ಗೀತಾ ಮ್ಯಾಕಲದೊಡ್ಡಿಗೆ – ಒಲಿದ ಬಂಗಾರದ ಪದಕ.
ಮಸ್ಕಿ ಆ.07

ಪಟ್ಟಣದ ಗೀತಾ.ತಂದೆ.ವೆಂಕಟೇಶ.ಮ್ಯಾಕಲದೊಡ್ಡಿ ಎನ್ನುವ ವಿದ್ಯಾರ್ಥಿನಿ ಲಿಂಗಸುಗೂರಿನ ಉಮಾ ಮಹೇಶ್ವರಿ ಪದವಿ ಕಾಲೇಜಿನಲ್ಲಿ ಬಿ,ಎಸ್ಸಿ, ಪದವಿಯ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಬಂಗಾರದ ಪದಕವನ್ನು ಪಡೆದಿದ್ದಾರೆ.ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿನಿ ಸತತ ಪ್ರಯತ್ನ, ಕಠಿಣ ಪರಿಶ್ರಮ ವಹಿಸಿ ಮಾಡಿದ ಸಾಧನೆ, ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಅದು ಹಣ ಅಂತಸ್ತಿನಿಂದ ದಕ್ಕುವಂತಹದ್ದಲ್ಲ ಶ್ರದ್ದೆ, ಶ್ರಮ, ಇದ್ದರೆ ಯಾರಾದರೂ ಸಾಧನೆ ಮಾಡ ಬಹುದೆಂಬ ಸಂದೇಶವನ್ನು ರವಾನಿಸಿದ್ದಾರೆ. ಇದೇ ತಿಂಗಳು ನಡೆದ ಗುಲ್ಬರ್ಗ ವಿಶ್ವ ವಿದ್ಯಾಲಯದ 42 ನೇ ಘಟಿಕೋತ್ಸವದಲ್ಲಿ ಪದಕ ಮತ್ತು ಪ್ರಮಾಣ ಪತ್ರವನ್ನು ಪ್ರಧಾನ ಮಾಡಲಾಗುವು ದೆಂದು ವಿಶ್ವವಿದ್ಯಾಲಯ ಹಾಗೂ ಉಮಾ ಮಹೇಶ್ವರಿ ಪದವಿ ಕಾಲೇಜಿನ ಕಾರ್ಯಾಲಯ ಮಾಹಿತಿ ನೀಡಿದೆ. ಇದರಿಂದ ಪುಳಕಿತರಾದ ಪಾಲಕರು ಮಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ, ಜೊತೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಶುಭ ಕಾಮನೆಗಳನ್ನು ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್.ಕಿಳ್ಳಿ.ಇಲಕಲ್ಲ.