ಮಸ್ಕಿ ಆಟೋದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ.
ಮಸ್ಕಿ ಅ.02

ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ತೆರಳುವ ವೇಳೆ ಆಟೊದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಪಟ್ಟಣದ ವಾರ್ಡ 08 ರಲ್ಲಿ ಬರುವ ದುರ್ಗಾದೇವಿ ದೇವಸ್ಥಾನದ ಹತ್ತಿರ ಶೇಷಮ್ಮ ಗಂ ಮಲ್ಲಯ್ಯ ಕಾನಿಹಾಳ ಎಂಬ ಮಹಿಳೆಗೆ ಬೆಳಿಗ್ಗೆಯೇ ಹೆರಿಗೆ ನೋವು ಕಾಣಿಸಿ ಕೊಂಡಿದೆ.ಮನೆಯಿಂದ ಆಟೋದಲ್ಲಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ವೇಳೆ ಹೆರಿಗೆ ನೋವು ಹೆಚ್ಚಾಗಿದೆ. ಇದನ್ನು ಅರಿತು ತಕ್ಷಣ ಮಾರ್ಗ ಮಧ್ಯದಲ್ಲಿಯೇ ಆಟೋ ಚಾಲಕಶಿವಕುಮಾರ್ ಆಟೋ ನಿಲ್ಲಿಸಿದ್ದಾನೆ. ತಕ್ಷಣ ಕುಟುಂಬದ ಮಹಿಳೆ ಶಾರದಮ್ಮ ಮತ್ತು ಅಕ್ಕ ಪಕ್ಕದ ಮಹಿಳೆಯರು ಆಟೋದ ಸುತ್ತ ಸಿರಿ ಪರದೆ ಕಟ್ಟಿ ಹೆರಿಗೆಗೆ ಸಹಕಾರ ನೀಡಿದರು. ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.ಹೆರಿಗೆಗೆ ಸಹಕರಿಸಿದ ನೆರೆ ಹೊರೆಯವರ ಸಹಾಯಕ್ಕೆ ಸಾರ್ವಜನಿಕರ ಮಚ್ಚಗೆ ವ್ಯಕ್ತಪಡಿಸಿದ್ದಾರೆ.ಹರಿಗೆ ನಂತರ ಆಶಾ ಕಾರ್ಯಕರ್ತೆಯರು ಮಹಿಳೆಯರು ಹಾಗೂ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.