ಗ್ರಾ ಪಂ ಸದಸ್ಯನನ್ನು ನಿರ್ಲಕ್ಷ್ಯ ತೋರಿದ ಪಿ.ಡಿ.ಓ
ಉಜ್ಜಿನಿ ಜು.26

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮ ಪಂಚಾಯಿತಿಯಲ್ಲಿ ದಿ. 26 ಜುಲೈ 2024 ರಂದು ಚಂದ್ರಪ್ಪ ಸದಸ್ಯರು ಅನಾರೋಗ್ಯ ದಿಂದ ಪಂಚಾಯಿತಿಯಲ್ಲಿ ಮಲಗಿ ಕೊಂಡಿದ್ದಾರೆ.ಉಜ್ಜಿನಿ ಗ್ರಾಮ ಪಂಚಾಯತಿಯ ಬೈರದೇವರ ಗುಡ್ಡದ ಸದಸ್ಯರಾದ ಚಂದ್ರಪ್ಪ ನವರು ಪೈಪ್ಲೈನ್ ರಿಪೇರಿ ಮಾಡಿದ ಕೆಲಸಕ್ಕೆ ಹಣ ಕೊಡದೆ ಸತಾಯಿಸುತ್ತಿರುವ ಪಿಡಿಓ ಜಯಮ್ಮನವರ ವಿರುದ್ಧ ಹಣ ಕೇಳುತ್ತಾ ಸದಸ್ಯರಾದ ಚಂದ್ರಪ್ಪ ಅನಾರೋಗ್ಯ ದಿಂದ ಇದ್ದರೂ ಹಣದ ತೊಂದರೆಯಾಗಿದೆ ನಾನು ಅನಾರೋಗ್ಯ ದಿಂದ ಇದ್ದರೂ ಆಸ್ಪತ್ರೆಗೆ ತೋರಿಸಲು ಹಣ ಬೇಕಾಗಿದೆ ಎಂದು ಕೇಳಿದರೂ ಸಹ ಹಣ ಕೊಡುತ್ತಿಲ್ಲವಂತೆ.

ಹೀಗಾಗಿ ಚಳಿ ಜ್ವರ ಬಂದು ಚಂದ್ರಪ್ಪ ಪಂಚಾಯತಿಯಲ್ಲಿ ಮಲಗಿ ಕೊಂಡಿದ್ದಾರೆ ಇದನ್ನು ಕಂಡ ಕುರುಗೋಡು ಸಿದ್ದೇಶ್ ಅವರನ್ನು ಮಾತನಾಡಿಸಿ ಏನಪ್ಪಾ ನಿನ್ನ ಸಮಸ್ಯೆ ಎಂದು ಕೇಳಿದಾಗ ಅವರು ಹೇಳಿದ್ದು ಹೀಗೆ ನಾನು ಮಾಡಿರುವ ಕೆಲಸ ಹಣ ಪಿಡಿಓ ರವರು ನೀಡಿಲ್ಲ ನನಗೆ ಹಣ ಬೇಕಾಗಿದೆ ನನ್ನ ಅನಾರೋಗ್ಯ ದಿಂದ ಬಳಲುತ್ತಿದ್ದರು ಇವರ ಗಮನಕ್ಕೆ ಇದ್ದರೂ ನನಗೆ ಹಣ ಪಾವತಿ ಮಾಡುತ್ತಿಲ್ಲ ಎಂದು ತಿಳಿಸುತ್ತಿದ್ದಾರೆ ಎಂದು ಕುರುಗೋಡು ಸಿದ್ದೇಶ್ ಚೌಡಪ್ಪ ಸದಸ್ಯರು ರವಿ ಸದಸ್ಯರು ಮತ್ತಿತರರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.