ರೈತರನ್ನು ಮೈಕ್ರೋ ಫೈನಾನ್ಸ್ ಗಳ ಕಿರುಕುಳ ತಪ್ಪಿಸಬೇಕು ಮತ್ತು ಈರುಳ್ಳಿ ಬೆಂಬಲ ಬೆಲೆ – ನೀಡುವಂತೆ ಸರ್ಕಾರಕ್ಕೆ ಮನವಿ.
ಕೊಟ್ಟೂರು ಫೆ .10

ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ವತಿಯಿಂದ ಈರುಳ್ಳಿ ಬೆಲೆಗೆ ಬೆಂಬಲ ಬೆಲೆ ನೀಡಲು ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ಮತ್ತು ರೈತರು ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದ ರೈತರ ಮೈಕ್ರೋ ಫೈನಾನ್ಸ್ ನ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರ ಸಂಘದ ಅಧ್ಯಕ್ಷರಾದ ಎನ್.ಎಂ ಸಿದ್ದೇಶ್ ರವರು ಮಾನ್ಯ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಅರ್ಜಿ ಸಲ್ಲಿಸುವುದರ ಮೂಲಕ ಮನವಿ ಮಾಡಿ ಕೊಂಡರು. ಭಾರತ ದೇಶದ ಈರುಳ್ಳಿ ಬೆಳೆಯುವ ಎರಡನೇ ರಾಜ್ಯ ಕರ್ನಾಟಕವಾಗಿದೆ. ಆದ್ದರಿಂದ ರಾಜ್ಯದಲ್ಲಿ ಈರುಳ್ಳಿ ದರ ಕುಸಿದಾಗ ಸರ್ಕಾರದಿಂದ ಖರೀದಿ ಕೇಂದ್ರವನ್ನು ಪ್ರತಿ ತಾಲೂಕಿನಲ್ಲಿ ಖರೀದಿ ಕೇಂದ್ರ ತೆರೆಯಬೇಕು.

ಪ್ರತಿ ತಾಲೂಕಿನಲ್ಲಿ ಈರುಳ್ಳಿ ಸಂಗ್ರಹಣ ಘಟಕ ಸ್ಥಾಪಿಸಬೇಕು ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಈರುಳ್ಳಿ ಬೀಜ ವಿತರಣೆ ಮಾಡಬೇಕು ಸಹಕಾರ ಬ್ಯಾಂಕುಗಳಿಂದ ಪಡೆದಿರುವ ರೈತರ ಸಂಪೂರ್ಣ ಸಾಲಮನ್ನ ಮಾಡಬೇಕು ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರ ಸಂಘದ ಅಧ್ಯಕ್ಷರು ಎನ್.ಎಂ ಸಿದ್ದೇಶ್, ಬದ್ದಿ.ಮರಿಸ್ವಾಮಿ, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು, ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಉಪಾಧ್ಯಕ್ಷರು ಕರಡಿ ಶಾಂತಕುಮಾರ್ ಚಪ್ಪರದಹಳ್ಳಿ, ಜಿಲ್ಲಾಧ್ಯಕ್ಷರು ಕೆ ಮಂಜುನಾಥ್, ಕೊಟ್ಟೂರು ತಾಲೂಕು ಅಧ್ಯಕ್ಷರು ಉಮೇಶ್, ಈರುಳ್ಳಿ ಬೆಳೆಗಾರರ ಸಂಘದ ರೈತ ಮುಖಂಡರು.ಅಯ್ಯನಹಳ್ಳಿ ಎ.ಸಿದ್ದಪ್ಪ ಮಲ್ಲಿಕಾರ್ಜುನಗೌಡ.ಎಲ್ ಭೀಮೇಶ್ ನಿಂಗನಗೌಡ ಹನುಮನಹಳ್ಳಿ, ಬಸವರಾಜ ಉತ್ತಂಗಿ. ಸೋಮಪ್ಪ. ಇತರೆ ಎಲ್ಲಾ ರೈತ ಮುಖಂಡರು ಭಾಗಿಯಾಗಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು