಪಣ ತೊಟ್ಟ ಶಾಸಕ – ಡಾ, ಶ್ರೀ ನಿವಾಸ್.ಎನ್.ಟಿ
ವಡ್ಡರಹಟ್ಟಿ ಜು.12

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೇಗಳ ಕರ್ನಾರಹಟ್ಟಿ , ಸಿದ್ದಾಪುರ-ವಡ್ಡರಹಟ್ಟಿ, ಗ್ರಾಮಗಳಿಗೆ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್.ಎನ್. ಟಿ. ಅವರು ದಿ. 12-07-24 ರಂದು ಭೇಟಿ ನೀಡಿ ಊರಿನ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರ ಸಮ್ಮುಖದಲ್ಲಿ ಕ್ರಮವಾಗಿ ಗುಣಮಟ್ಟದ ಶಾಲಾ ಕಟ್ಟಡ ಹಾಗೂ ಸಿ. ಸಿ. ರಸ್ತೆಯ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ಇದೇ ವೇಳೆ ಶಾಸಕರು ಗುತ್ತಿಗೆದಾರರನ್ನು ಉದ್ದೇಶಿಸಿ ಮಾತನಾಡಿ, ಯೋಜನಾ ಬದ್ಧ, ಸುಸಜ್ಜಿತವಾದ ಮತ್ತು ಗುಣಮಟ್ಟದ ರೀತಿಯಲ್ಲಿ ತಮ್ಮ ತಮ್ಮ ಕಾಮಗಾರಿಗಳನ್ನು ಪ್ರಾರಂಭಿಸ ಬೇಕು ಎಂದೂ ತಿಳಿಸಿದರು. ಹಾಗೆಯೇ ಶಾಸಕರು ಆಯಾ ಊರಿನ ಶಾಲೆಗಳಿಗೆ ಭೇಟಿ ನೀಡಿ ಬಿಸಿಯೂಟವನ್ನು ಪರಿಶೀಲಿಸಿದಾಗ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದಲ್ಲಿ ಆಹಾರ ಪೂರೈಸುತ್ತಿರುವುದು ತಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳದಲ್ಲೇ ಕ್ಷೇತ್ರದ ಶಿಕ್ಷಣ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಊರಿನ ಕುಂದು ಕೊರತೆಗಳನ್ನು ಪಟ್ಟಿ ಮಾಡಿ ಕೊಂಡು ಬಗೆ ಹರಿಸುವುದಾಗಿ ಹೇಳಿದರು. ಶಿಥಿಲೀಕರಣ ಗೊಂಡ ಹಳೇ ಶಾಲಾ ಕಟ್ಟಡ, ಶೌಚಾಲಯ ತೆರವು ಗೊಳಿಸಿ ಇರುವ ಸ್ಥಳವನ್ನು ಅಚ್ಚು ಕಟ್ಟಾಗಿ ಬಳಸಿ ಕೊಂಡು ಹೊಸದಾಗಿ ಕಟ್ಟಡ ನಿರ್ಮಿಸ ಬೇಕು ಎಂದೂ ಸ್ಥಳೀಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು. ಸಿದ್ದಾಪುರದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.