ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದಿಂದ – ಆಕ್ರೋಶ.
ಹೊಸಪೇಟೆ ನ.21

ಕೆ.ಕೆ.ಆರ್.ಡಿ.ಬಿ ಯೋಜನೆಯ ಅನುದಾನದಲ್ಲಿ ವಿಜಯನಗರ ಜಿಲ್ಲೆಗೆ 348 ಕೋಟಿ ಬಂದಿದೆ. ಇದರಲ್ಲಿ ಜಿಲ್ಲೆಯ ಕೇಂದ್ರ ಸ್ಥಾನ ಹೊಸಪೇಟೆ ತಾಲೂಕಿಗಿಂತ ಇತರೆ ತಾಲೂಕುಗಳಿಗೆ 60 ರಿಂದ 70 ಕೋಟಿ ಹಂಚಿಕೆಯಾಗಿದೆ. ವಿಜಯನಗರ ಕ್ಷೇತ್ರದ ಹೊಸಪೇಟೆಗೆ ಕೇವಲ 22 ಕೋಟಿ ಹಂಚಿಕೆಯಾಗಿದ್ದು. ಅನ್ಯಾಯವಾಗಿರೋದು ಎದ್ದು ಕಾಣುತ್ತಿದೆ. ಕೇವಲ 22 ಕೋಟಿ ಕೊಟ್ಟಿರುವುದು ಮಲತಾಯಿ ಧೋರಣೆ ತೋರಿಸಲಾಗಿದೆ ಮುಂದಿನ ದಿನಗಳಲ್ಲಿ ಹೊಸಪೇಟೆಗೆ ಬಂದ್ ಕರೆ ಕೊಡಲಾಗುವುದು ಎಂದು ಸರ್ಕಾರಕ್ಕೆ ಆಕ್ರೋಶ ಹೊರ ಹಾಕಿದರು.ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದಿಂದ ನಗರದ ಚರ್ಚ್ ಕಾಂಪ್ಲೆಕ್ಸ್ ನಲ್ಲಿರುವ ಕರ್ನಾಟಕ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾಮಾಜಿಕ ಹೋರಾಟಗಾರರಾದ ಎಸ್.ಎ ಖಾದ್ರಿ ಜಿಲ್ಲೆಯ ಕೇಂದ್ರ ಸ್ಥಾನ ವಾಗಿರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡಬೇಕಾಗಿತ್ತು. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಹಲವಾರು ಸಂಘಟನೆಗಳೊಂದಿಗೆ ಜಿಲ್ಲೆಗೆ ಬಂದು ಕರೆ ಕೊಟ್ಟು ಪ್ರತಿಭಟಿಸ ಲಾಗುವುದು ಎಂದರು.ವಿಜಯನಗರ ಕ್ಷೇತ್ರದ ಜನರು ಶಾಸಕ ಗವಿಯಪ್ಪ ನವರನ್ನು ಜನಗಳು 39,966 ಬಹುಮತ ಗಳಿಂದ ಗೆಲ್ಲಿಸಿದ್ದಾರೆ. ಅವರಿಗೆಲ್ಲಾ ಅನ್ಯಾಯ ಮಾಡುತ್ತಿದ್ದೀರಿ. ಈ ತಾಲೂಕಿಗೆ ಹೆಚ್ಚಿನ ಅನುದಾನ ಏನಾದರೂ ಕೊಡದೆ ಹೋದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟವನ್ನು ಹಮ್ಮಿ ಕೊಳ್ಳಲಾಗುವುದು ಎಂದು ಅಸಮಾಧಾನ ಹೊರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಜಮೀರ್ ಖಾನ್ ರವರು ಉಸ್ತುವಾರಿ ವಹಿಸಿ ಕೊಂಡಾಗಿನಿಂದಲೂ ಎರಡು ತಿಂಗಳಿಗೆ ಮೂರು ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಬರುತ್ತಿದ್ದು ಕೇವಲ ಸರ್ಕಾರಿ ಕಾರ್ಯಕ್ರಮಗಳಾದ ಉತ್ಸವಗಳಲ್ಲಿ ಭಾಗಿಯಾಗಲು ಮಾತ್ರ ಸೀಮಿತವಾಗಿದ್ದಾರೆ. ಜನರ ಸಮಸ್ಯೆಯನ್ನು ಒಂದು ದಿನಕ್ಕೂ ಆಲಿಸಿಲ್ಲ ಇದರಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಕೂಡಲೇ ನೀವೇ ಮುಂದೆ ನಿಂತು ಜಿಲ್ಲೆಗೆ ಮತ್ತು ತಾಲೂಕಿಗೆ ಹೆಚ್ಚಿನ ಅನುದಾನವನ್ನು ತರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಕಾರನ್ನು ಜಿಲ್ಲೆಯ ಗಡಿ ಭಾಗದಲ್ಲೇ ನಿಲ್ಲಿಸಿ ಹೊರ ಹಾಕುವ ಪ್ರಸಂಗ ನಡೆಯುತ್ತದೆ ಎಂದು ಎಚ್ಚರಿಸುತ್ತಾ. ತಪ್ಪಿದ್ದಲ್ಲಿ ಸರ್ಕಾರ ಜಿಲ್ಲೆಯ ಉಸ್ತುವಾರಿಯನ್ನು ವಾಪಸ್ ಪಡೆಯುವುದು ಮೇಲು. ಪಕ್ಕದ ಜಿಲ್ಲೆಯವರಿಗೆ ಆ ಸ್ಥಾನವನ್ನು ಕೊಟ್ಟು ಅಭಿವೃದ್ಧಿಗೆ ಹೊತ್ತು ಕೊಡಬೇಕು ಎಂದ ಆಗ್ರಹಿಸಿರು. ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ರಾಜ್ಯ ಸಂಘಟನಾ ಕಾರ್ಯಧ್ಯಕ್ಷರಾದ ಗಂಗಾಧರ ಮಾತನಾಡಿ ನೂತನವಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಕೇವಲ 22 ಕೋಟಿ ಕೊಟ್ಟಿದ್ದಾರೆ ಎಂದರೆ ಇಲ್ಲಿ ದೊಡ್ಡ ಲೋಪವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ತಮ್ಮ ಕೆಲಸಗಳಿಗಾಗಿ ಜನ ಕೇಂದ್ರ ಸ್ಥಾನಕ್ಕೆ ಬರುತ್ತಾರೆ. ಹಾಗಾಗಿ ಹೆಚ್ಚಿನ ಅಭಿವೃದ್ಧಿಯ ಅಗತ್ಯತೆ ಇದೆ. ಸ್ವಪಕ್ಷದ ಶಾಸಕರ ಜಿಲ್ಲೆಗೆ ಅಭಿವೃದ್ಧಿಗಾಗಿ ಇಷ್ಟು ಕಡಿಮೆ ಅನುದಾನ ಕೊಟ್ಟರೆ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯವಾಗುತ್ತದೆ. ಜನರು ಕಾಂಗ್ರೆಸ್ ಅನ್ನು ನಂಬಿ ಓಟು ಕೊಟ್ಟಿದ್ದಾರೆ ಆದರೆ ಸರ್ಕಾರದಿಂದ ಇಂದು ಜಿಲ್ಲೆಗೆ ತುಂಬಾ ಅನ್ಯಾಯವಾಗುತ್ತಿದೆಸಕ್ಕರೆ ಕಾರ್ಖಾನೆಗಾಗಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೇವೆ ಮಾಡುತ್ತೇವೆ ಎಂದು ಹೇಳಿ ಇಷ್ಟು ಕಡಿಮೆ ಹಣ ಕೊಟ್ಟಿದ್ದಾರೆ. ಇನ್ನು ಸಕ್ಕರೆ ಕಾರ್ಖಾನೆ ಮಾಡಲು ಸಾಧ್ಯವಾ ಎನ್ನುವಂತ ಪ್ರಶ್ನೆ ನಮ್ಮಲ್ಲಿ ಕಾಡುತ್ತದೆ. ಈ ಸರ್ಕಾರ ರೈತರ ಪರವಾಗಿ ನಿಲ್ಲುತ್ತದೆ ಎನ್ನುವ ಗ್ಯಾರಂಟಿ ಏನು? ಜಿಲ್ಲೆ ಅಭಿವೃದ್ಧಿಗಾಗಿ 100 ರಿಂದ 150 ಕೋಟಿ ಅವಶ್ಯಕತೆ ಇದೆ ಇನ್ನೂ ಹಲವಾರು ಕಚೇರಿಗಳ ಕಟ್ಟಡ ಕಟ್ಟಲು ಬಾಕಿ ಇದೆ ಸರ್ಕಾರ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ನೀಡಬೇಕು ಇಲ್ಲದೆ ಹೋದರೆ ಹೊಸಪೇಟೆಗೆ ಬಂದ್ ಕರೆ ಕೊಡಲಾಗುವುದು ಎಂದು ಎಚ್ಚರಿಸಿದರು.ಸುದ್ದಿ ಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘದ ಎಂ.ರತ್ನ ಜಿಲ್ಲಾಧ್ಯಕ್ಷರು ಮಹಿಳಾ ಘಟಕ, ಎಂ ದ್ಯಾಮಪ್ಪ ಹೊಸಪೇಟೆ ತಾಲೂಕು ಅಧ್ಯಕ್ಷರು , ಗಾದಿ ಲಿಂಗಪ್ಪ, ಶಿವಪ್ಪ, ನೀಲಪ್ಪ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ