“ಜನಸಿದ ಕ್ಷಣದಿ ಹೆತ್ತವರ ಕೃಪೆ ಅನವರತ”.

ಜನಸಿದ ಕ್ಷಣದಿ ಹೆತ್ತವರ ಕೃಪೆ ಜನಿಸಿದ ಕ್ಷಣದ ಅಳುವ ಧ್ವನಿ ಆಲಿಸಿ ಖುಷಿ ಪಟ್ಟ ಹೆತ್ತ ಕರಳು ದೇವನ ಕೃಪೆ ಸದಾ ಕಾಲ ಇರಲಿ ಎಂದು ಹರಿಸಿದವರು ಹೆತ್ತವರು ಜನಸಿದ ಕ್ಷಣದಿಂದ ಹೆತ್ತವರ ಉಸಿರೆ ನನ್ನ ಬಾಳಿನ ಬೆಳಕು ಬಾಲ್ಯದ ದಿನದಿ ಅಮ್ಮ ತಾನು ಆಡಿ ನಲಿಸಿದ ಕ್ಷಣ ಸಿರಿ ಸಿಹಿ ನೆನಪು ನನ ಕಂದ ಯಾರಿಗೇನು ಕಮ್ಮಿ “ರಾಜ ಕುಮಾರ” ಎಂದು ಹಾರೈಸಿ ಖುಷಿ ಪಟ್ಟವಳು ಎಡಬಲ ಭುಜ ತಟ್ಟಿ ಬೆಳಸಿದ ಸಹೋದರರ ವಾಸ್ತಲ್ಯ ಮನದಲಿ ಚಿರ ನೆನಪು ಚಿಕ್ಕಪ್ಪ ಚಿಕ್ಕಮ್ಮ ದೊಡ್ಡಪ್ಪ ದೊಡ್ಡಮ್ಮ ಅಗಾಧ ಪ್ರೀತಿ ಹಾರೈಕೆಗಳೇ ಉಡುಗೊರೆ ಸಹೋದರಿಯರ ಕಕುಲತೆಯ ಸಹಪಾಠ ಆಟ ಬಾಲ್ಯದ ಸಿಹಿ ಕ್ಷಣಗಳೇ ಇಂದಿನ ನಗುವಿಗೆ ನೈಜತೆ ಮೆಲುಕು ಬೆಳಕು ಸಹ ಪಾಠಿಗಳ ಜೊತೆ ಕೂಡಿ ನಲಿದ ಕ್ಷಣ ಅಮರ ಬಾಲ್ಯದ ಸವಿ ಸಿಹಿ ನೆನಪುಗಳು ವಾಸ್ತಲ್ಯ ಸಾಹಸ ಪ್ರಾಮಾಣಿಕತೆ ಸರಳತೆ ಸೌಜನ್ಯ ಅವಿರತ ಶ್ರಮ ಕಲಿಸಿದ ಅಣ್ಣಾರಾಯನ ಆದರ್ಶತನವೇ ನನಗೆ ಮಾದರಿತನದ ಜೀವನದ ರಹದಾರಿ ಪ್ರಯಾಣ ಸಾಗಿಹುದು ಹಿರಿಯರ ನಗು ಅನುಭವದ ನುಡಿ ಆಲಿಸಿ ಪಾಲಿಸಿದ ಫಲ ಸುಕೃತ ಫಲ ನನ್ನದಾಗಿದೆ ಜನಿಸಿದ ಊರೊಂದು ಜೀವನ ಸಾಗಿಹ ಊರೊಂದು ತನು ಮನ ಖುಷಿಯಾಗಿ ನಲಿಯುತಿಹ ಜೀವನ ಸದಾ ಸಿಹಿ ಕಹಿ ಜೋತೆ ಇರಲಿ ಹೆತ್ತವರ ಹಿರಿಯರ ಕೃಪೆ ಇರಲಿ ಅನವರತ ಹರಸಲಿ ಭೂಮಾತೆ ಶುಭ ಅಮೃತ ಗಳಿಗೆ ಜನಸಿದ ಕ್ಷಣದಿ ನೂರಾರು ವರ್ಷಗಳ ಹಾರೈಕೆ ನಿಜವಾಗಲಿ ಜನ್ಮದಿನದ ಶುಭ ಘಳಿಗೆ ಎಲ್ಲರ ಹಾರೈಕೆಗಳೇ ಶ್ರೀರಕ್ಷೆ ನನಗೆ.
ಅಕ್ಷರ ಸ್ನೇಹಿ- ದೇಶಂಸು.
ಶ್ರೀ ಸುರೇ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ