ಯಲಗೋಡ ಶಾಲೆಯ ಶಿಕ್ಷಕರ ದಿನಾಚರಣೆ ಆಚರಣೆ.
ಯಲಗೋಡ ಸ.06

ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡದ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಮಾಂತೇಶ ಕೂಟನೂರ ಇವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಂ.ಪಿ.ಎಸ್ ಯಲಗೋಡ ಶಾಲೆಯ ಗುರು ಮಾತೆಯರಾದ ಶ್ರೀಮತಿ ಮಂಗಳ ಬಾಯಿ ಅಲ್ಮದ ಇವರು ಮಕ್ಕಳಿಗೆ ಮುಂದೆ ಗುರಿ ಹಿಂದೆ ಗುರುವನ್ನು ಇಟ್ಟುಕೊಂಡು ನಿಮ್ಮ ಜೀವನವನ್ನು ರೂಪಿಸಿ ಕೊಳ್ಳಿ ಎಂಬ ಕಿವಿ ಮಾತನ್ನ ಹೇಳಿದರು. ಈ ಕಾರ್ಯಕ್ರಮದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡದ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಮಲ್ಲಿಕಾರ್ಜುನ್ ಅಂಕಲಗಿ ಸಹ ಶಿಕ್ಷಕರಾದ ಶ್ರೀ ದಸ್ತಗಿರ್ ಬಗಲಿ, ಶ್ರೀ ಸುರೇಶ ಬಡಿಗೇರ. ಶ್ರೀ ರಾಘವೇಂದ್ರ ಉಂಡಿಗೇರ. ಕುಮಾರಿ ಮೀನಾಕ್ಷಿ ಕೆಂಭಾವಿ ಹಾಗೂ ಶ್ರೀ ಗುರುನಾಥ ರೊಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕು. ದೌಲಪ್ಪ ತಳ್ಳೊಳ್ಳಿ ನಿರೂಪಿಸಿದರು.ಕು. ರಾಜಶೇಖರ ಕೂಟನೂರ ಸ್ವಾಗತಿಸಿದರು. ಹಾಗೂ ಕು. ಪ್ರಶಾಂತ್ ಹಂದಿಗನೂರು ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ