ಸೇವೆ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ನಿವೃತ್ತ – ಅಧಿಕಾರಿಗಳ ಸೇವೆ ಮಾದರಿ ಪಟೇಲ್.
ಔರಾದ ಅ.02

ಬೀದರ್ ಜಿಲ್ಲೆಯ ಔರಾದ ತಾಲೂಕಿನ ಔರಾದ ಪಟ್ಟಣದ ಇಲ್ಲಿಯ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಮಪ್ಪ ಎಲ್. ಮಡಕೆ, ಪ್ರಮುಖ ಅಗ್ನಿಶಾಮಕ ಸಿಬ್ಬಂದಿ ಮಕ್ಸುದ್ ಅಲೀ ಇವರ ಸೇವಾ ನಿವೃತ್ತಿ ಬೀಳ್ಕೊಡುಗೆ ಮತ್ತು ಸತ್ಕಾರ ಸಮಾರಂಭ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.ಈ ವೇಳೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಂ.ಡಿ ಮುಜಮೀಲ್ ಪಟೇಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಮಪ್ಪ ಅವರು ಅಗ್ನಿ ಶಾಮಕದಲ್ಲಿ ನಾನಾ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡುವ ಸರಳ ವ್ಯಕ್ತಿತ್ವ ಅವರದಾಗಿದೆ ಎಂದರು. ಸೇವೆ ಬಡ್ತಿ ಹೊಂದಿ ಇಲ್ಲಿ ಎಎಸ್‌ಐ ಸೇವೆ ಸಲ್ಲಿಸಿದರು. ಇಲಾಖೆಯಲ್ಲಿ ೩೨ ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದಾರೆ ಎಂದರು.ಮಕ್ಸುದ್ ಅಲೀ ಅವರು ಯೋಧರಾಗಿ ಸೇವೆ ಸಲ್ಲಿಸಿ ನಂತರ ಅಗ್ನಿಶಾಮಕ ಇಲಾಖೆಯ ಸೇವೆಗೆ ಸೇರಿದ್ದಾರೆ. ಅವರ ಸೇವೆ ಎಲ್ಲರೂ ಮೆಚ್ಚುವಂತದಾಗಿದೆ. ಇವರಿಬ್ಬರ ನಿವೃತ್ತಿಯಿಂದ ಇಲಾಖೆ ಒಳ್ಳೆಯ ಕೆಲಸಗಾರರಿಗೆ ಕಳೆದು ಕೊಂಡಿದೆ. ಆದರೆ ನಿಯಮಾನುಸಾರ ನಿವೃತ್ತಿ ಆಗಲೇ ಬೇಕಿದೆ ಎಂದರು. ಅಗ್ನಿಶಾಮಕದ ಠಾಣಾಧಿಕಾರಿ ಮಾಳಿಂಗರಾಯ್ ಮಾತನಾಡಿ, ಹುಟ್ಟುವುದು ಆಕಸ್ಮಿಕ ಆದರೆ ಸಾವು ಅನಿವಾರ್ಯವಿದೆ. ಅದೇ ರೀತಿ ಇಲಾಖೆಯಲ್ಲಿ ಸೇವೆಗೆ ಸೇರುವದು ಆಕಸ್ಮಿಕವಾಗಿ ಆದರೆ ಸೇವಾ ನಿವೃತ್ತಿ ಅನಿವಾರ್ಯವಾಗಿದೆ. ಆದರೆ ಸೇವೆಯಲ್ಲಿ ಕೆಲಸ ಮಾಡಿರುವ ಕೆಲಸಗಳು ಮಾತ್ರ ಶಾಶ್ವತವಾಗಿವೆ ಎಂದರು.ನಿವೃತ್ತ ಸಹಾಯಕ ಠಾಣಾಧಿಕಾರಿ ರಾಮಪ್ಪ ಎಲ್. ಮಡಕೆ ಮಾತನಾಡಿ, ಈ ಇಲಾಖೆಯಲ್ಲಿ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿರುವದು ನನ್ನ ಪುಣ್ಯ ಎಂದರು. ಎಲ್ಲಾ ಸಿಬ್ಬಂದಿಗಳು ನನ್ನೊಂದಿಗೆ ಸೇವೆ ಸಲ್ಲಿಸಿದ್ದಾರೆ. ಎಲ್ಲದಕ್ಕೂ ಬೆಂಬಲಿಸಿದ್ದಾರೆ ಎಂದು ಸ್ಮರಿಸಿದರು. ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮಕ್ಸುದ್ ಅಲೀ ಮಾತನಾಡಿದರು. ಸಿಬ್ಬಂದಿಗಳಾದ ರವಿ, ಸುರೇಶ, ದಯಾನಂದ, ಸಿಪಿ ಮೀತ್ರಾ, ಸಲೋದ್ಧಿನ್ ಅವರು ನಿವೃತ್ತಿ ಪಡೆದ ಅಧಿಕಾರಿಗಳ ಜೀವನ ಹಾಗೂ ಸೇವೆಯ ಕುರಿತು ತಮ್ಮ ಅನಸಿಕೆ ವ್ಯಕ್ತಪಡಿಸಿದರು.ಪ್ರಮುಖರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಬಿಸಿಎಂ ಇಲಾಖೆಯ ಅಧಿಕಾರಿ ರವೀಂದ್ರ ಮೇತ್ರೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅನಿಲಕುಮಾರ ಮೇಲ್ದೊಡ್ಡಿ, ಪಪಂ ಸದಸ್ಯ ಸಂಜುಕುಮಾರ ವಡಿಯಾರ್, ಎಬಿವಿಪಿ ಕಾರ್ಯಕರ್ತರಾದ ಅಶೋಕ ಶೆಂಬೆಳ್ಳಿ, ಶಶಿಕಾಂತ ರ‍್ಯಾಕಲೆ, ಪತ್ರಕರ್ತ ಅಂಬಾದಾಸ ನೇಳಗೆ, ಸಿಬ್ಬಂದಿಗಳಾದ ಅಮರ, ಓಂಪ್ರಕಾಶ ದಡ್ಡೆ, ಜಟ್ಟಿಂಗರಾಯ್, ಜಗದೀಶ, ಅಜರೋದ್ಧಿನ್, ಪ್ರಶಾಂತ, ಸಂಪಾಪತಿ, ಶೇಖ್ ಜನನಿ ಸೇರಿದಂತೆ ಅನೇಕರಿದ್ದರು. ಅಮರ ಬಂದು ಸ್ವಾಗತಿಸಿದರು. ಶ್ರೀಕರ್ ನಿರೂಪಿಸಿದರು. ಶ್ರೀನಿವಾಸ ರಡ್ಡಿ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.