50, ವರ್ಷಗಳ ಸಂಭ್ರಮೋತ್ಸವ ಕಾರ್ಯಕ್ರಮ ಯಶಸ್ವಿ ಗೊಳಿಸಿ – ಕಾಸಿಮಪ್ಪ ಡಿ. ಮುರಾರಿ.

ಮಸ್ಕಿ ಆ.04

ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿತ ದಲಿತ ಚಳುವಳಿ ಹೋರಾಟಕ್ಕೆ ೫೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಗಸ್ಟ್ ೭ ರಂದು ಬೆಂಗಳೂರಿನ ಡಾ: ಅಂಬೇಡ್ಕರ್ ಭವನದಲ್ಲಿ ೫೦ ವರ್ಷಗಳ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದ್ದು ಯಶಸ್ವಿ ಗೊಳಿಸಲು ಸಹಕರಿಸಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಸ್ಕಿ ತಾಲೂಕು ಅಧ್ಯಕ್ಷ ಕಾಸಿಮಪ್ಪ ಡಿ. ಮುರಾರಿ ತಿಳಿಸಿದರು.ಮಸ್ಕಿ ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಬಲಡ್ಯ ಜಾತಿಗಳಿಂದ ತುಳಿಸಿ ಕೊಂಡೆ ಬದುಕಿದ್ದ ತಳ ಸಮುದಾಯಗಳನ್ನು ಒಗ್ಗೂಡಿಸಿದ್ದು ಶೋಷಣೆಯ ವಿರುದ್ಧ ಹೋರಾಟಕ್ಕೆ ಸಜ್ಜು ಗೊಳಿಸಿದ್ದು ಕರ್ನಾಟಕದ ಮಟ್ಟಿಗೆ ದಲಿತ ಚಳುವಳಿ ಮಾತ್ರ. ಭದ್ರಾವತಿಯಲ್ಲಿ ಹುಟ್ಟು ಹಾಕಿ ರಾಜ್ಯದ ಉದ್ದಗಲಕ್ಕೂ ಹರಡಿ ಹೆಮ್ಮರವಾಗುವಂತೆ ದುಡಿದವರು ಬಿ.ಕೃಷ್ಣಪ್ಪನವರು ಇದು ಎಲ್ಲರ ಪಾಲಿಗೆ ಸ್ವಾಭಿಮಾನದ ಸಂಗತಿಯಾಗಿದೆ. ಆದ್ದರಿಂದ ಅವರ ಜನ್ಮದಿನದ ಅಂಗವಾಗಿ ೫೦ ವರ್ಷಗಳ ತುಂಬಿದ ಹಿನ್ನೆಲೆಯಲ್ಲಿ ಬೃಹತ್ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಬಿ.ಕೃಷ್ಣಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ಮಾಡಲಾಗುವುದು ನ್ಯಾಯಮೂರ್ತಿ ಎಚ್.ಎನ್. ನಾಗ ಮೋಹನದಾಸ್ ನೀಡಿರುವ ವರದಿಯನ್ನು ಅಂಗೀಕಾರ ಮಾಡಿರುವ ಸರ್ಕಾರ ಆಂಧ್ರ ಮತ್ತು ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಅನುಷ್ಠಾನ ಗೊಳಿಸಬೇಕು ಹಾಗೂ ಇನ್ನಿತರ ೧೧ ಬೇಡಿಕೆಗಳನ್ನು ಇಟ್ಟುಕೊಂಡು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಕಾರ್ಯಕ್ರಮದಲ್ಲಿ ಸಿ.ಎಂ ಸೇರಿದಂತೆ ಸಚಿವರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಮಸ್ಕಿ ತಾಲೂಕಿನಿಂದ ೨೦೦ ಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಲಿದ್ದಾರೆ. ಆದ್ದರಿಂದ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿಯ ರಮೇಶ್ ಬೆಳ್ಳಿಗನೂರು, ರಡ್ದೆಪ್ಪ, ಮೋಹನ್ ಎಂ. ಮುರಾರಿ, ಡ್ಯಾಮಣ್ಣ ಸಂತೆಕಲ್ಲೂರು ಇದ್ದರು.ಬಾಕ್ಸ್ ಸುದ್ದಿ -ಒಳ ಮೀಸಲಾತಿ ತೀರ್ಪು ಸ್ವಾಗತಾರ್ಹಕಳೆದ ಹಲವು ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವು. ಇದೀಗ ನಮ್ಮ ನ್ಯಾಯಯುತವಾದ ಬೇಡಿಕೆಗೆ ಜಯ ಸಿಕ್ಕಿದ್ದು ಒಳ ಮೀಸಲಾತಿ ತೀರ್ಪು ಸ್ವಾಗತಾರ್ಹವಾಗಿದ್ದು ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button