ಜೂ, 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ – ಡಾ. ಮಹಾಂತೇಶ ಕಡಪಟ್ಟಿ.
ಹುನಗುಂದ ಜೂನ್.20

ಪಟ್ಟಣದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವತಿಯಿಂದ ಜೂ. 21 ರಂದು ಶುಕ್ರವಾರ ಬೆಳಗ್ಗೆ 7 ಗಂಟೆಗೆ ವಿ.ಮ ಪ್ರೌಢ ಶಾಲೆಯ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ವಿ.ಮ.ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಹೇಳಿದರು.ಬುಧವಾರ ಪಟ್ಟಣದ ಶ್ರೀ ವಿ.ಮ.ಸಂಘದ ಕಾರ್ಯಾಲಯದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಮ್ಮ ಮತ್ತು ಸಮಾಜದ ಏಳ್ಗೆಗಾಗಿ ಎನ್ನುವ ಘೋಷ ವಾಕ್ಯದಡಿಯಲ್ಲಿ ಆಚರಿಸಲಾಗುವುದು.

ನಮ್ಮ ಪ್ರೌಢ ಶಾಲೆಯ ಯೋಗ ಶಿಕ್ಷಕರಾದ ಎಂ.ಎಸ್.ಮಾವಿನಕಾಯಿ ಮತ್ತು ಭುವನೇಶ್ವರಿ ಇವರಿಂದ ಯೋಗ ತರಬೇತಿಯನ್ನು ನೀಡಲಾಗುವುದು. ಯೋಗ ದಿನ ದಂದು ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ೨ ಸಾವಿರ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯ ಪಾಲಕರು ಪೋಷಕರು ಮತ್ತು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಎಂದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರವಿ ಹುಚನೂರ, ಎಂ.ಎಸ್.ಮಠ, ಅರಣೋದಯ ದುದ್ಗಿ, ರಾಚಪ್ಪ ರಾಜಮನಿ, ಬಸವರಾಜ ಕೆಂದೂರ, ಮಹಾಂತೇಶ ಕತ್ತಿ, ಡಾ.ಎಸ್.ಎಚ್.ಮುದಗಲ್ಲ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಮಲ್ಲಿಕಾರ್ಜುನ್.ಎಂ.ಬಂಡರಗಲ್ಲ ಹುನಗುಂದ.