ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮನವಿಗೆ – ಸ್ಪಂದಿಸಿದ ಎಸ್ಪಿ ಅವರು.
ಹಳೆ ನೆಲುಡಿ ಜು.25





ಕರ್ನಾಟಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಕುರುಗೋಡು ತಾಲೂಕಿನ ಹಳೆ ನೆಲುಡಿ ಗ್ರಾಮದ ದಲಿತ ನೊಂದ ಮಹಿಳೆಗೆ ಸುಮಾರು ದಿನಗಳಿಂದ ಗಂಡ ಅತ್ತೆ ಮಾವ ಮೈದುನ ಮನ ಬಂದಂತೆ ಒಡೆಯುವುದು ಬಡೆತಕ್ಕೆ ತಾಳಲಾರದೆ ಜೀವನವೇ ಸಾಕು ಎಂದು ಸಾಯುವುದಕ್ಕೆ ಪ್ರಯತ್ನಿಸಿದಂತ ಈ ಮಹಿಳೆಗೆ ದೈರ್ಯ ತುಂಬಿ ನಮ್ಮ ಸಂಘಟನೆಯ ವತಿಯಿಂದ ನ್ಯಾಯವನ್ನು ಒದಗಿಸಿ ಕೊಡುತ್ತೇವೆ ಧೈರ್ಯಗುಂದ ಬೇಡ ನಿನ್ನ ತಂಟೆಗೆ ಮೈದುನ ಅತ್ತೆ ಮಾವ ಬರಲಾರದಂತೆ ಪೊಲೀಸರ ಕಡೆಯಿಂದ ನ್ಯಾಯ ದೊರಕಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ ಮೇಲೆ ಈ ಮಹಿಳೆಗೆ ಪೊಲೀಸರ ಮೇಲೆ ನಂಬಿಕೆ ಕಳೆದು ಕೊಂಡಿದ್ದಳು ಏಕೆಂದರೆ ಸುಮಾರು ಸಾರಿ ಕುರುಗೋಡು ಪೊಲೀಸ್ ಠಾಣೆಗೆ ದೂರು ಕೊಟ್ಟರು ಸಹ ಪೊಲೀಸರು ಸರಿಯಾಗಿ ಕ್ರಮವು ಕೈಗೊಳ್ಳಲಾರದೆ ಇದ್ದರಿಂದ ಪೊಲೀಸರೇನೂ ಮಾಡುತ್ತಾರೆ ಎಂದು ಗಂಡ ಮೈದುನ ಅತ್ತೆ ಮಾವ ಇವರಿಗೆ ಪೊಲೀಸ್ ಸ್ಟೇಷನ್ ಗೆ ಹೋಗಿ ಬರುವುದು ಸರಳವಾಗಿತ್ತು ಇದರಿಂದ ಅವರಿಗೆ ಭಯ ಭೀತಿ ಇಲ್ಲದೆ ಇದ್ದರಿಂದ ನಮ್ಮ ಸಂಘಟನೆ ನಿಯೋಗ ದಿನಾಂಕ 23/.07./2024 ರಂದು ಕುರುಗೋಡು ಪೊಲೀಸ್ ಠಾಣೆಗೆ ಹೋಗಿ ಆ ಸಮಯದಲ್ಲಿ ಕುರುಗೋಡು ಪೊಲೀಸ್ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಗಳಾದ ಡಾ ಶೋಭಾ ರಾಣಿ ಐಪಿಎಸ್ ಇವರು ಕುರುಗೋಡ ಪೊಲೀಸ್ ಠಾಣೆಗೆ ಬರುತ್ತಿದ್ದನ್ನು ಮನಗಂಡು ಸುಮಾರು ದೂರುದಾರರನ್ನು ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಂದು ಹೋಗವರಿಗೆ ಯಾರು ಪೋಲಿಸ್ ಕಾಂಪೌಂಡ್ ಒಳಗಡೆ ಇರಕೂಡದು ಎಂದು ಹೇಳಿ ಸುಮಾರು ಅಮಾಯಕ ದೂರುದಾರರನ್ನು ಅವರಿಗೆ ಭೇಟಿ ಮಾಡಲಿಕ್ಕೆ ಬಿಡಲಿಲ್ಲ ಆವಾಗ ನಾವು ಭೇಟಿ ಮಾಡಲಿಕ್ಕೆ ನಮ್ಮನ್ನು ಸಹ ಪೊಲೀಸರು ಬಿಡಲಾರದ ನಿಮ್ಮ ಕೆಲಸ ತಕ್ಷಣವೇ ಮಾಡಿ ಕೊಡುತ್ತೇವೆ ಆದರೆ ಪೋಲಿಸ್ ವರಿಷ್ಠಾ ಧಿಕಾರಿಗಳು ಎಸ್ಪಿ ಅವರಿಗೆ ನಮ್ಮ ಮೇಲೆ ದೂರು ಕೊಡಬೇಡಿ ಎಂದು ಪೊಲೀಸರು ನಮ್ಮನ್ನು ಮನ ವೊಲಿಸಲಿಕ್ಕೆ ಪ್ರಯತ್ನಸಿದ್ದರು ಆದರೆ ಪೊಲೀಸರ ಮಾತಿಗೆ ಬೆಲೆ ಕೊಡಲಾರದೆ ನೀವು ನಮ್ಮನ್ನು ತಡೆದರೆ ಎಸ್ ಪಿ ಮೇಡಂ ಅವರಿಗೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟೆವು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಿಕ್ಕೆ ಮುಂದಾದಾಗ ಬಿಡಲಾರದೆ ನಮ್ಮನ್ನು ತಡೆ ಹಿಡಿದಿದ್ದರು ಸಹ ಪೊಲೀಸರನ್ನು ಲೆಕ್ಕಿಸಲಾದ ಎಸ್ಪಿ ಮೇಡಮ್ ಅವರಿಗೆ ಈ ಮಹಿಳೆಗೆ ಆಗುತ್ತಿರುವ ಅನ್ಯಾಯವನ್ನು ಸವಿಸ್ತಾರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೇಡಂ ಅವರಿಗೆ ತಿಳಿಸಿದಾಗ ಕೂಡಲೇ ಕುರುಗೋಡು ಪಿಎಸ್ಐ ಅವರಿಗೆ ಕೂಡಲೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನೊಂದ ಈ ಮಹಿಳೆಗೆ ನ್ಯಾಯ ಒದಗಿಸಿ ಕೊಡಲಿಕ್ಕೆ ಸ್ಥಳದಲ್ಲೇ ಆದೇಶ ಮಾಡಿದರು ಈ ಸಂದರ್ಭದಲ್ಲಿ ತೋರಣಗಲ್ ಡಿವೈಎಸ್ಪಿ ಪ್ರಸಾದ್ ಗೋಕಲೆ ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಕೆ ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬಿ ಗೋನಾಳ್ ದಲಿತ ಮುಖಂಡ ರಮೇಶ್ ಮಾವಿನಹಳ್ಳಿ ಇನ್ನಿತರರು ಕಾರ್ಯಕರ್ತರು ಇದ್ದರು.