ನಿಜ ಸುಖಿ ಶರಣರಾದ ಹಡಪದ ಅಪ್ಪಣ್ಣ ನವರ ವಿಚಾರಗಳು ಸಮಾಜಕ್ಕೆ ಬೇಕು – ತಹಶೀಲ್ದಾರ್ ರೇಣುಕಾ.

ಕೂಡ್ಲಿಗಿ ಜು.22

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ತಾಲೂಕಾ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗೈರ್ ಹಾಜರಾಗಿರುವುದಕ್ಕೆ ಫೋನ್ ಕರೆ ಮೂಲಕ ಅಧಿಕಾರಿಗಳಿಗೆ ಸೂಚನೆ ನೋಟಿಸ್ ನೀಡುವುದಾಗಿ ತರಾಟೆ ತೆಗೆದು ಕೊಂಡರು. ಭಾನುವಾರ ರಂದು ಮಹಾ ಶರಣರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣನವರು 12 ನೇ. ಶತಮಾನದ ಬಸವಾದಿ ಶರಣರ ಒಡನಾಡಿಯಾಗಿ ಬಾಳಿದ ಶರಣ ಹಡಪದ ಅಪ್ಪಣ್ಣನವರು ಇವರು ಬಸವಣ್ಣನವರ ಘನತೆಯನ್ನು ತಿಳಿದು ಕಾಯ, ವಾಚ, ಮನಸ್ಸಿನಿಂದ ಸೇವೆ ಮಾಡುವ ಬಸವಣ್ಣನವರನ್ನು ಅರಿತ ಅಪ್ಪಣ್ಣನವರು ಅನುಭವ ಮಂಟಪದಲ್ಲಿ ಆಪ್ತ ಕಾರ್ಯದರ್ಶಿ ಯಾಗಿದ್ದರು.

ಇವರ ಹುಟ್ಟೂರಾದ ಕರ್ನಾಟಕದ ವಿಜಾಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಚನ್ನವೀರಪ್ಪ ದೇವಕಮ್ಮನ ಮಗ ಹಡಪದ ಅಪ್ಪಣ್ಣನವರು ಜನಿಸಿದರು. ಇವರನ್ನು ಬಸವಣ್ಣನ ಕೊನೆಯ ಕಾಲದವರೆಗೂ ಒಡನಾಡಿಯಾಗಿ ಆಪ್ತ ಸೇವಕನಾಗಿ ಹಡಪದ ಅಪ್ಪಣ್ಣನನ್ನು “ನಿಜ ಸುಖಿ ಅಪ್ಪಣ್ಣ” ಎಂದು ಶರಣರೆಲ್ಲರೂ ಕರೆಯುತ್ತಿದ್ದರು. ಇವರು ಕ್ಷೌರಿಕ ವೃತ್ತಿ ಮಾಡುತ್ತಿದ್ದವರೆಲ್ಲ ಹಡಪದ ಅಪ್ಪಣ್ಣನವರನ್ನು ‘ನಮ್ಮ ಮೂಲ ಪುರುಷನೆಂದು’ ಹೇಳುತ್ತಾರೆ, ಹಾಗೆ ಶೋಷಿತ ವರ್ಗಗಳಿಗೆ ಚಾಟಿ ಏಟಿನಂತೆ ಅನೇಕ ವಚನಗಳನ್ನು ರಚಿಸಿರುವುದು ಉಂಟು, ಹಡಪದ ಅಪ್ಪಣ್ಣನವರು ಆಚಾರ ವಿಚಾರಗಳು ವೈರಾಗ್ಯವಾಗಿದ್ದವು. ಅನೇಕ ವಚನಗಳನ್ನು ರಚಿಸಿದ್ದು ಉಂಟು ಮಾನ್ಯ ತಹಶೀಲ್ದಾರ್ ರೇಣುಕಮ್ಮ ಇವರು ಶಿವ ಶರಣರ ವಚನಕಾರರ ಮಹಾನ್ ಸಮಾಜ ಸೇವಕರ ಜಯಂತಿಗಳನ್ನು ಸರ್ಕಾರದ ಆದೇಶದಂತೆ ಪ್ರತಿಯೊಬ್ಬರಿಗೂ ಇಂಥಹ ಮಹಾನ್ ಶರಣರ ಜಯಂತಿ ಸಾರ್ವಜನಿಕರಿಗೂ ಆದರ್ಶ ಮಾರ್ಗ ಗಳಾಗಿರಬೇಕು ಈಗಿನ ನಾಗರಿಕತೆಗೆ ಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಡಪ ಸಮುದಾಯದ ಮುಖಂಡರಾದ ಹಾರ್ಕಬಾವಿ ಕೊಟ್ರೇಶ್ ರವರು ಹಡಪದ ಅಪ್ಪಣ್ಣನವರ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಮಲ ಸಿದ್ದಪ್ಪ, ತಾಲೂಕು ಅಧ್ಯಕ್ಷರಾದ ಚೌಡಪ್ಪ ತಿಪ್ಪೇಸ್ವಾಮಿ, ಹಾರ್ಪಾಲ್ ಕರಿಯಪ್ಪ ಆರ್ ಫೈವ್ ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಿ ಕೊಟ್ರೇಶ್, ರಾಜೇಶ್ವರಿ ಮಂಜುನಾಥ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಎಚ್ ಕೊಟ್ರೆಶ್, ಶಿವರಾಜ್ ಇನ್ನು ಮುಂತಾದವರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ ಬಿ. ಸಾಲುಮನೆ ಕೂಡ್ಲಿಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button