ಮಳೆಯನ್ನೇ ನಂಬಿ ಬದುಕುವ ರೈತರ ಅಭಿವೃದ್ಧಿಗೆ ಶ್ರಮಿಸೋಣ – ಶಾಸಕ ಡಾ,ಶ್ರೀ ನಿವಾಸ್.ಎನ್.ಟಿ
ಕೂಡ್ಲಿಗಿ ಜು.31

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗುಂಡಿನ ಹೊಳೆಯಲ್ಲಿರುವ ಕೃಷಿ ಬೀಜೋತ್ಪನ ಕೇಂದ್ರದಲ್ಲಿ 2024 -25 ನೇ ಸಾಲಿನ ಜಿಲ್ಲೆ ಮತ್ತು ತಾಲೂಕಾ ರೈತರ ತರಬೇತಿ ಕಾರ್ಯಕ್ರಮ ಹಾಗೂ ಮುಂಗಾರು ಹಂಗಾಮಿನ ದ್ವೈ- ಮಾಸಿಕ ಕಾರ್ಯಗಾರ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ದಿ. 31-07-24 ರಂದು ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಉದ್ಘಾಟಿಸಿದರು.

ಶಾಸಕರು ಪಾರಂನ್ನು ಪರಿಶೀಲಿಸಿ, ರೈತರ ಆದಾಯದ ಅನುಕೂಲಕ್ಕಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಬರುವಂತೆ ತಮ್ಮ ಮನೆಯ ಸಮ್ಮುಖದ ನರ್ಸರಿಗಳಲ್ಲಿ ತೊಗರಿ ಬೀಜವನ್ನು ಸಸಿ ಬರುವಂತೆ ಸಿದ್ದಪಡಿಸಿ ಕೊಂಡು ಫಲವತ್ತಾದ ಬೆಳೆಗಳನ್ನು ಬೆಳೆಯಲು ಸಲಹೆಗಳನ್ನು ಅಧಿಕಾರಿಗಳಿಗೆ ನೀಡಿದರು. ನಮ್ಮ ಭಾಗದ ರೈತರು ಮಳೆಯನ್ನೇ ನಂಬಿ ಬದುಕುವುದ ರಿಂದ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಉಪಯುಕ್ತ ಸಲಹೆ ಮತ್ತು ತರಬೇತಿ ನೀಡಲು ತಿಳಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ರೈತರು ಮತ್ತು ಮುಖಂಡರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.