ಯುವ ರೈತರಿಗೆ ಮಾದರಿಯಾದ – ಸರ್ಕಾರಿ ನೌಕರ.
ಚಿಕ್ಕ ಓತಗೇರಿ ಜು.28

ಇಳಕಲ್ಲ ತಾಲೂಕಿನ ಸಮೀಪದ ಚಿಕ್ಕ ಓತಗೇರಿ ಗ್ರಾಮದ ಮೂಲತ ರೈತ ಕುಟುಂಬ ದಿಂದ ಬಂದಿದ್ದರಿಂದ ತಲಾಟಿ ನೌಕರಿ ಹುದ್ದೆಯಲ್ಲಿದ್ದರೂ ಬಿಡುವಿನ ಸಮಯದಲ್ಲಿ ಆಗಾಗ ತಮ್ಮ ಹೊಲದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುವ ಹವ್ಯಾಸ ಬೆಳೆಸಿ ಕೊಂಡ ತಲಾಟಿ ಭೀಮನಗೌಡ ಮೂಲಿಮನಿ ಅವರು ತಾವು ಮಾಡುವ ನೌಕರಿ ರೈತರ ಸೇವೆ ಮಾಡುವುದೇ ಆಗಿರುವುದರಿಂದ ರೈತರ ಬಗ್ಗೆ ಸಂಪೂರ್ಣ ತಿಳಿದು ಕೊಂಡವರಾಗಿದ್ದು ರೈತರು ಸಮಸ್ಯೆಗಳನ್ನು ಬೇಗನೆ ಆಲಿಸಿ ಸ್ಪಂದಿಸುವ ವಿಲೇಜ್ ಅಕೌಂಟೆಂಟ್ (ತಲಾಟಿ) ತಮ್ಮ ಅಣ್ಣನವರಿಗೆ ವಾರಕ್ಕೆ ಒಂದು ದಿನವಾದರೂ ಸಹಾಯ ಮಾಡುವ ಸಲುವಾಗಿ ಕಚೇರಿಯ ಬಿಡುವಿನ ವೇಳೆಯಲ್ಲಿ ತಾವೇ ಸ್ವತಕ್ಕೆ ಹೊಲಕ್ಕೆ ತೆರಳಿ ರೈತಾಪಿ ಕೆಲಸಗಳನ್ನು ಮಾಡುವುದಕ್ಕೆ ಮುಂದಾಗುತ್ತಾರೆ.

ಇದೇ ರೀತಿ ಇವತ್ತು ಕೂಡ ಸತತ ಜಿ.ಟಿ ಜಿ.ಟಿ ಮಳೆಯ ಮಧ್ಯೆಯು ಇವತ್ತು ಇಲ್ಲದಿರುವುದರಿಂದ ತೊಗರಿ ಹೊಲದಲ್ಲಿ ಹಿಡಿಯುವ ಕಾರ್ಯದಲ್ಲಿ ಸ್ವತಃ ತಾವೇ ರೈತರಾಗಿ ಕೆಲಸ ನಿರ್ವಹಿಸಿದ್ದು ಯುವ ರೈತರಿಗೆ ಮಾದರಿಯಂತಿತ್ತು ಇವತ್ತಿನ ಕಾಲದಲ್ಲಿ ರೈತರು ಎಂದು ಹೇಳಿ ಕೊಳ್ಳುವುದಕ್ಕೆ ನಾಚಿಕೆ ಪಡುವ ಯುವಕರ ಮಧ್ಯೆಯು ಸರ್ಕಾರಿ ನೌಕರರು ಕೂಡ ತಾನು ಒಬ್ಬ ರೈತ ಎನ್ನುವುದನ್ನು ಸಮಾಜಕ್ಕೆ ಆಗಾಗ ತೋರಿಸುತ್ತಿರುವುದು ಇವತ್ತಿನ ಯುವ ರೈತರಿಗೆ ಆದರ್ಶ ಪ್ರಾಯವಾಗಿದ್ದಾರೆ.

ಹಾಗಾಗಿ ರೈತರು ಎಂದು ಹೇಳಿ ಕೊಳ್ಳಲು ನಾಚಿ ಕೊಳ್ಳುವ ಇವತ್ತಿನ ದಿನ ಮಾನದಲ್ಲಿ ತಾವೇ ಸ್ವತಃ ರೈತರಾಗಿ ಕೆಲಸ ಮಾಡಿ ರೈತರ ಆಗುವುದಕ್ಕೆ ಯಾವ ಅಡೆ ತಡೆಗಳು ಬರಲಾರದು ಎನ್ನುವುದನ್ನು ನಿರುದ್ಯೋಗಿ ಯುವ ರೈತರಿಗೆ ಹೊಲದಲ್ಲಿ ಕೆಲಸ ಮಾಡುವುದರ ಮೂಲಕ ಮಾದರಿ ಯಾಗಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್. ವಾಯ್.ಕಿಳ್ಳಿ.ಇಲಕಲ್ಲ.