“ನಗುವಿನ ಸಿರಿ ನೆನಪು ಸವಿ”…..

ಮನ ಅರಿ,
ಖುಷಿ ಇರಿ,
ಹೊಟ್ಟೆ ಉರಿ ಬೇಡ
ಸಸಿಗೆ ನೀರುಸುರಿ
ಸಾಧನೆ ಏಣಿ ಎರಿ
ದೇವನ ಕರೆ
ಆಗಬೇಡ ಕುರಿ
ಹಿರಿ ಮುಂದೆ ನೀ ಕಿರಿ
ಸದಾ ತಲೆಬಾಗಿ ಜೀವನಮಾನದಲಿ
ಸಾಧನೆಯ ಗರಿ ಇರಲಿ
ಏರು ಗಿರಿ
ನಯವಂಚಕರ ಜರಿ
ಗುಣದಲಿ ಆಗಿ ಧರಿ
ನರಿ ಬುದ್ಧಿ ಬೇಡ
ಜೀವನ ಪರಿ
ಸೈದ್ದಾಂತಿಕವಿರಲಿ
ಸುವಚನ ಬರಿ
ದುಃಖ ಮರಿ
ಬದುಕಿನಲಿ ವರಿ ಬೇಡ
ಯಾವಾಗಲೂ ಸರಿ ಇರಿ
ನಗುವಿನ ಸಿರಿ
ನೆನಪು ಸವಿ
ಹಿತನುಡಿ ಸುರಿ
ಹರಿ ಹರ ಸ್ಮರಿಸಿ
ಹಿರಿಯರಿಗೆ ಗೌರವ ಕೊಡಿ.
ಅಕ್ಷರ ಸ್ನೇಹಿ
✍️ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟೆ