ಬಡ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆದರೆ ಉಗ್ರವಾದ ಹೋರಾಟ ಖಚಿತ – ರೈತ ಮುಖಂಡ ದೇವರಮನೆ ಮಹೇಶ್ ಆಕ್ರೋಶ.
ಕೂಡ್ಲಿಗಿ ಜು.26





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ರೈತರನ್ನು ಒಕ್ಕಲೆಬಿಸದೆ ಸರ್ಕಾರಿ ಹಳ್ಳ ಪರಂ ಪೋಕ್ ಎಂದು ಬೋರ್ಡ್ ಹಾಕಿ ರೈತರನ್ನು ದಿಕ್ಕು ದೋಚದಂತೆ ಕಂಗಲ್ಲಾಗಿದ್ದಾರೆ ರೈತರು ಇದರ ವಿರುದ್ಧ ಕೂಡ್ಲಿಗಿಯ ಗಾಂಧೀಜಿ ಚಿತ್ತಾ ಭಸ್ಮ ದಿಂದ ಪ್ರತಿಭಟನೆ ರ್ಯಾಲಿಯನ್ನು ಹಮ್ಮಿಕೊಂಡಿದ್ದು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತಾಲೂಕು ಕಚೇರಿಗೆ ಮನವಿ ಕೊಡಲಾಯಿತು. ಈ ಸಂದರ್ಭದಲ್ಲಿ ಹತ್ತಾರು ರೈತ ಮುಖಂಡರು ಸರ್ಕಾರ ದ ವಿರುದ್ದ ಘೋಷಣೆಗಳ ಕೂಗುತ್ತಾ ರೈತರನ್ನು ಒಕ್ಕಲೆಬೀಸ ಬಾರದೆಂದು ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ದೇವರ ಮನೆ ಮಹೇಶ್ ರವರು ಮಾನ್ಯ ತಹಸೀಲ್ದಾರ್ ರೇಣುಕಾ ಇವರ ಮುಖಂತರ ಮಾನ್ಯ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ವಿಜಯನಗರ ಜಿಲ್ಲಾ ಉಸ್ತುವಾರಿ ಗಳು ಹಾಗೂ ವಸತಿ ಸಚಿವರು ಇವರಿಗೆ ಹಾಗೂ ಮಾನ್ಯ ಎನ್ ಟಿ ಶ್ರೀನಿವಾಸ್ ಕೂಡ್ಲಿಗಿ ಶಾಸಕರ ಆಪ್ತ ಸಹಾಯಕರಾದ ಮರಳುಸಿದ್ದಪ್ಪ ರವರಿಗೆ ಹತ್ತಾರು ರೈತ ಮುಖಂಡರು ಮನವಿ ಪತ್ರ ಕೊಡುವುದರ ಮೂಲಕ ಸಾಗುವಳಿ ರೈತರಿಗೆ ಒಕ್ಕಲೆಬ್ಬಿಸ ಬಾರದೆಂದು ಹಾಗೂ ತಾಲೂಕಿನಲ್ಲಿ ಅನೇಕ ರೈತರು ಪಾರಂ 57 ಅರ್ಜಿಗಳನ್ನು ಸಲ್ಲಿಸಿದ್ದು ಆದಷ್ಟು ಬೇಗನೆ ರೈತರಿಗೆ ಪಟ್ಟಗಳನ್ನು ನೀಡಬೇಕು ಎನ್ನುವುದು ಬೇಡಿಕೆಯಾಗಿತ್ತು.

ಈ ಸಂದರ್ಭದಲ್ಲಿ ಸರ್ವೇ ನಂಬರ್ 594 ಹಾಗೂ ಇನ್ನೂ ಕೆಲವು ಕಂದಾಯ ಗ್ರಾಮ ಗುಡೆಕೋಟೆ ಹೋಬಳಿ, ಮಹದೇವಪುರ ಗ್ರಾಮದ ವ್ಯಾಪ್ತಿಗೆ ಸೇರಿದ ಕೆಲವೊಂದು ಸರ್ಕಾರಿ ಹಳ್ಳ ಪರಂಪೋಕ್ ಜಮೀನುಗಳಲ್ಲಿ ಸರ್ಕಾರದ ಬೋರ್ಡ್ ನ್ನು ಯಾವುದೋ ರಾಜಕೀಯ ಪ್ರೇರಿತವಾಗಿ ಬೋರ್ಡ್ ನ್ನು (ಹೂಣಿದ್ದು) ಹಾಕಿರುರುತ್ತಾರೆ. ಆ ಜಮೀನು ಮಾಡುವಂತವರು ಬೋವಿ ಸಮುದಾಯದ ವಿಧವೆ ಯಾರು ಅಂತವರ ಮೇಲೆ ಜಮೀನು ಸಾಗುವಳಿ ಮಾಡುತ್ತಿರುವ ಕೆಲವರ ಜನರ ಜಮೀನುಗಲ್ಲಿ ಬೋರ್ಡ್ ನ್ನು ಹಾಕಿರುವುದನ್ನು ವಿರೋಧಿಸಿ,ಮಾನ್ಯ ತಹಸೀಲ್ದಾರ್ ತೆರವು ಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಲ್ಲಿ ತಾಲೂಕು ಕಚೇರಿಯ ಮುಂದೆ ಸರ್ಕಾರದ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ದ ಧರಣಿ ಹೋರಾಟ ಮಾಡಲಾಗುವುದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭೀಮಪ್ಪ, ದೇವೇಂದ್ರಪ್ಪ, ಬಣಕಾರ್ ಬಸವರಾಜ್, ಲಕ್ಷ್ಮಿ, ಮಂಜುನಾಥ್, ಉಮೇಶ್ ನಾಯ್ಕ್, ಇನ್ನೂ ಮುಂತಾದವರು ಭಾಗವಹಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ.ಬಿ.ಸಾಲುಮನೆ.ಕೂಡ್ಲಿಗಿ.