ಕಾಟಗಲ್ : ಕಳಪೆ ಕಾಮಗಾರಿ ರಸ್ತೆಯಿಂದ ವಾಹನ ಸವಾರರ ಪರದಾಟ.
ಮಸ್ಕಿ ಜು.26

ತಾಲ್ಲೂಕಿನ ಮಾರಲದಿನ್ನಿ ಟು. ಮುದಬಾಳ ಕ್ರಾಸ್ ಮಾರ್ಗದ ರಸ್ತೆ ತೀರಾ ಹದಗೆಟ್ಟ ಕಾರಣ ಪ್ರಯಾಣಿಕರು ಹಾಗೂ ಸಾರ್ವಜನಿಕರು ಜೀವ ಭಯದಲ್ಲಿಯೇ ಸಂಚಾರ ಮಾಡಬೇಕಾದ ಸಂದರ್ಭ ಬಂದೊದಗಿದೆ.ಮಾರಲದಿನ್ನಿ ಟು. ಮುದಬಾಳ ಕ್ರಾಸ್ ಮಾರ್ಗದ ರಸ್ತೆ ತೀರಾ ಹದಗೆಟ್ಟಿದ್ದು, ಹೌದು ರಸ್ತೆಯು ಕಳಪೆ ಕಾಮಗಾರಿ ಯಿಂದ ವಾಹನ ಸವಾರರು ರಸ್ತೆ ತಗ್ಗು ಗುಂಡಿಗೆ ಬಿದ್ದು ಆಸ್ಪತ್ರೆಗೆ ದಾಖಲು ಆಗುತ್ತಿರುವ ಸನ್ನಿವೇಶ ನಿಮಾರ್ಣ ವಾಗಿದೆ. 2022 – 23 ನೇ ಸಾಲಿನಲ್ಲಿ ಮುದವಾಳ ಕ್ರಾಸ್ ನಿಂದ ಉಸ್ಕಿಹಾಳ ಗ್ರಾಮದವರೆಗೆ ರಸ್ತೆ ನಿಮಾರ್ಣ ಮಾಡಿದ್ದಾರೆ ಆದರೆ ರಸ್ತೆ ಮಾಡಿ ಒಂದು ವರ್ಷದಲ್ಲಿ ರಸ್ತೆ ಹಾಳಾಗಿದ್ದು ರಸ್ತೆ ಮಾಡಿದ ಗುತ್ತಿಗೆದಾರರ ವಿರುದ್ಧ ಹಾಗೂ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಊರಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಸ್ತೆಯ ಕಳಪೆ ಕಾಮಗಾರಿ ಬಗ್ಗೆ ಹಲವಾರು ಬಾರಿ ಎಲ್ಲಾ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ಶರಣಬಸವ ಕಾಟಗಲ್ ರವರು ತಮ್ಮ ಆಕ್ರೋಶವನ್ನು ಪತ್ರಿಕೆಯ ಮೂಲಕ ವ್ಯಕ್ತಪಡಿಸಿದ್ದಾರೆ.

ಇದೇ ಬುಧವಾರ ಬೆಳಗಿನ ಜಾವ ಸಾರಿಗೆ ಇಲಾಖೆಯ ಸಿಬ್ಬಂದಿ ಇದೆ ರಸ್ತೆ ಮೇಲೆ ಬೈಕ ತೆಗೆದು ಕೊಂಡು ಹೋಗುವಾಗ ರಸ್ತೆಯ ಗುಂಡಿಗೆ ಬಿದ್ದು ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ರಸ್ತೆಯಲ್ಲಿ ಹೊಗಬೇಕು ಎಂದರೆ ಜೀವಕ್ಕೆ ಅಪಾಯ ಗ್ಯಾರಂಟಿ ಎಂದು ರಸ್ತೆ ಸವಾರರ ಅಳಲು.ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳುಸಾರ್ವಜನಿಕ ಹಿತ ದೃಷ್ಟಿಯಿಂದ ರಸ್ತೆಯ ಗುಂಡಿಗಳನ್ನು ಮುಚ್ಚಿ ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ.ಇಲಕಲ್ಲ.