ನಿಧನ ವಾರ್ತೆ, ಶ್ರೀ ಮತಿ ಕಜ್ಜೇರ ಮಲ್ಲಮ್ಮ – ಗೆದ್ದಲಗಟ್ಟೆ ಗ್ರಾಮ.
ಗೆದ್ದಲಗಟ್ಟೆ ಜು.27

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗೆದ್ದಲಗಟ್ಟೆ ಗ್ರಾಮ ವಾಸಿಗಳು ಹಾಗೂ ದಲಿತ ಹಿರಿಯ ಮಹಿಳಾ ಚೇತನರು. ದಲಿತರ ಪರ ಹೋರಾಟಗಾರರು, ಹಾಗೂ DSS ಜಿಲ್ಲಾ ಘಟಕದ ಮುಖಂಡರಾದ ಹನುಮೇಶ ರವರ ತಾಯಿ. ಶ್ರೀಮತಿ ಕಜ್ಜೇರ ಮಲ್ಲಮ್ಮ (80), ಜುಲೈ 26.ರ ರಾತ್ರಿ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬಹು ದಿನಗಳಿಂದ, ವಯೋ ಸಹಜ ಅನಾರೋಗ್ಯ ದಿಂದ ಬಳಲುತಿದ್ದರು. ಮೃತರು ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ಸೇರಿದಂತೆ, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಹೊಂದಿದವ ರಾಗಿದ್ದರು. *ಅಂತ್ಯಕ್ರಿಯೆ*- ಜುಲೈ 27 ರಂದು ಮಧ್ಯಾಹ್ನ , ಗ್ರಾಮದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಗೆದ್ದಲ ಘಟ್ಟೆ ಗ್ರಾಮದ ದಲಿತ ಸಮುದಾಯದವರು, ಹಾಗೂ ವಿವಿಧ ಸಮುದಾಯದವರು ಸಮಸ್ತ ಗ್ರಾಮಸ್ಥರು. ದಲಿತ ಸಮುದಾಯದವರು ಸೇರಿದಂತೆ, ವಿವಿಧ ಸಮುದಾಯದವರು. ದಲಿತ ಸಂಘರ್ಷ ಸಮಿತಿ ಸೇರಿದಂತೆ ದಲಿತ ಪರ ಸಂಘಟನೆಗಳು, ಪತ್ರಕರ್ತರು ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ದಲಿತ ಸಂಘರ್ಷ ಸಮಿತಿ ವಿವಿಧ ಗ್ರಾಮ ಘಟಕಗಳ, ತಾಲೂಕಾ, ಜಿಲ್ಲಾ ಹಾಗೂ ರಾಜ್ಯ ಘಟಕಗಳ ಪದಾಧಿಕಾರಿಗಳು ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿಧ ಜನ ಪ್ರತಿನಿಧಿಗಳು, ಹಾಗೂ ಹೋರಾಟಗಾರರು ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರಿಕರು, ಗೆದ್ದಲಗಟ್ಟೆ ಗ್ರಾಮದ ನೆರೆ ಹೊರೆ ಗ್ರಾಮಸ್ಥರು. ಮೃತ ಶ್ರೀಮತಿ ಕಜ್ಜೇರ ಮಲ್ಲಮ್ಮರವರ ಅಗಲಿಕೆಗೆ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ