ಅಕ್ರಮ ಮರಳು ಸಾಗಾಣಿಕೆ ಸಾಗರ ಕ್ಯಾಂಪ್ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ – ನರಕ ದರ್ಶನ.
ಮಸ್ಕಿ ಜು.31

ತಾಲೂಕಿನ ಬುದ್ದಿನ್ನಿ-ಜಾಲವಾಡ್ಗಿ ಹತ್ತಿರದ ನಾಲ್ಕು ಮರಳು ಯಾರ್ಡ್ ನಿಂದ ನಿತ್ಯ ಹಗಲು ರಾತ್ರಿ ಎನ್ನದೇ ಸಾಗರ ಕ್ಯಾಂಪ್ ಮಾರ್ಗವಾಗಿ ಕಾಲುವೆ ರಸ್ತೆ ಮೇಲೆ ಅಕ್ರಮ ಮರಳು ಸಾಗಾಣಿಕೆ ಯಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸೇರಿ ರೈತರ ಸಂಚಾರಕ್ಕೆ ತೀವ್ರ ತೊಂದರೆ ಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಲಾರಿ ತಡೆದು ಪ್ರತಿಭಟಿಸಿದರು.ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ಪಿ.ಎಸ್.ಐ ವೀರೇಶ ಅವರಿಗೆ ಮರಳು ಲಾರಿಗಳ ಓಡಾಟ ತಡೆಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಪಿ.ಎಸ್.ಐ ಮಾತನಾಡುವ ವೇಳೆ ಮದ್ಯ ಪ್ರವೇಶಿಸಿದ ಪೊಲೀಸ್ ಪೇದೆ ಹಿರಿಯ ಪೇದೆ ಸಿದ್ದಪ್ಪ ಲಾರಿ ಮಾಲೀಕ ಮತ್ತು ಚಾಲಕನ ಪರವಾಗಿ ಮಾತನಾಡಿರುವುದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದರು. ಕೂಡಲೇ ಇತನ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸಾರ್ವಜನಿಕರ ಒತ್ತಾಯದ ಮೇರಗೆ ಪೊಲೀಸರು 4 ಲಾರಿಗಳನ್ನು ವಶಕ್ಕೆ ತೆಗೆದು ಕೊಂಡು ತನಿಖೆ ನಡೆಸಿದ್ದಾರೆ.ದಿನ ನಿತ್ಯ 50 ಕ್ಕೂ ಹೆಚ್ಚು ಲಾರಿಗಳ ಓಡಾಟ ದಿಂದಾಗಿ ಸಾಗರ ಕ್ಯಾಂಪ್ಗೆ ಸಂಪರ್ಕ ಕಲ್ಪಿಸುವ ಕಾಲುವೆ ರಸ್ತೆ ಮೇಲೆ ಭೃಹತ್ ವಾಹನಗಳ ಓಡಾಟ ದಿಂದ ರಸ್ತೆ ಹದ್ದಗೆಟ್ಟಿದೆ.

ಇಕ್ಕಟಾದ ರಸ್ತೆಯಿಂದ ಹಾಗೂ ಲಾರಿಗಳ ಉಪ್ಪಟಳ ದಿಂದ ಈಶ್ಯಾನ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಓಡಾಟವನ್ನೇ ನಿಲ್ಲಿಸಿದೆ. ಹಿಗಾಗಿ ನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಿತ್ಯ 10 ಕಿ.ಮೀ. ನಡೆಯ ಬೇಕಾದ ಅನಿವಾರ್ಯತೆ ಬಂದಿದೆ. ವಿದ್ಯಾರ್ಥಿಗಳು ನಿತ್ಯ ಶಾಲಾ ಕಾಲೇಜಿಗೆ ತೆರಳಲು ಬಳಗಾನೂರು-ಪೋತ್ನಾಳ ಮಾರ್ಗ ದಿಂದ ಮಧ್ಯದಲ್ಲಿ ಬರುವ ಸಾಗರ ಕ್ಯಾಂಪ್ಗೆ ತೆರಳಲು ಬಸ್ ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸ ಬೇಕು. ಓವರ್ ಲೋಡ್ ಹಾಗೂ ಹಗಲು ರಾತ್ರಿ ಎನ್ನದೇ ಮರಳು ಸಾಗಾಣಿಕೆಯಲ್ಲಿ ತೊಡಗಿರುವ ಲಾರಿಗಳ ಓಡಾಟ ದಿಂದ ಬಸ್ ಸಂಚರಿಸಲು ಅಡಚಣೆ ಮಾಡಿದ್ದಾರೆ. ಸುಮಾರು 4-5 ಕಿಲೋ ಮೀಟರ್ ಸೈಡ್ ತೆಗೆದು ಕೊಳ್ಳಲು ಬಸ್ ಹಿಂದುಗಡೆ ಸಂಚರಿಸಿದ್ದ ರಿಂದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿ ಜೀವ ಭಯ ಉಂಟಾಗಿರುವ ಘಟನೆ ಜರುಗಿದೆ. ಸರಕಾರದ ನಿಯಮ ಗಾಳಿಗೆ ತೂರಿ – ಮರಳು ಯಾರ್ಡ್ ಮಾಲೀಕರು ಹಾಗೂ ಲಾರಿ ಮಾಲೀಕರು, ಚಾಲಕರು ಸರಕಾರ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸಾಯಂಕಾಲ 6 ಗಂಟೆಯ ನಂತರ ಮರಳು ಸಾಗಾಣಿಕೆ ಸ್ಥಗಿತ ಗೊಳ್ಳಬೇಕು. ಓವರ್ ಲೋಡ್ ಮರಳು ಸಾಗಾಣಿಕೆ ಯಾಗುತ್ತಿರುವುದು. ಒಂದೇ ರಾಯಾಲ್ಟಿಯಲ್ಲಿ 3-4 ಟ್ರೀಪ್ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ನಾಲೆ ಕುಸಿಯುವ ಭೀತಿ – ತುಂಗ ಭದ್ರ ಎಡದಂಡೆ ನಾಲೆಯ ಉಪ ಕಾಲುವೆಗಳ ಮೇಲೆ ಓವರ್ ಲೋಡ್ ಮರಳು ಸಾಗಣಿಕೆ ಮಾಡುತ್ತಿರುವ ಹಿನ್ನನೆಲೆಯಲ್ಲಿ ಕಾಲುವೆ ಕುಸಿಯುವ ಭೀತಿ ಉಂಟಾಗಿದೆ. ಹೀಗಾಗಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ವೆಂಕಟೇಶನಾಯಕ, ರಮಣಾರೆಡ್ಡಿ, ಶ್ರೀಶೈಲಸಾಯಣ್ಣವರ, ವಿಜಯಕುಮಾರ,ನಾಗಪ್ಪ, ಬಸವರಾಜ,ಮಂಜುನಾಥ, ರಾಧಾಕೃಷ್ಣ, ಪ್ರತಾಪ,ರಾದಪ್ಪ,ಸೇರಿದಂತೆ ಸಾಗರಕ್ಯಾಂಪಿನ ಮುಖಂಡರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.