ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಮಾಲೋಚನೆ ಸಭೆ ಜರುಗಿತು.
ಕಲಕೇರಿ ಜು.26

ತಾಳಿಕೋಟಿ ತಾಲೂಕಿನ ಕಲಕೇರಿ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳು ಶಾಲೆ ಇಂದು ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ ಕಲಕೆರಿಯಲ್ಲಿ 6-8 ನೇ ತರಗತಿ ಬೋಧಿಸುವ ಶಿಕ್ಷಕರ ವಿಷಯವಾರು ಚರ್ಚೆ ಕುರಿತು ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಯಿತು, ಕಾರ್ಯಕ್ರಮದಲ್ಲಿ ಕಲಕೇರಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಸ್ ಎಲ್ ನಾಯ್ಕೋಡಿ & ಅಸ್ಕಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆರ್ ಎಲ್ ನಾಯ್ಕೋಡಿ ಸ್ಥಳೀಯ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಸ್ ಬಿ ಪಡಶೆಟ್ಟಿ, ಎಮ್ ಪಿ ಎಸ್ ಶಾಲೆಯ ಮುಖ್ಯ ಗುರುಗಳಾದ ಶ್ರೀ ಜೆ ಬಿ ಕುಲಕರ್ಣಿ ಹಾಗೂ ಇಂದಿನ ತರಬೇತಿಯನ್ನು ನೀಡಲು ಬಂದಿರುವ ಶ್ರೀ ಎಂ ಆರ್ ಮುಜಾವರ್ ಶ್ರೀ ಬಿ ಎಸ್ ಆಲಾಳಮಠ, ಶ್ರೀ ಪ್ರಕಾಶ್ ದೇಸಾಯಿ , ಶ್ರೀಮತಿ ಎಸ್ ವಿ ಜುಂಜಾ, ಅಸ್ಕಿ ಹಾಗೂ ಕಲಕೇರಿ ಕ್ಲಸ್ಟರ್ ಎಲ್ಲಾ ಶಿಕ್ಷಕರು ಪಾಲ್ಗೊಂಡಿದ್ದರು. ತರಬೇತಿ ಕುರಿತು ಕಲಕೇರಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಸ್ ಎಲ್ ನಾಯ್ಕೋಡಿ ಅವರು ಪ್ರಾಸ್ಥಾವಿಕವಾಗಿ ಮಾತನಾಡಿದರು.

ನಂತರ ಎಲ್ಲಾ ಶಿಕ್ಷಕರು ತಮ್ಮ ತರಗತಿಯಲ್ಲಿರುವ ಸವಾಲುಗಳನ್ನು ಕುರಿತು ಚರ್ಚಿಸಿದರು ತದನಂತರ ಮಕ್ಕಳ ಎದುರಿಗೆ ಪ್ರಾತ್ಯಕ್ಷಿಕ ಪಾಠಗಳನ್ನು ನೀಡಲಾಯಿತು. ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಮಗೆ ಬಂದ ವಿಷಯವನ್ನು ಅತ್ಯಂತ ಮನ ಮುಟ್ಟುವಂತೆ ವಿವರವಾಗಿ ತಿಳಿಸಿದರು. ಪ್ರಯೋಗಗಳ ಮೂಲಕ ವಿಷಯವನ್ನು ವಿವರಿಸಿದರುಎಲ್ಲಾ ಶಿಕ್ಷಕರು ಗುರುಮಾತೆ ಅವರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ ಮನಗೂಳಿ ತಾಳಿಕೋಟೆ.