ಮಸ್ಕಿ ನೂತನ ತಹಶೀಲ್ದಾರರಿಗೆ ದಲಿತ ಸಾಹಿತ್ಯ ಪರಿಷತ್ ಸನ್ಮಾನ.

ಮಸ್ಕಿ ಆ.09

ತಾಲೂಕಿನ ನೂತನ ತಾಲೂಕ ದಂಡಾಧಿಕಾರಿ ಡಾ.ಮಲ್ಲಪ್ಪ.ಕೆ.ಯರಗೋಳ ಗ್ರೇಡ್-೧ ತಹಶೀಲ್ದಾರರು ಇವರನ್ನು ದಲಿತ ಸಾಹಿತ್ಯ ಪರಿಷತ್ ತಾಲೂಕ ಘಟಕ ಹಾಗೂ ಯುವ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಶುಕ್ರವಾರ ಮಧ್ಯಾಹ್ನ ದಲಿತ ಸಾಹಿತ್ಯ ಪರಿಷತ್ ತಾಲೂಕ ಘಟಕ ಹಾಗೂ ಯುವ ಘಟಕದ ಮಸ್ಕಿ ವತಿಯಿಂದ ನೂತನ ತಾಲೂಕ ದಂಡಾಧಿಕಾರಿ ಡಾ.ಮಲ್ಲಪ್ಪ.ಕೆ.ಯರಗೋಳ ಗ್ರೇಡ್-೧ ತಹಶೀಲ್ದಾರರು ಶಾಲು, ಹೂವಿನಹಾರ ಹಾಗೂ ಪುಸ್ತಕ ಉಡುಗೊರೆಯನ್ನು ನೀಡಿ ಗೌರವೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಮಲ್ಲಯ್ಯ.ಕೆ ನೀರಾವರಿ ಇಲಾಖೆ, ನಾಗೇಶ್ ಜಂಗರಮರ ಹಳ್ಳಿ, ಡಾ.ಬಸವರಾಜ್ ಗುಡದೂರು, ಯಮನೂರಪ್ಪ ಪರಾಪುರ, ಪರಪ್ಪ ಭಂಡಾರಿ ಹಂಚಿನಾಳ, ಶಿವಣ್ಣ ನಾಯಕ ಮಸ್ಕಿ, ಹುಲುಗಪ್ಪ ಗೋನಾಳ, ಹನುಮಂತಪ್ಪ ಕಡಬೂರು, ಸಂದೇಶ ಪಿಡಿಒ ಕೋಳ ಬಾಳ, ಜಮದಗ್ನಿ ಗೋನಾಳ ವಿದ್ಯುತ್ ಗುತ್ತಿಗೆದಾರರು, ಗ್ಯಾನಪ್ಪ ದೊಡ್ಡಮನಿ ಪತ್ರಕರ್ತರು ಮೆದಿಕಿನಾಳ ದಲಿತ ಸಂಘಟನೆಯ ಮುಖಂಡರಾದ ದ್ಯಾಮಣ್ಣ ಸಂತೆಕೆಲ್ಲೂರು, ಅಮರೇಶ ಡಬ್ಬೇರ್ ಮಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button