ಬೇರೆ ರಾಜ್ಯದವರ ಗ್ರಾನೈಟ್ ಕಲ್ಲು ತೆಗೆದು ಕೊಳ್ಳಬೇಡಿ – ಕರವೇ.
ಇಲಕಲ್ಲ ಜು.22

ಬೇರೆ ಬೇರೆ ರಾಜ್ಯಗಳಿಂದ ಬಂದು ಇಳಕಲ್ ನಗರದಲ್ಲಿ ಠಿಕ್ಕಾಣಿ ಹೂಡಿ ಗ್ರಾನೈಟ್ ಕಲ್ಲುಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಮಳಿಗೆಗಳು (ಶೋರೂಮ್) ಕುರಿತು ಚೆಕ್ ಪೋಸ್ಟ ಮಾಡುವುದು ಮತ್ತು ವ್ಯವಹಾರದಲ್ಲಿ ಗ್ರಾಹಕರಿಗೆ ಮಾಡುತ್ತಿರುವ ಮೋಸವನ್ನು ತಡೆ ಗಟ್ಟುವಂತೆ ರಾಜ್ಯ ಸರಕಾರಕ್ಕೆ ಟಿ.ಎ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಇಳಕಲ್ ಮತ್ತು ಹುನಗುಂದ ತಾಲೂಕಾ ಘಟಕದ ವತಿಯಿಂದ ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ತಮಿಳುನಾಡು, ತೆಲಂಗಾಣ, ಗುಜರಾತ,ರಾಜಸ್ಥಾನ, ಓಡಿಸಾ,ರಾಜ್ಯಗಳಿಂದ ಇಳಕಲ್ ಮತ್ತು ಹುನಗುಂದಕ್ಕೆ ಬರುವ ಕಲ್ಲಿನ ವಾಹನಗಳಿಗೆ ಬೆರಳೆಣಿಕೆ ಯಷ್ಟೆ ಬಿಲ್ಲು ಇದ್ದು ಉಳಿದ ನೂರಾರು ಕಲ್ಲು ತುಂಬಿ ಕೊಂಡು ಬರುವ ವಾಹನಗಳಿಗೆ ಯಾವುದೇ ಬಿಲ್ಲು ಇರುವುದಿಲ್ಲ.ಗ್ರಾಹಕರಿಗೆ ಜಿ.ಎಸ್.ಟಿ ೧೮% ರಷ್ಟು ಬಿಲ್ಲಿಗೆ ಹೆದರಿ ಬಿಲ್ಲು ಇಲ್ಲದೆ ಗ್ರಾನೈಟ್ ಕಲ್ಲುಗಳನ್ನು ರಾತ್ರಿ ಲೋಡ್ ಮಾಡಿ ಕಳಿಸುತ್ತಿರುವುದ ರಿಂದ ಸರಕಾರಕ್ಕೆ ಕಟ್ಟಬೇಕಾದ ರಾಜಧನ ತೆರಿಗೆಯೂಲ್ಲೂ ಮತ್ತು ಅಳತೆಯಲ್ಲೂ ಮೋಸ ಮಾಡುತ್ತಾರೆ, ಇನ್ನಿತರ ಹಲವಾರು ಆರೋಪಗಳ ಪಟ್ಟಿಯನ್ನೆ ತಹಶೀಲ್ದಾರರಿಗೆ ಸಲ್ಲಿಸಿದರು.ಇಳಕಲ್ ತಾಲೂಕಾ ಕರವೇ ಅಧ್ಯಕ್ಷ ಮಹಾಂತಗೌಡ ವಂಕಲಕುಂಟಿ ಮಾತನಾಡಿ ಬೇರೆ ರಾಜ್ಯಗಳಿಂದ ಬಂದಿರುವವರ ಹತ್ತಿರ ಕಲ್ಲುಗಳನ್ನು ತೆಗೆದು ಕೊಳ್ಳಬೇಡಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಕಲ್ಲು (ಶೋರೂಮ್) ದವರು ಸರಕಾರಕ್ಕಿಂತ ಭ್ರಷ್ಟಾಚಾರದಲ್ಲಿ ನಾವೇನು ಕಡಿಮೆ ಎನ್ನುವ ಹಾಗೆ ಕನ್ನಡ ಜನತೆಯನ್ನು ಮೋಸ ಮಾಡುತ್ತಾರೆ ಎಂದು ಹೇಳಿದರು.ಹಾಗೆ ಹುನಗುಂದ ತಾಲೂಕು ಕರವೇ ಅಧ್ಯಕ್ಷ ರೋಹಿತ ಬಾರಕೇರ ಮಾತನಾಡಿದರು.ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ ಸತೀಶ್ ಕೂಡಲಗಿ ಅವರು ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳಿಸುವುದಾಗಿ ಹೇಳಿದರು.ಇಳಕಲ್ ನಗರಘಟಕ ಕರವೇ ಅಧ್ಯಕ್ಷ ಅಶೋಕ ಪುಜಾರಿ,ಯುವ ಘಟಕದ ಅಧ್ಯಕ್ಷ ಸಾಗರ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಾಹೀರ ಸಂಗಮಕರ, ಸಲಿಂ ಜರದಾರಿ ಇಳಕಲ್ ತಾಲೂಕಾ ಪ್ರಧಾನ ಕಾರ್ಯದರ್ಶಿ, ಹುಸೇನ ಸಂಧಿಮನಿ, ಮಂಜುನಾಥ ವಡ್ಡರ, ರವಿ ಕೊಪ್ಪದ, ಕೀರಣ ವಡ್ಡು, ಮಲ್ಲಪ್ಪ ಗೋರೆಬಾಳ, ಶೋಯಲ್ ಸುತಾರ, ಸಂಗಮೇಶ ಗೌತಗಿ, ದಶರಥ ವಡ್ಡರ, ಅಶೋಕ ಬೆವಿನಮಟ್ಟಿ, ಮಹಿಳೆಯರಾದ ಜ್ಯೋತಿ ಶಿಲವಂತರ, ಮಂಜುಳಾ ಅಂಗಡಿ, ಕಸ್ತೂರಿಬಾಯಿ ಮೆರವಾಡಿ, ಕಲ್ಪನಾ ಗಜೇಂದ್ರಗಡ, ಶೋಭಾ ಮುರನಾಳ, ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ.ಇಲಕಲ್ಲ.