ಡೆಂಗ್ಯೂ ಜ್ವರ ಪ್ರಕರಣದ ಬಗ್ಗೆ ಜಾಗೃತಿ ವಹಿಸಿ – ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ.
ಕಂಪ್ಲಿ ಜು.25

ಪಟ್ಟಣದಲ್ಲಿ ದಿನೇ ದಿನೇ ಡೆಂಘೀ ಮಲೇರಿಯಾ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು 23 ವಾರ್ಡ್ ಗಳಲ್ಲಿ ಸೊಳ್ಳೆ ನಿವಾರಣ ಔಷಧಿಯನ್ನು ಸಿಂಪಡಿಸುವಂತೆ ಸಂಘಟನೆಗಳಿಂದ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್‌ಕ್ಲಬ್ ಕೌನ್ಸಿಲ್ (ರಿ), ಆದಿ ಜಗದ್ಗುರು ರೇಣುಕಾಚಾರ್ಯ ಸೇವಾ ಟ್ರಸ್ಟ್, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಮನವಿ ಸಲ್ಲಿಸಿ ನಂತರ ಕಂಪ್ಲಿ ಜನತೆಗೆ ಉತ್ತಮ ಆರೋಗ್ಯಕರ ವಾತಾವರಣದಲ್ಲಿ ಜೀವಿಸುವುದು ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಇಲ್ಲಿನ 23 ವಾರ್ಡಗಳಲ್ಲಿ ದಿನೇ ದಿನೇ ಡೆಂಘೀ ಹಾಗೂ ಮಲೇರಿ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರ ಬಗ್ಗೆ, ತಮ್ಮ ಸಿಬ್ಬಂದಿಗಳು ಎಚ್ಚೆತ್ತು ಕೊಂಡು ಇಲಾಖೆ ವತಿಯಿಂದ ಸೊಳ್ಳೆ ನಿವಾರಣ ಔಷಧಿಯನ್ನು (fogging) ಸಿಂಪಡಿಸಿ ಮುಂಜಾಗ್ರತವಾಗಿ ನಿಯಂತ್ರಣಕ್ಕೆ ತರುವಲ್ಲಿ ಶ್ರಮಿಸ ಬೇಕೆಂದು ಕಂಪ್ಲಿಯ ಜನತೆಯ ಪರವಾಗಿ ಹಲವು ಸಂಘಟನೆಗಳು ಸೇರಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕೌನ್ಸಿಲ್ ಕಂಪ್ಲಿ ತಾಲೂಕು ಅಧ್ಯಕ್ಷ ಹೆಚ್ ಮರಿಯಪ್ಪ ಮಾತನಾಡಿ ಕಂಪ್ಲಿ ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಆದಷ್ಟು ಬೇಗನೆ ಈ ಒಂದು ಮನವಿಗೆ ತಕ್ಷಣವೇ ಸ್ಪಂದಿಸಲು ಮನವಿ ಮುಂಜಾಗ್ರತೆಯನ್ನು ವಹಿಸಬೇಕಾಗಿ ಮನವಿ ಮಾಡಿ ಕೊಂಡರೆ. ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಅಧಿಕಾರಿಯಾದ ಶ್ರೀಮತಿ ವಸಂತ ಇವರಿಗೆ ತಾಲೂಕು ಅಧ್ಯಕ್ಷರಾದ ಮರಿಯಪ್ಪ, ಟಿಹೆಚ್‌ಎಂ ರಾಜಕುಮಾರ್, ಹೆಚ್ ಗೋಪಾಲ್, ಎಚ್ ಶ್ರೀನಿವಾಸ್ ಮೌಲ ಹುಸೇನ್, ರಾಮ್ ಸಾಗರ ನಾರಾಯಣಪ್ಪ ಉಪ್ಪಾರ್ ರುದ್ರಪ್ಪ, ಬಾವಿಕಟ್ಟಿ ಚನ್ನಬಸವ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಟಿ.ಎಚ್.ಎಂ. ರಾಜಕುಮಾರ್. ಬಳ್ಳಾರಿ.