“ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕೃಪೆ”…..

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು




ಭುವನಗಿರಿಯಲಿ ಶಂಕುಕರ್ಣ ಅವತಾರಿಯು
ಶ್ರೀಗುರು ರಾಘವೇಂದ್ರರಾಯರು
ಜನಪ್ರಿಯ ಪರಿಮಳಾಚಾರ್ಯ
ಬಿರಿದಾಂಕಿತರು
ಭಕ್ತಿ ಭಾವದಿ ಪೂಜಿಸುವ ಭಕ್ತ ಜನಕೋಟಿಗೆ
ಕಲಿಯುಗ ಪ್ರತ್ಯಕ್ಷ ದೇವರು
ಕಾಮಧೇನು ಕಲ್ಪವೃಕ್ಷ ಶ್ರೀಗುರು
ಸಾರ್ವಭೌಮರು ಶ್ರೀರಾಘವೇಂದ್ರ
ಸ್ವಾಮಿಯೇ ನಮಃ
ಶ್ರೀಮೂಲರಾಮ ಪೂಜಿಪ
ಶ್ರೀಗುರು ರಾಘವೇಂದ್ರಾಯ ನಮಃ
ಶ್ರೀ ಗುರು ರಾಯರು ಕೃಪಾಕರನು
ಭಯ ದುಃಖ ನಿವಾರಕನು
ಸದಾ ನೆನೆವ ಮನದಲಿ ವರ ಪ್ರಸಾದ
ದಯಾ ಪಾಲಿಸುವ ಮಹಾಮಹಿಮ
ಶ್ರೀ ಗುರು ರಾಯರು
ಸರ್ವವು ನೀನೇ ಎನ್ನುವ ಮನಕೆ
ಶ್ರೀನಿವಾಸ ಧರ್ಶನ ಸ್ವರೂಪದಲಿ ಕಾಣುವ
ಶುದ್ಧ ಮನದಿ ಜ್ಞಾನಿಸುವಂಗೆ ಕೃಪೆತೋರುವ
ಶ್ರೀ ಗುರು ರಾಘವೇಂದ್ರರಾಯ ನಮಃ
ಶ್ರೀರಾಯರು ಮಂತ್ರಾಕ್ಷತೆ ಸುಜ್ಞಾನದ
ವರದಾತ ಶ್ರೀಗುರು ರಾಘವೇಂದ್ರ ಸ್ವಾಮಿಗಳು
ಶ್ರೀಕೃಷ್ಣ ಕೊಳಲು ಧ್ವನಿ ರೂಪದಲಿ
ಸಂತೃಪ್ತ ಭಾವ ಕರುಣಿಸುವನು
ಜಗದ ಭಕ್ತ ಜನರ ಶುಭ ಫಲಪ್ರದಾಯ
ಶ್ರೀಗುರು ಮಹಾಮಹಿಮರು
ಶ್ರೀರಾಘವೇಂದ್ರ ಸ್ವಾಮಿಗಳ ಪೂಜಿಸುವ
ಜ್ಞಾನಿಸುವ ಮನ ಪಾವನವು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ