ಗುಂಡನಪಲ್ಲೆ ಜ್ಞಾನ ದೇಗುಲದಲ್ಲಿ ಶ್ರೀ ಸರಸ್ವತಿ ದೇವಿಯ ಪ್ರಾಣ ಪ್ರತಿಷ್ಠಾಪನೆ.
ಗುಂಡನಪಲ್ಲೆ ಆ.09

ಗುಂಡನಪಲ್ಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಸರಸ್ವತಿ ದೇವಿ ಪ್ರಾಣ ಪ್ರತಿಷ್ಠಾಪನೆ ಜಗವ ಪೂಜಿತೆ ವಿದ್ಯಾ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂಭ್ರಮ, ಸಡಗರ ದಿಂದ ಜರುಗಿತು. ಸೂರ್ಯೋದಯ ಮುಂಜಾನೆ ಶುಭ ಮೂಹೂರ್ತದಲ್ಲಿ ಶಾಲಾ ಮುದ್ದು ಮಕ್ಕಳು ವಿವಿಧ ವೇಷ ಭೂಷಣ ಧರಿಸಿ ಮಂಗಳ ವಾದ್ಯಗಳೊಂದಿಗೆ ಕುಂಭ ಮೇಳ ಆರತಿ ಹೂವು ಹಣ್ಣುಗಳೊಂದಿಗೆ ಗ್ರಾಮದ ಮುತ್ತೈದೆಯರು, ಮುಖಂಡರು, ಯುವಕರು, ಶಾಲಾ ಗುರು ವೃಂದದವರು ಸೇರಿ ಗ್ರಾಮದಲ್ಲಿ ಶ್ರೀ ಶಾರದಾಂಬೆ ತೆರೆದ ವಾಹನದಲ್ಲಿ ಶಾಲಾ ಜ್ಞಾನ ದೇಗುಲಕ್ಕೆ ಬರ ಮಾಡಿ ಕೊಂಡು ಜ್ಞಾನ ದೇಗುಲದಲ್ಲಿ ಶ್ರೀ ಶಾರದಾಂಬೆ ಮೂರ್ತಿ ಪ್ರತಿ ಷ್ಠಾಪನೆಯನ್ನು ಪಂಚಾಮೃತ ಅಭಿಶೇಕ ಹೂ ಹಣ್ಣುಗಳೊಂದಿಗೆ ಮಂತ್ರ ಘೋಷಗಳ ಸಂಕಲ್ಪ ಮಾಡಿ ವಿದ್ಯಾ ಅಧಿದೇವತೆ ಶ್ರೀ ಶಾರದಾಂಬೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಿ ವಿದ್ಯಾರ್ಥಿಗಳು ಗ್ರಾಮದ ಮುತ್ತೈದೆಯರು, ಮುಖಂಡರು ಯುವಕರು, ಭಕ್ತಿ ಭಾವ ದಿಂದ ಹೂವು ಅಕ್ಷತೆ ಅರ್ಪಿಸಿ ನಮಸ್ಕರಿಸಿ ಶ್ರೀ ಸರಸ್ವತಿ ದೇವಿ ಕೃಪೆಗೆ ಪಾತ್ರರಾದರು. ಗ್ರಾಮದ ಶ್ರಿನಾಗ ದೇವನ ಪಂಚಾಮೃತ ಅಭಿಶೇಕ ಹೂ ಹಣ್ಣು ಪ್ರಸಾದ ಸಮರ್ಪಣೆಯ ಮೂಲಕ ಗ್ರಾಮದ ಸರ್ವರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಸರ್ವರ ಸಹಾಯ ಸಹಕಾರ ನೀಡಿದ ಮುಖಂಡರು, ಯುವಕರ ಸೇವೆಗೆ ಮುಖ್ಯ ಶಿಕ್ಷಕ, ಸಂಗಪ್ಪ ಹುನಗುಂದ, ಗುರು ವೃಂದದವರು ಅಭಿಮಾನದ ಅಭಿನಂದನೆಗಳು ಹೇಳಿದರು.ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿಯವರು ಗುಂಡನಪಲ್ಲೆ ಈಗ ಗ್ರಾಮದ ಸರ್ವರ ಸಹಕಾರ ದಿಂದ ನಿಜ ಜ್ಞಾನ ದೇಗುಲವಾಗಿದೆ ಎಂದರು. ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕ ವೃಂದವರು, ಗ್ರಾಮದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸರ್ವಸದಸ್ಯರು, ಮುಖಂಡರು, ಯುವಕರು, ಶಾಲಾ ಮುದ್ದು ಮಕ್ಕಳು ಉತ್ಸಾಹ ದಿಂದ ಭಾಗವಹಿಸಿದ್ದರು.