ವಯೋವೃದ್ಧರ ಆರೋಗ್ಯ ಆರೈಕೆ ರಕ್ಷಣೆ ನಮ್ಮೆಲ್ಲರ – ಆದ್ಯ ಕರ್ತವ್ಯ.
ಹೊನ್ನಾಕಟ್ಟಿ ಜು.23

ಹೊನ್ನಾಕಟ್ಟಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹ ಯೋಗದಲ್ಲಿ “ರಾಷ್ಟ್ರೀಯ ವಯೋವೃದ್ಧರ ಆರೋಗ್ಯ ಕ್ಷೇಮಾಭಿವೃದ್ಧಿ ಕಾರ್ಯಕ್ರಮ” ಅಡಿಯಲ್ಲಿ “ವಯೋವೃದ್ಧರ ಆರೋಗ್ಯ ಆರೈಕೆ” ಜಾಗೃತಿ ಆಯೋಜಿಸಲಾಗಿತ್ತು. ಗ್ರಾಮದ ಶತ ವರ್ಷ ಪೂರೈಸಿದ ಹಿರಿಯ ಚೇತನ ಶ್ರೀ ಶಿವನಪ್ಪ ವೆಂಕಪ್ಪ ಲೊಂಡವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿಯವರು, “ವೃದ್ಧರ ಹಿರಿಯ ಚೇತನಗಳ ಆರೋಗ್ಯ ರಕ್ಷಿಸೋಣ” “ಜೀವನ ಮಟ್ಟ ಸುಧಾರಣೆಗೆ ಸಹಕರಿ ಸೋಣ” ಹಾಗೂ ಆರೋಗ್ಯ ಇಲಾಖೆ ಸೌಲಭ್ಯಗಳನ್ನು ಸದುಪಯೋಗ ಪಡೆದು ಕೊಳ್ಳಬೇಕು. ಎಂಬ ಘೋಷಣೆಯೊಂದಿಗೆ ಗ್ರಾಮದ 60 ವರ್ಷ ಮೇಲ್ಪಟ್ಟವರು ಹಿರಿಯ ನಾಗರಿಕರ ಹಿರಿಯ ಚೇತನಗಳು ವಯೋವೃದ್ಧರು, ಇವರ ಆರೋಗ್ಯ ರಕ್ಷಣೆ ಅವಶ್ಯಕ ವಯೋವೃದ್ಧರಿಗೆ ಅಶಕ್ತತೆ ಅಸ್ವಸ್ಥತೆ ವಯೋಸಹಜ ಇದನ್ನು ತಡೆಯುವುದೇ ನಮ್ಮ ಉದ್ದೇಶ, ಮಧುಮೇಹ, ರಕ್ತದೊತ್ತಡ, ಕಣ್ಣಿನ ದಂತ ಸಮಸ್ಯೆ, ಹೃದಯ ಸಂಬಂಧಿ ಕೀಲು ಮತ್ತು ಮೂಳೆ ತೊಂದರೆಗಳು, ಶ್ವಾಸಕೋಶ ತೊಂದರೆ ಮೂತ್ರ ಜನಾಕಾಂಗಗಳ ತೊಂದರೆ ಮರೆವು ಮಾನಸಿಕ ಇತರ ತೊಂದರೆಗಳು ಇತರೆ ಆರೋಗ್ಯದ ಸಮಸ್ಯೆಗಳಿರುತ್ತವೆ ವಯೋವೃದ್ಧರು ಆರೋಗ್ಯ ರಕ್ಷಣೆಗೆ ಸಮಸ್ಯೆಗಳಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಉನ್ನತ ಆಸ್ಪತ್ರೆಯಲ್ಲಿ ವಯೋವೃದ್ಧರ ಆರೋಗ್ಯ ಆರೈಕೆ ಚಿಕಿತ್ಸೆ ಔಷಧೋಪಚಾರ ಸಲಹೆ ಉಚಿತವಾಗಿರುತ್ತದೆ. ಹಿರಿಯ ಚೇತನಗಳಿಗೆ ಆರೋಗ್ಯ ರಕ್ಷಣೆ ಮಾಹಿತಿ ನೀಡಿದರು. ಹಿರಿಯ ಚೇತನಗಳ ವಯೋವೃದ್ಧರ ಆರೋಗ್ಯ ಆರೈಕೆ ರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಚೇತನ ವಯೋವೃದ್ಧರಾದ, ಹನಮಂತ ಮಾನೋಜಿ ಚವ್ಹಾಣ, ಪರಸಪ್ಪ ಚವ್ಹಾಣ, ಭೀಮಪ್ಪ ಬರ್ಮಪ್ಪ ಹಿರೇಹಾಳ, ಬಸಪ್ಪ ದ್ಯಾಮಣ್ಣ ದಮ್ಮೂರ, ಶಂಕ್ರೆಪ್ಪ ಗುರಪ್ಪ ಬಡಿಗೇರ, ಬಾಬಣ್ಣ ಭೀ ಸೂರ್ಯವಂಶಿ, ಹನುಮಂತ ದಮ್ಮೂರ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಯುವಕರು ಭಾಗವಹಿಸಿದ್ದರು.