ಮೊಳಕಾಲ್ಮೂರು ತಾಲೂಕಿನ ಹಿರೇ. ಕೆರೆಹಳ್ಳಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿ ಅನಾವರಣ ಮಾಡಿದ ಶಾಸಕರು.
ಹಿರೇ ಕೆರೆಹಳ್ಳಿ ಜು.29

ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಮೊಳಕಾಲ್ಮೂರು ತಾಲ್ಲೂಕು ಹಿರೇಕೆರೆಹಳ್ಳಿ ನೂತನವಾಗಿ ಡಾ” ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ರಚಿಸಿದಂತ ಸಂವಿಧಾನ ಬಹಳ ಮಹತ್ವದ್ದು ಇವತ್ತಿನ ದಿನ ಈ ಸಂವಿಧಾನದಲ್ಲಿ ನಾವು ಬದುಕುತ್ತಿದ್ದೇವೆ ನಾನು ರಾಜಕೀಯ ಫೀಲ್ಡಿಗೆ ಇಳಿದಾಗ ನಿಂದಲೂ ಸಂವಿಧಾನದಲ್ಲಿ ಕಾನೂನು ಪ್ರಕಾರವಾಗಿ ಇವತ್ತಿನವರೆಗೂ ಸರ್ಕಾರದ ಎಲ್ಲ ಸಮುದಾಯದ ದಲಿತರಿಗೆ ಯೋಜನೆಗಳು ರೂಪಿಸಿರುತ್ತೇನೆ ಮತ್ತು ಸರ್ಕಾರದಿಂದ ಸಾಲ ಸೌಲಭ್ಯಗಳು ಮಾಶಾಸನಗಳು ಅಬಲೆಯರಿಗೆ, ಮಾಶಾಸನ ವಿಕಲಚೇತನರಿಗೆ ಸೌಲಭ್ಯಗಳು ಯಾವುದೇ ಯೋಜನೆಯಾಗಲಿ ರೂಪಿಸಿದ್ದೇನೆ ಸಂವಿಧಾನ ಪ್ರಕಾರವಾಗಿ ಕಾನೂನಿನ ಅಡಿಯಲ್ಲಿ ಕೆಲಸವನ್ನು ನಾನು ರೂಪಿಸಿದ್ದೇನೆ ನಾನು ಒಬ್ಬ ದಲಿತ ಕುಟುಂಬದಲ್ಲಿ ಹುಟ್ಟಿದ್ದೇನೆ ನಾವು ಸಹ ದಲಿತರು ಎಂದು ಶಾಸಕರು ಹೇಳಿದರು 35 ವರ್ಷ ರಾಜಕೀಯ ಅನುಭವದಲ್ಲಿ ಹಿರಿಯ ರಾಜಕಾರಣಿಯಾಗಿ ಆಳುವಂತ ಸರ್ಕಾರಗಳಿಗೆ ಕಪ್ಪು ಚುಕ್ಕೆ ಇಲ್ಲದ ಹಾಗೆ ಪ್ರಾಮಾಣಿಕವಾಗಿ ನಿಷ್ಠೆಯಿಂದ ತಲೆ ಯೆತ್ತುವಂತೆ ಕೆಲಸಗಳು ಮಾತ್ರ ನಾನು ಮಾಡಿದ್ದೇನೆ.

ಎಂದು ಶಾಸಕರು ಘಂಟಾಗೋಷವಾಗಿ ಮಾತನಾಡಿದರು ಆದರೂ ಒಂದು ಬಾರಿ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ 6 ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ ಒಟ್ಟು ಏಳು ಬಾರಿ ಶಾಸಕರಾದರು ಕೂಡ ನನಗೆ ಮಂತ್ರಿ ಸ್ಥಾನ ದೊರಕಲಿಲ್ಲ ಕಾಂಗ್ರೆಸ್ ಪಕ್ಷದಲ್ಲಿ ಸೀನಿಯರ್ ಜೂನಿಯರ್ ಮಾಡುತ್ತಾರೆ ಜೂನಿಯರ್ ಸೀನಿಯರ್ ಮಾಡುತ್ತಾರೆ ನ್ಯಾಯದ ಮಾರ್ಗದಲ್ಲಿ ದಾರಿ ಸಿಗದಂತಾಗಿದೆ ನಾನು ಯಾವತ್ತಿಗೂ ಮಂತ್ರಿ ಸ್ಥಾನ ಕೊಡು ಅಂತ ನಾನು ಕೇಳಿಲ್ಲ ಆದರೆ ಕ್ಷೇತ್ರದ ಮತದಾರರು ನನ್ನನ್ನು ಬೆಂಬಿಡದೆ ಧ್ವನಿಯತ್ತುತ್ತಾರೆ ಆದರೂ ಕ್ಷೇತ್ರದ ಮತದಾರರಂದು ತಾಳ್ಮೆ ಇಂದ ಸುಮ್ಮನೆ ಇರಿಸಿದ್ದೇನೆ ನನಗೆ ವಿಜಯನಗರ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಮತದಾರರು ಯಾವತ್ತಿಗೂ ನನ್ನ ಮೇಲೆ ಏಳು ಬಾರಿ ಶಾಸಕರನ್ನು ಮಾಡಿ ಸೋಲೆ ಇಲ್ಲದ ಜನನಾಯಕನಾಗಿ ಮೂರು ಜಿಲ್ಲೆಗಳ ಮತದಾರರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ ರಾಜ್ಯದ ಮಂತ್ರಿಯಾಗು ಅಂತ ಬೆಂಬಿಡದೆ ಮತದಾರರು ಧ್ವನಿ ಎತ್ತುತ್ತಾರೆ ಈ ಪಕ್ಷದವರು ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದರೆ ರಾಜ್ಯದ ಮಂತ್ರಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಗೌರವ ತರುತ್ತಿದ್ದೆ.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್ ಆಂಜನೇಯ, ನಿಗಮ ಮಂಡಳಿ ಅಧ್ಯಕ್ಷರುಗಳಾದ ಮುಂಡರಗಿ ನಾಗರಾಜ್ ಯೋಗೇಶ್ ಬಾಬು, ಮುಖಂಡರಾದ ಜೆಜೆ ಹಟ್ಟಿ ತಿಪ್ಪೇಸ್ವಾಮಿ, ಡಿಎಸ್ಎಸ್ ಸಂಘಟನೆಯ ಪದಾಧಿಕಾರಿಗಳು, ಮತ್ತು ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಪ್ರಕಾಶ್ ಮೊಳಕಾಲ್ಮೂರು ಖಾದರ್ ಟೀಕೆ ಕಲ್ಲಿ ಮುಲ್ಲಾ ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು