“ಇಳಕಲ್ ಜ್ಯೋತಿ ವ್ಯಸನ ಹಸನ ಮಾಡಿ ಜಗವ ಬೆಳಗಿದ ಮಹಾಂತ ಜೋಳಿಗೆ”…..

ಶಿವಲೋಕದಿಂದ ಡಾ.ಮಹಾಂತ ಶಿವಯೋಗಿ ಅವತರಿಸಿ ಬಂದ
ಜಗಕೆ ಮಹಾಂತ ಜೋಳಿಗೆ ತಂದ
ಜನಗಳ ವ್ಯಸನ ಹಸನ ಮಾಡು ಪಣ ತೊಟ್ಟ
ಕೈಯಲ್ಲಿ ಜೋಳಿಗೆ ಹಿಡಿದು ನಿಂದಾನ
ಮನೆ ಮನೆಗೆ ಬಂದು ಭಿಕ್ಷೆ ಬೇಡಿ ನಿಂದ
ಕೂಗಿ ಕರೆತಾನ ಜಾತಿ ಬೇಧವಿಲ್ಲದೆ
ಬನ್ನಿ ಬನ್ನಿ ಮಾನವೀಯ ಕುಲದ ಮನುಕುಲದ
ಬಾಂಧವರೇ
ತನ್ನಿ ತನ್ನಿ ದುರ್ಗುಣ ದುಶ್ಚಟಗಳ ಸುರಿಯಿರಿ ಜೋಳಿಗೆಗೆ ಎಂದ
ತಂಬಾಕು ಗುಟ್ಕಾ ಸಿಗರೇಟು ಸರಾಯಿ
ಸಹವಾಸ ಮರಣ ಶಾಸನ ಸಾರಿ ಹೇಳ್ತಾನ
ದುಶ್ಚಟಗಳ ದೂರ ತಳ್ಳಿ ನಿವಾಗಿ ನಿರೋಗಿ
ಹರುಷದಿ ಹಾರೈಸಿ ನಡೆದಾಡುವ ದೇವರಾದ
ಡಾ.ಮಹಾಂತ ಶಿವಯೋಗಿ ವ್ಯಸನ ಮುಕ್ತ
ಸಮಾಜ ನಿರ್ಮಾಣ ಚೈತನ್ಯ
ಜಗಕೆ ಒಳಿತು ಮಾಡ್ಯಾನ ನಿಜ ದೇವರಾದ
ಇಳಕಲ್ ಜ್ಯೋತಿ
ಡಾ.ಮಹಾಂತ ಶಿವಯೋಗಿ
ಮಹಾಂತ ಜೋಳಿಗೆ ಹರಿಕಾರ
ವ್ಯಸನ ಮುಕ್ತ ಸಮಾಜ ಕಟ್ಟೋಣ
ಜನ ಸಮೂಹದಿ ಜೋಳಿಗೆ ಹಿಡದಾನ
ಸಿರಿ ಸಂಪತ್ತು ಬೇಡ ದುಶ್ಚಟ ದುರ್ಗುಣ
ಜೋಳಿಗೆ ನೀಡಿ ಎಂದ
ಮಧ್ಯಪಾನ ಸ್ಮಶಾನದಿ ದಾರಿ ಬೇಡ ಸಹವಾಸ
ಬದುಕು ಸುಡುವ ಸಿಗರೇಟು ತಂಬಾಕು ನನ್ನ
ಜೋಳಿಗೆಗೆ ಹಾಕಿ
ಸಾರ್ಥಕ ಬದುಕು ಸಾಗಿಸಿ ವ್ಯಸನ ದೇಹ
ದೇಶದ ಮಾರಕ ಚಟದ ಹಟ ಬಿಡಿ ಅಫೀಮು
ಗಾಂಜಾ ಸೇವನೆ ಮರಣ ಶಾಸನ ಅಳಿಸಲು
ಜೋಳಿಗೆ ಒಡ್ಡಿ ನಿಂತಾನ
ಡಾ.ಮಹಾಂತ ಶಿವಯೋಗಿಗಳ ಜೋಳಿಗೆಗೆ
ಪ್ರಭಾವದಿ
ಸರ್ವ ಜನ ವ್ಯಸನ ಮುಕ್ತ ಹೊಂದಿ
ಆರೋಗ್ಯವಂತ ಸಮಾಜ ದೇಶ ನಿರ್ಮಾಣ
ನಮ್ಮ ಗುರಿ ಸುಶಿಕ್ಷಿತರು ಯುವಕರು
ಡಾ.ಮಹಾಂತ ಶಿವಯೋಗಿಗಳ ಜೋಳಿಗೆಗೆ
ಚಾಡಿ ದುರ್ಗುಣ ದುಶ್ಚಟಗಳ ಮಹಾತ್ಮನ ಜೋಳಿಗೆಗೆ ಸುರಿದು
ಡಾ.ಮಹಾಂತ ಶಿವಯೋಗಿಗಳಿಗೆ ಸಾವಿರ
ಶರಣು
ಮನವೊಪ್ಪಿ ನಮನ ಸಲ್ಲಿಸೋಣ
ವ್ಯಸನ ಮುಕ್ತಿ ಹೊಂದಿ ಬಾಳು
ಹಸನವಾಗಿಸೋಣ
ಪೂಜ್ಯ ಶ್ರೀ ಡಾ.ಮಹಾಂತ ಶಿವಯೋಗಿಗಳ
ಅಮೃತ ಗಳಿಗೆ ಶುಭ ತರಲಿ
ಕೃಪೆ ಇರಲಿ ಗುರುವೇ ಸರ್ವರಿಗೂ ಅನವರತ.
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ