ಯಾದಗಿರಿ ಪಿ.ಎಸ್.ಐ ಪರಶುರಾಮ್ ಚಲವಾದಿ ಅವರ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಲು – ದಲಿತ ಮುಖಂಡ ಮುತ್ತಣ್ಣ ಮೇತ್ರಿ ಅವರಿಂದ ಆಗ್ರಹ.
ಬಾಗಲಕೋಟೆ ಆ.04

ಯಾದಗಿರಿ ಪಿಎಸ್ಐ ಪರಶುರಾಮ್ ಚಲವಾದಿ ಅವರ ಸಾವು ನಿಗೂಢವಾಗಿದ್ದು. ಸಾವಿನ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ. ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಸುಪುತ್ರ ಪಂಪನಗೌಡ ಪಾಟೀಲ್ ಎಂಬುವರು ಹಣಕ್ಕೆ ಕಿರುಕುಳ ನೀಡಿ ಜಾತಿ ನಿಂದನೆ ಮಾಡಿದ್ದಕ್ಕಾಗಿ ಆತ್ಮಹತ್ಯೆ ಮಾಡಿ ಕೊಂಡಿರುವ ಶೆಂಖೆ ವ್ಯಕ್ತವಾಗಿದ್ದು. ಕೂಡಲೇ ತಲೆ ಮರೆಸಿಕೊಂಡ ಶಾಸಕ ಚೆನ್ನಾರಡ್ಡಿ ಹಾಗೂ ಅವರ ಮಗ ಪಂಪನಗೌಡರನ್ನು ಕೂಡಲೇ ಬಂಧಿಸಿ ಕಾನೂನಿನ ಪ್ರಕಾರ ಉಗ್ರ ಶಿಕ್ಷೆ ನೀಡಬೇಕು ಯಾದಗಿರಿ ನಗರ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಇನ್ನೂ ಒಂದು ವರ್ಷ ಕೂಡ ಕಳೆದಿಲ್ಲ ಅಷ್ಟರಲ್ಲಿ ವರ್ಗಾವಣೆ ಮಾಡಿರುವುದು ಪ್ರಭಾವಿ ನಾಯಕರು ಹಣಕ್ಕೆ( ದುಡ್ಡಿಗೆ ಬೇಡಿಕೆ ಇಟ್ಟಿದ್ದರಂತೆ ಅದಕ್ಕಾಗಿ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಪಿಎಸ್ಐ ಪರಶುರಾಮ್ ಚಲವಾದಿ ಸಾವಿನ ಪ್ರಕರಣದ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಬೇಕು, ಸರ್ಕಾರ ರಾಜಕೀಯ ಪ್ರಭಾವಕ್ಕೆ ಮನಿಯದೆ ಕೊಲೆ ಪ್ರಕರಣ ಹಾಗೂ ಜಾತಿ ನಿಂದನೆ ದಡಿ ಪ್ರಕರಣ ದಾಖಲೆ ಮಾಡಿಕೊಂಡು ದೂರು ದಾಖಲಾದ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಸುಪುತ್ರ ಪಂಪನಗೌಡರನ್ನು ಬಂಧಿಸಿ ಉಗ್ರವಾದ ಶಿಕ್ಷೆ ನೀಡಬೇಕು ಶಾಸಕ ಚೆನ್ನಾರೆಡ್ಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಸರ್ಕಾರ ಇವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದರೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯದ್ಯಂತ ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಸಂಚಾಲಕರಾದ ಮುತ್ತಣ್ಣ ಮೇತ್ರಿ ಹನುಮಂತ್ ಚಿಮ್ಮಲಗಿ ಆನಂದ್ ದೊಡಮನಿ ಸಂಗಣ್ಣ ಮಡ್ಡಿ ಕೃಷ್ಣಮೂರ್ತಿ ನಾಯ್ಕರ್ ಲಕ್ಷ್ಮಣ ಹರಿಜನ್ ಮಾರುತಿ ಮರೆಗುದ್ದಿ ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.