ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆ ಮತ್ತು ಆರೋಗ್ಯ ರಕ್ಷಾ ವಿಮಾ ಕ್ಲೈಮ್ ವಿತರಣಾ ಕಾರ್ಯಕ್ರಮ.
ಕೊಟ್ಟೂರು ಜು.22

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಶ್ರೀ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ದಿನಾಂಕ 2024 ರಂದು ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದು, ಈ ಸಭೆಯನ್ನು ದೀಪ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮ ಕುರಿತು ಮೊದಲಿಗೆ ವಿಜಯನಗರ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಮಾನ್ಯ ಶ್ರೀ ಸತೀಶ್ ಶೆಟ್ಟಿಯವರು ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಯೋಜನೆಯು ಇದುವರೆಗೆ 1823 ಮದ್ಯವರ್ಜನ ಶಿಬಿರಗಳು ಇದುವರೆಗೆ ರಾಜ್ಯದಲ್ಲಿ ನಡೆದಿವೆ. ಈ ಶಿಬಿರಕ್ಕೆ ಶಿಬಿರಾರ್ಥಿಗಳನ್ನು ಆಯ್ಕೆಯ ಮಾಡುವ ಪ್ರಕ್ರಿಯೆಯ ಬಗ್ಗೆ ಮತ್ತು ಶಿಬಿರಾರ್ಥಿಗಳನ್ನು ಕಳುಹಿಸಿ ಕೊಡುವ ಬಗ್ಗೆ ಮಾಹಿತಿಯನ್ನು ತಿಳಿಸಿದರು.

ಈ ಶಿಬಿರದಿಂದ ಮದ್ಯ ವ್ಯಸನೆ ಮಾಡುವ ಸದಸ್ಯರು ಈ ಶಿಬಿರಕ್ಕೆ ಸೇರಿಸಿ ಮದ್ಯ ವ್ಯಸನ ದಿಂದ ಮುಕ್ತರಾಗಬೇಕು. ಅವರ ಕುಟುಂಬಗಳು ಕೂಡ ಒಳ್ಳೆಯ ರೀತಿಯ ಸ್ಥಾನಮಾನ ಸಿಗಬೇಕು ಮತ್ತು ಕುಟುಂಬ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು. ಮತ್ತು ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಜನ ಜಾಗೃತಿ ವೇದಿಕೆಯ ಯೋಜನಾ ಅಧಿಕಾರಿಗಳಾದ ಶ್ರೀ ನಾಗೇಶ್ ರವರು ಈ ಮದ್ಯವರ್ಜನ ಶಿಬಿರವನ್ನು ಯಶಸ್ವಿ ಮಾಡಲು ಗಣ್ಯರ ಸಹಕಾರ ಅತೀ ಮೂಖ್ಯವಾಗಿರುತ್ತದೆ. ಮದ್ಯವರ್ಜನ ಶಿಭಿರದ 7 ದಿನಗಳ ನಡೆಯಲಿದ್ದು, ಇದಕ್ಕೆ ಬೇಕಾದ ಪೂರ್ವ ತಯಾರಿಗಳ ಬಗ್ಗೆ ಕಮಿಟಿ ರಚನೆ ಮಾಡಿ ಅವರಿಗೆ ಜವಾಬ್ದಾರಿಗಳನ್ನು ನೀಡಿದರು.

ಮತ್ತು ದಿನಾಂಕ:20.08.2024 ರಂದು ನಡೆಯುವ ಶಿಬಿರಕ್ಕೆ ಎಲ್ಲಾ ಗಣ್ಯರು ಮುಖಂಡರುಗಳು ಸೇರಿ ಯಶಸ್ವಿ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಮಲ್ಲ ನಾಯಕನಹಳ್ಳಿಯ ದೊಡ್ಡ ರಾಮಣ್ಣ, ಮೈದೂರು ಶಿವಣ್ಣ, ವಿವೇಕ, ಮರಿಸ್ವಾಮಿ, ತೋಟದ ರಾಮಣ್ಣ, ಉಮೇಶ್, ದೇವರಮನೆ ಕೊಟ್ರೇಶ್, ದೇವರಮನೆ ಕರಿಯಪ್ಪ, ಭರಮಣ್ಣ, ಬ್ರಹ್ಮೇಶ್, ರಮೇಶ್,ಅರಮನೆ ಮಲ್ಲಿಕಾರ್ಜುನ, ಎಮ್ ಬಿ ಶೇಖರಯ್ಯ,ಈಶ್ವರಯ್ಯ, ಸಿದ್ದಯ್ಯ,ಬಸವರಾಜು ಅಡವಿಹಳ್ಳಿ, ನೇತ್ರಾವತಿ, ಪ್ರಭಾಕರು, ಚನ್ನಪ್ಪ, ಚನ್ನಬಸಪ್ಪ, ನಾಗರಾಜು, ಗುರುಸ್ವಾಮಿ, ಮಹಾಂತೇಶ್, ಅಂಬರೇಶ್, ಸತೀಶ್ ಮತ್ತು ಸ್ವ ಸಹಾಯ ಸಂಘದ ಎಲ್ಲಾ ಸದಸ್ಯರು ಮತ್ತು ಗಣ್ಯರು ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಯೋಜನೆಯಿಂದ ಮಂಜೂರು ಆದ 42 ಸದಸ್ಯರಿಗೆ ರೂ.49200/- ಮೊತ್ತದ ಆರೋಗ್ಯ ರಕ್ಷಾ ಕ್ಲೈಮ್ ನ ಮಂಜೂರಾತಿ ಪತ್ರವನ್ನು ಕಾರ್ಯಕ್ರಮಕ್ಕೆ ಬಂದ ಗಣ್ಯರಿಂದ ವಿತರಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ.ಕೊಟ್ಟೂರು.