ಕೊಟ್ಟೂರುನಲ್ಲಿ ದಲಿತ ಮುಖಂಡರು “ಸುಪ್ರೀಂಕೋರ್ಟ್ ತೀರ್ಪಿಗೆ” ಅಭಿನಂದನೆಗಳನ್ನು ಸಲ್ಲಿಸಿದರು.
ಕೊಟ್ಟೂರು ಅ.01

ಗುರುವಾರ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಸಂಬಂಧ ನೀಡಿದ ತೀರ್ಪನ್ನು ಸ್ವಾಗತಿಸಿ ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗದ ಮುಖ್ಯ ರಸ್ತೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಯುವಕರು ಕೂಡಿ ಪಟಾಕಿ ಹಚ್ಚಿ ಸಿಹಿ ಹಂಚುವ ಮೂಲಕ ಸಂಭ್ರಮವನ್ನು ಆಚರಿಸಿದರು. ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈ ದೇಶದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ವಿಚಾರವಾಗಿಟ್ಟು ಕೊಂಡು ದೇಶದಲ್ಲಿ ಸಮಾನತೆ ಸಾರುವ ಸಂಕೇತದ ಪ್ರಮುಖ ಉದ್ದೇಶವಾಗಿದೆ ಮತ್ತು ದೇಶದಲ್ಲಿ ಹೊಸ ಶತಮಾನದ ಯುಗ ಪ್ರಾರಂಭವಾಗಲಿದೆ. ಇದರಿಂದಾಗಿ ರಾಜ್ಯ ಸರ್ಕಾರ ತೀರ ಹಿಂದುಳಿದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಕಟ್ಟುನಿಟ್ಟಿನ ಕ್ರಮವಹಿಸಿ ಮೀಸಲಾತಿಯನ್ನು ನೀಡಬೇಕಾಗಿದೆ ಎಂದು ಬಿ ಮರಿಸ್ವಾಮಿ ಜಿಲ್ಲಾ ಡಿಎಸ್ಎಸ್ ಸಂಚಾಲಕರು ಹೇಳಿದರು.ಒಳ ಮೀಸಲಾತಿ ಕುರಿತು ನಡೆಸಿದ ಹೋರಾಟಗಳಲ್ಲಿ ಧೀಮಂತ ನಾಯಕರ ವೀರ ಮರಣ ಹೊಂದಿದ ಶ್ರಮ ಮತ್ತು ಅವರ ದಿಟ್ಟ ನಾಯಕತ್ವಕ್ಕೆ ಪ್ರತಿ ಫಲವಾಗಿ ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಒಳ ಗೊಂಡಂತೆ ಏಳು ಸದಸ್ಯ ಪೀಠಗಳ ಪೈಕಿ ಆರು ಸದಸ್ಯ ನ್ಯಾಯ ಪೀಠಗಳು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಒಪ್ಪಿಗೆ ಸೂಚಿಸಿದ್ದು ಇದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದಂತಾಗಿದೆ ಈ ತೀರ್ಪನ್ನು ನಾವುಗಳು ಹೃದಯ ಪೂರ್ವಕವಾಗಿ ಸ್ವಾಗತಿಸಿದ್ದೇವೆ ಎಂದು ವಕೀಲ ಹನುಮಂತಪ್ಪ ತಿಳಿಸಿದ್ದರು.ಬದ್ದಿ ದುರುಗೇಶ್ ಮಾತನಾಡಿ ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಕೆಳ ರೇಖೆಯ ಮತ್ತು ಹಿಂದುಳಿದ ಉಪ ಪಂಗಡವದವರ ಆರ್ಥಿಕ ಪರಿಸ್ಥಿತಿ ಪರಿಗಣಿಸಿ ಮೀಸಲಾತಿಯನ್ನು ಕಲ್ಪಿಸಬೇಕು ಈ ತೀರ್ಪು ಡಾ, ಬಿ.ಆರ್. ಅಂಬೇಡ್ಕರ್ ರವರ ಸಂವಿಧಾನ ಕೀರ್ತಿ ಹೆಚ್ಚಿಸಿದಂತೆ ಆಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪಿ ಚಂದ್ರಶೇಖರ್, ಮೈಲಪ್ಪ, ಬಿ. ಪರಶುರಾಮ್ ಪಿ. ಅಜ್ಜಯ್ಯ, ಬಿ.ಶಿವರಾಜ್ ಕೆಂಗರಾಜ್ ಕೊಲ್ಲೂರಪ್ಪ ಕುಬೇರೆಪ್ಪ, ಪಿ. ಮಹೇಶ್, ವಿಷ್ಣು, ಅಂಬರೇಶ್, ಬಣಕಾರ್ ಪರಶುರಾಮ್ , ಕೊಟ್ರೇಶ್ ಮತ್ತು ಆಟೋ ಚಾಲಕರು ಯುವಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.