ಕಲಕೇರಿ ಗ್ರಾಮಕ್ಕೆ ರವಿವಾರ 28. ರಂದು ಸರ್ಕಾರಿ ಉರ್ದು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ದುರಸ್ತಿಗೆ ಸೂಚಿಸಿದ – ಬಿ.ಇ.ಓ ಆರೀಫ್. ಬಿರಾದಾರ.
ಕಲಕೇರಿ ಜು.28

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮಕ್ಕೆ ರವಿವಾರ ಸ್ಥಳಕ್ಕೆ ಭೇಟಿ ನೀಡಿದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆರಿಫ್ ಬಿರಾದಾರ್ ಸಿಂದಗಿ ಇವರು ಕಲಕೇರಿ ಗ್ರಾಮದ ಸರ್ಕಾರಿ ಉರ್ದು ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳನ್ನು ಪರಿಶೀಲನೆ ಮಾಡಿದರು. ರವಿವಾರ ದಿವಸ ಸಿಂದಗಿಯ ಆರಿಫ್ ಬಿರಾದಾರ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂದಗಿ ಸಾಹೇಬರು ಕಲಕೇರಿ ಗ್ರಾಮಕ್ಕೆ ಬಂದು ರವಿವಾರ ರಜೆ ಇದ್ದರೂ ಕೂಡ ಕಲಕೇರಿ ಗ್ರಾಮಕ್ಕೆ ಬಂದು ಸರಕಾರಿ ಉರ್ದು ಶಾಲೆ ನಂಬರ್ 1 ಒನ್ ನಾಲ್ಕು ಕೊಠಡಿಗಳ ಮತ್ತು ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನಾಲ್ಕು ಕೊಠಡಿಗಳ ಮತ್ತು ಸರ್ಕಾರಿ ಗಂಡು ಮಕ್ಕಳ ಕನ್ನಡ ಶಾಲೆ ಎರಡು ಕೊಠಡಿಗಳ ಒಟ್ಟು ಮೂರು ಶಾಲೆಯ ಆವರಣದಲ್ಲಿ 10 ಕೊಠಡಿಗಳನ್ನು ತಕ್ಷಣವೇ ಚಾವಣಿ ದುರಸ್ತಿ ಮಾಡುತ್ತೇವೆ.

ಎಂದು ಸಿಂದಿಗೆಯ ಆರೀಫ್ ಬಿರಾದಾರ್ ಸಾಹೇಬರು ಶಿಕ್ಷಣಾಧಿಕಾರಿಗಳು ತಕ್ಷಣ ಈ ಕೆಲಸ ಮುಗಿಸುತ್ತೇನೆ. ಎಂದು ಈ ಸಂದರ್ಭದಲ್ಲಿ ಸರ್ಕಾರಿ ಉರ್ದು ಶಾಲೆ ನಂಬರ್ 1 ಒನ್. ಸರ್ಕಾರಿ ಹೆಣ್ಣು ಮಕ್ಕಳ ಶಾಲೆ. ಸರ್ಕಾರಿ ಗಂಡು ಮಕ್ಕಳ ಶಾಲೆಯ ಮೂರು ಶಾಲೆಗಳನ್ನು ಪರಿಶೀಲನೆ ಮಾಡಿ ತಕ್ಷಣವೇ ಈ ಶಾಲೆಗಳನ್ನು ದುರಸ್ತಿ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಸಿಂದಗಿಯ ಆರಿಫ್ ಬಿರಾದರ್ ಶಿಕ್ಷಣಾಧಿಕಾರಿಗಳು ಸಾಹೇಬರು ತಿಳಿಸಿದರು.I.F.ಭಾಲ್ಕಿ ಈ ಸಾಹೇಬರು ಕೂಡ ಕಲಕೇರಿ ಗ್ರಾಮಕ್ಕೆ ಎಲ್ಲಾ ಶಾಲೆಗಳ ಪರೀಶೀಲನೆ ಮಾಡಿ ತಕ್ಷಣವೇ ಶಾಲೆ ಕೊಠಡಿಗಳನ್ನು ದುರಸ್ತಿ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಮೂರು ಶಾಲೆಯ ಮುಖ್ಯ ಗುರುಗಳು .ಜಿ.ಬಿ. ಕುಲಕರಣಿ. ಶಿವು ಪಡಶೆಟ್ಟಿ. ಧನೇಶ್ ಅಡಿಕಿ ಮೂರು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು. ಲಾಳೇಮಶಾಕ ವಲ್ಲಿಭಾವಿ. ಚಂದ್ರಕಾಂತ್ ಬಡಿಗೇರ್. ಆನಂದ್ ಅಡಿಕಿ. ಸದಸ್ಯರು ಪಟೇಲ್ ವಲ್ಲಿಭಾವಿ. ಮಲ್ಲು ನಾವಿ. ಕಲಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಾಜ್ ಅಹ್ಮದ್ ಸಿರಸಗಿ. ಮೂರು ಶಾಲೆಯ ಸಿ.ಆರ್.ಸಿ ಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.