“ನುಡಿ ಮುತ್ತು” ಸಿನಿಮಾ – ಲಿರಿಕಲ್ ವಿಡಿಯೋ ಬಿಡುಗಡೆ.
ನೆಲಮಂಗಲ ಅ.03

ಭೈರವಿ ಕ್ರಿಯೇಷನ್ಸ್ ಅವರ ಗೀತಾ ಎ.ವಿ ನಿರ್ಮಾಣದ ‘ನುಡಿ ಮುತ್ತು’ ಕನ್ನಡ ಮಕ್ಕಳ ಚಲನ ಚಿತ್ರದ “ಸೇರಿಸಿ ಸೇರಿಸಿ ಸರ್ಕಾರಿ ಶಾಲೆಗೇ” ಎಂಬ ಲಿರಿಕಲ್ ವಿಡಿಯೋವನ್ನು ನೆಲಮಂಗಲದ ಭೈರವಿ ನೃತ್ಯ ಮಂದಿರದಲ್ಲಿ ಬಾಲನಟಿ ಭೈರವಿ ಮತ್ತು ಲೇಖನ ಜೊತೆ ಬಿಡುಗಡೆ ಮಾಡಲಾಯಿತು. ನೆಲಮಂಗಲ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಅವರು ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೆ ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಈ ಹಾಡಿನಲ್ಲಿ ಕನ್ನಡ ಭಾಷೆಗೆ ಮತ್ತು ಸರ್ಕಾರಿ ಶಾಲೆಗೆ ಒಂದು ಒಳ್ಳೆಯ ಸಂದೇಶ ರವಾನೆಯಾಗಿದೆ ಈ ಪ್ರಯತ್ನಕ್ಕೆ ಒಳ್ಳೆಯ ಫಲ ದೊರೆಯಲಿ ಎಂದು ಹಾರೈಸಿದರು. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿರುವ ಭೈರವಿ ಬಾಲ ನಟಿಯಾಗಿ, ನೃತ್ಯ ಮಾಡುವುದರಲ್ಲಿ, ಲೀಲಾ ಜಾಲವಾಗಿ ಅಭಿನಯ ಮಾಡುವುದರಲ್ಲಿ, ವೇದಿಕೆಯಲ್ಲಿ ಭಯವಿಲ್ಲದೆ ಸಂಭಾಷಣೆ ಮಾಡುವುದರಲ್ಲಿ ನಿಪುಣಳು ಆಗಿದ್ದು ಹಲವು ರಿಯಾಲಿಟಿ ಶೋಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದಾಳೆ.

ಈಕೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು ಸಿನಿಮಾದ ಸ್ವಲ್ಪ ಭಾಗ ಭೈರವಿಯ ಜೀವನದ ನೈಜ ಘಟನೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವತಿ, ಕೋರಮಂಗಲ, ತುಮಕೂರು ಜಿಲ್ಲೆಯ ಹುಲಿಯೂರು ದುರ್ಗ, ರಾಮನಗರ ಜಿಲ್ಲೆಯ ಕೋಡಂಬಳ್ಳಿ ಮೊದಲಾದ ಕಡೆ ಚಿತ್ರೀಕರಣ ಮಾಡಲಾಗಿದೆ ಎಂದು ಸಹ ನಿರ್ಮಾಪಕ ಮನೋಜ್ ಬಾಬು ತಿಳಿಸಿದರು. ಸಮಾರಂಭದಲ್ಲಿ ವಕೀಲರಾದ ಹುಲುಕುಂಟೆ ಮಹೇಶ್, ಮಹಿಳಾ ಮುಖಂಡರಾದ ರಾಧಾಮಣಿ, ನಿರ್ದೇಶಕ ಕಾರ್ತಿಕ್ ರಾಂ ಮತ್ತಿತರರು ಉಪಸ್ಥಿತರಿದ್ದರು. ತಾರಾಗಣದಲ್ಲಿ ಭೈರವಿ, ಗನಿಕಾ, ಲಿಖಿತ, ಕೀರ್ತಿ, ರೋಜಾ, ನೊಣವಿನಕೆರೆ ರಾಮಕೃಷ್ಣಪ್ಪ,, ಭುವನ,ಕುರಿ ಗಂಗೂ, ಮನೋಜ್ ಬಾಬು, ಸೂರ್ಯ ಪಿ.ಜೇ ಕೋಬ್ರಾ, ನಾಗರಾಜ್, ಶ್ರೀನಿಧಿ ಭಟ್, ಪ್ರಜ್ವಲ್ ,ರಾಜೇಶ್ವರಿ, ನವ್ಯಶ್ರೀ, ವಿನಾಯಕ ಕುಲಕರ್ಣಿ,ಚಿರಂಜೀವಿ ಕೋರಮಂಗಲ ಏಕನಾಥ್, ಚೇತನ್, ಕಾರ್ತಿಕ್, ಮಲ್ಲಿಕಾರ್ಜುನ, ಸಂದರ್ಶ, ಲೋಕೇಶ್,. ಯಶೋದಮ್ಮ, ಪುಟ್ಟಸ್ವಾಮಿ, ಮಹೇಶ್, ಅಭಿಷೇಕ್,ಅನು ಶೆಟ್ಟಿ, ಮುತ್ತು ಹಾಗೂ ದೇವರಾಜ್ ಶೆಟ್ಟಿ ಮೊದಲದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಮೈಸೂರ್ ಸೋಮು , ಧ್ವನಿಮುದ್ರಣ ಹರಿಚರಣ್, ಸಂಗೀತ ಶಿವಸತ್ಯ, ಸಾಹಿತ್ಯ ಶಿವಸತ್ಯ, ಶ್ರೀ ಕಾರ್ತಿಕ್ ರಾಂ , ಸಂಕಲನ ಮತ್ತು ಗ್ರಾಫಿಕ್ಸ್ ಅಭಿಷೇಕ್ ರಾವ್ ,ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ , ಸಹ ನಿರ್ದೇಶನ ಸುಬಿನ್, ಮನೋಜ್ ಬಾಬು, ನವ್ಯಶ್ರೀ, ಕಥೆ-ಚಿತ್ರಕಥೆ-ನಿರ್ದೇಶನ ಶ್ರೀ ಕಾರ್ತಿಕ್ ರಾಮ್, ಸಹ ನಿರ್ಮಾಪಕರು ಮನೋಜ್ ಬಾಬು , ಚಿತ್ರಕ್ಕೆ ಸಹಕಾರ ಕೃಷ್ಣಮೂರ್ತಿ ಚನ್ನಪಟ್ಟಣ, ಮಹೇಶ್ ಸುಳ್ಳೇರಿ, ಪುಟ್ಟಸ್ವಾಮಿ ಬಲ್ಲಾ ಪಟ್ಟಣ, ಈ ರಾಜಣ್ಣ ಬಲ್ಲಾಪಟ್ಟಣ, ನಯಾಜ್ ಪಾಸಾಬಲ್ಲಪಟ್ಟಣ, ನರಸಿಂಹಮೂರ್ತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋರಮಂಗಲ, ಚೇತನ್ ಕೋರಮಂಗಲ. ನಾಗರಾಜು, ಮುಖ್ಯಶಿಕ್ಷಕರು, ಸರ್ಕಾರಿ ಶಾಲೆ, ಕೋಡಂಬಳ್ಳಿ ಅವರದಿದೆ. ಶೀಘ್ರದಲ್ಲೇ ಚಿತ್ರವನ್ನು ಬೆಳ್ಳಿ ತೆರೆಗೆ ತರಲಾಗುವದು ಎಂದು ನಿರ್ಮಾಪಕಿ ಗೀತಾ.ಎ.ವಿ.ತಿಳಿಸಿದ್ದಾರೆ.
*****
ವರದಿ:ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬