ಗೋಲಗೇರಿಯಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ.
ಗೋಲಗೇರಿ ಜನೇವರಿ.30

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ ಭೀಮ ಘರ್ಜನೆ ತಾಲೂಕಾ ಸಮಿತಿ ಯಿಂದ ಗೋಲಗೇರಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ. ಈ ಹಿಂದೆ ನಡೆದ ಕಲಬುರಗಿ ಜಿಲ್ಲೆಯ ಕೂಟನೂರ ಪಟ್ಟಣದ ವಾಪ್ತಿಯಲ್ಲಿ ಬರುವ ಲುಂಬಣ್ಣೆ ಉದ್ಯಾನವನದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪುತ್ತಳಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಅವರನ್ನು ಗಡಿಪಾರು ಹಾಗೂ ಕಾನೂನು ಅಡಿಯಲ್ಲಿ ಅವರಿಗೆ ಗಲ್ಲು ಶಿಕ್ಷಿ ಆಗಬೇಕು ಎಂದು ಗ್ರಾಮದ ದಲಿತ ಒಕ್ಕೂಟದ ಪ್ರಗತಿಪರ ಸಂಘಟನೆಗಳು ಕೂಡಿ ಕೊಂಡು ಬೃಹತ್ ಮಟ್ಟದ ಪ್ರತಿಭಟನೆಯ ಮೂಲಕ ರಸ್ತೆಯನ್ನು ಬಂದು ಮಾಡಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಹೋರಾಟವನ್ನು ಶ್ರೀಶೈಲ ಜಾಲವಾದಿ ಡಿ ಎಸ್ ಎಸ್ ಭೀಮ ಘರ್ಜನೆಯ ತಾಲೂಕಾ ಸಂಚಾಲಕರ ನೇತೃತ್ವದಲ್ಲಿ ನಡೆಯಿತು. ಹಾಗೂ ಕರ್ನಾಟಕ ಸರ್ಕಾರದ ಮಾನ್ಯ ಗ್ರಹ ಸಚಿವರಿಗೆ ತಲುಪುವಂತೆ ದಲಿತ ಮುಖಂಡರು ಮನವಿ ಪತ್ರ ಸಲ್ಲಿಸಿದರು.

ಸಿದ್ಧು ಮೇಲಿನಮನಿ ಅರುಣ ಸಿಂಗೆ ಹಾಗೂ ಬಸವರಾಜ ಮಾರಲಬಾವಿ ಶಿವು ಹತ್ತಿ ಎಚ್ ಎ ತಳ್ಳೋಳ್ಳಿ ಮಾಡು ನಾಯ್ಕೋಡಿ ಮಾಂತೇಶ ಸಾತಿಹಾಳ ಸೈಪನಸಾಬ್ ಕೋರವಾರ ಸಲೀಮ ಬಾಗವಾನ ಸಿದ್ಧಣ್ಣ ತಳವಾರ ಚಂದ್ರಶೇಖರ ಕೆಂಬಾವಿ ಗೌತಮ ಮೇಟಿ ಎ ಡಿ ಕೋರವಾರ ಗೌಡಣ್ಣ ಯಡ್ರಾಮಿ ಮರಗು ಕುದರಗುಂಡ ನೀಲಕಂಠ ಚಲವಾದಿ ಗೊಲ್ಲಾಳ ಚಲವಾದಿ ಬಾಬು ಜಾಲವಾದಿ ವಾಸದೇವ ಪತ್ತಾರ ಶರಣಪ್ಪ ಕರ್ನಾಳ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಹಾಗೂ ಈ ಹೋರಾಟದಲ್ಲಿ ಹಲವಾರು ಮುಖಂಡರು ಮಾತನಾಡಿದರು, ಈ ಬೃಹತ್ ಪ್ರತಿಭಟನೆಯಲ್ಲಿ ಹಾಗೂ ಸುತ್ತ ಮುತ್ತಲಿನ ಗ್ರಾಮದ ದಲಿತ ಮುಖಂಡರು ಮತ್ತು ಪ್ರಗತಿಪರ ಸಂಘಟನೆಯರು ಈ ಹೋರಾಟದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರಹಿಪ್ಪರಗಿ