ಸಾಂಸ್ಕೃತಿಕ ಮತ್ತು ಶಾರೀರಿಕ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮ.
ಕಲಕೇರಿ ಆ.04

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ 6-8-2024. ಮಂಗಳವಾರ ದಂದು ಸಾಂಸ್ಕೃತಿಕ ಮತ್ತ ಶಾರೀರಿಕ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮಂಗಳವಾರ ಬೆಳಗ್ಗೆ.10 ಗಂಟೆಗೆ ನಡೆಯುವುದು.ಕಲಕೇರಿ ಗ್ರಾಮದ ಮಲ್ಲಿಕಾರ್ಜುನ್ ವಿದ್ಯಾ ವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನಾದಾನಿತ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ 6-8-2024. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ 2024/25ನೇ ಸಾಲಿನ ಸಾಂಸ್ಕೃತಿಕ ಮತ್ತು ಶಾರೀರಿಕ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯುವುದು. ಕಾರ್ಯಕ್ರಮದ ಸಾನಿಧ್ಯವನ್ನುಕಲಕೇರಿ ಗುರು ಮರುಳಾರಾದ್ಯ ಸಂಸ್ಥಾನ ಹಿರೇಮಠ ಸಿದ್ದರಾಮ ಶಿವಾಚಾರ್ಯರು. ವಹಿಸಲಿದ್ದು ಗೌರವ ಅಧ್ಯಕ್ಷರಾಗಿ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಜೋಗುರ್, ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ್,ವಹಿಸುವರು ಉದ್ಘಾಟಕರಾಗಿ ಷಣ್ಕುಕಪ್ಪ ಝಳಕಿ, ಮಲಕಾಜಪ್ಪಗೌಡ ಬಿರಾದಾರ ಭಾಗವಹಿಸುವರು.ಪ್ರಾಚಾರ್ಯ ಸಿ.ಎಸ್. ಹಿರೇಮಠ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳು ಸಿಂದಗಿಯ ಎಚ್. ಚಿ. ಪದವಿ ಪೂರ್ವ ಕಾಲೇಜಿನ ಪ್ರಚಾರ್ಯ. ಎ .ಆರ್. ಹೆಗ್ಗಣದಬಡ್ಡಿ, ಕಲಕೇರಿ ಪಿಎಸ್ಐ ಸುರೇಶ್ ಮಂಟೂರ ಭಾಗಿಯಾಗುವರು. ಈ ಸಂದರ್ಭದಲ್ಲಿ ಕಾಲೇಜಿನ ಮಕ್ಕಳಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ ಮನಗೂಳಿ. ತಾಳಿಕೋಟೆ.