13 ಲಕ್ಷ ರೂಪಾಯಿಗಳಲ್ಲಿ ಶಾಲಾ ಕಾರ್ಯಾಲಯ ಕೊಠಡಿ ನಿರ್ಮಿಸಿ ದಾನವಾಗಿ ಕೊಟ್ಟ ಆಸ್ಪತ್ರೆ ಗಂಗಮ್ಮ.
ಕೊಟ್ಟೂರು ಜೂನ್.18

ಪಟ್ಟದ ಶ್ರೀ ಕರಿಬಸವೇಶ್ವರ ಸ್ವಾಮಿ ಶ್ರೀಮತಿ ಕೆಂಗನವರ ವೀರಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಶಾಲಾ ಕಾರ್ಯಾಲಯ ಕೊಠಡಿ ಸಮರ್ಪಣೆ ಸಮಾರಂಭ ನಡೆಯಿತು. ಕೊಟ್ಟೂರು ಪಟ್ಟಣದ ತುಂಬರಗುದ್ದಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಟಿ. ಸತೀಶ್ ನಿವೃತ್ತ ಸಹ ಪ್ರಾಧ್ಯಾಪಕರಾಗಿ ವಿಶ್ರಾಂತಿ ಪಡೆಯುವುದರಿಂದ ಲಾಭಕ್ಕಿಂತ ಆರೋಗ್ಯಕ್ಕೆ ನಷ್ಟವೇ ಹೆಚ್ಚು ಎಂದು ಅರಿತು ಸಾಮಾಜಕ್ಕಾಗಿ ಮಾನವನಾಗಿ ಉತ್ತಮ ಸೇವೆ ಸಲ್ಲಿಸಬೇಕು ಎಂದು ಚಿಂತನೆ ನಡೆಸಿ 2013 ರಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿ ತಮ್ಮ ನಿವೃತ್ತಿ ವೇತನದಲ್ಲೇ ಸುಮಾರು 53 ಸರ್ಕಾರಿ ಶಾಲೆಗಳ ಮಕ್ಕಳಿಗೆ ಹಂತ ಹಂತವಾಗಿ ಇಲ್ಲಿಯವರೆಗೆ ಯಾರ ಸಹಾಯ ಕೇಳದೆ ಅಭ್ಯಾಸಕ್ಕೆ ಅವಶ್ಯಕವಾಗಿ ಬೇಕಾದ ಪುಸ್ತಕ, ಪೆನ್, ಪೆನ್ಸಿಲ್, ವಿತರಣೆ ಮಾಡಿದ್ದೇನೆ ಎಂದು ಟ್ರಸ್ಟ್ ಅಧ್ಯಕ್ಷರು ತಿಳಿಸಿದರು. ನಮ್ಮ ಟ್ರಸ್ಟ್ ಸೇವೆಯನ್ನು ಕಣ್ಣಾರೆ ಕಂಡ ನಮ್ಮ ಅತ್ತೆಯವರು ನನ್ನಿಂದಲು ಸಮಾಜಕ್ಕೆ ಉತ್ತಮ ಸೇವೆ ಸಿಗಲಿ ಎಂದು ಕೊಂಡು ಸತೀಶ್ ಹಾಗೂ ಶಾಲಾ ದೈಹಿಕ ಶಿಕ್ಷಕರಾಗಿದ್ದ ದಿವಂಗತ ಮಂಜುನಾಥ ಅವರ ಸಲಹೆ ಮಾರ್ಗದಲ್ಲಿ ಹಾಗೂ ಶಿಕ್ಷಣ ಇಲಾಖೆ ಒಪ್ಪಿಗೆ ಪಡೆದು ಆಸ್ಪತ್ರೆ ಗಂಗಮ್ಮ ಹಾಗೂ ಅವರ ಸಹೋದರ ದಿ ಶ್ರೀ ಟಿ.ಕೊಟ್ಟೂರೇಶಪ್ಪ ಇವರ ಸೇವಾರ್ಥವಾಗಿ 40×30 ಅಡಿ ಅಳತೆಯ ಕಾರ್ಯಾಲಯ ಕೊಠಡಿ ಕಟ್ಟಡ ರೂ 13 ಲಕ್ಷ ಖರ್ಚಿನಿಂದ ಕಟ್ಟಡ ಕಟ್ಟಿಸಿ ಇಂದು ಶಾಲಾ ಮುಖ್ಯೋಪಾಧ್ಯಾಯರಾದ ರೆಹಮಾನ್ ಸಾಬ್ ಇವರಿಗೆ ದಾನಿಗಳಾದ ಆಸ್ಪತ್ರೆ ಗಂಗಮ್ಮ ಇವರು ಕೊಠಡಿ ಕೀ ಹಸ್ತಾಂತರ ಮಾಡಿದರು.ಪಟ್ಟಣದ ಯುನಿಕ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಪಿ.ಎಂ. ಈಶ್ವರಯ್ಯ, ಕಾರ್ಯದರ್ಶಿ ಹಾಗೂ ಬಿಜೆಪಿ ತಾಲೂಕು ರೈತ ಯುವಮೋರ್ಚಾ ಅಧ್ಯಕ್ಷರಾದ ಕೆ.ಎಸ್. ರುದ್ರೇಶ್, ಟ್ರಸ್ಟಿಗಳಾದ ಪಿ.ಕೊಟ್ರೇಶ್, ಪಿ.ವೆಂಕಟೇಶ್, ಬಾಲಣ್ಣ, ಮಂಜುನಾಥ ಗಂಗಾವತಿ, ಉಜ್ಜಿನಿ ಬಸವರಾಜ, ಹನಸಿ ವಿಜಯ್, ಇತರರ ಸಮ್ಮುಖದಲ್ಲಿ ದಾನಿಗಳಾದ ಆಸ್ಪತ್ರೆ ಗಂಗಮ್ಮ ಇವರ ಅಪಾರವಾದ ಸೇವೆ ಮನಗಂಡು ಸನ್ಮಾನ ಮಾಡಲಾಯಿತು. ಇವರ ಸೇವೆ ಉಳ್ಳವರಿಗೆ ಮಾದರಿಯಾಗಲಿ ಎಂದು ಯುನಿಕ್ ಟ್ರಸ್ಟ್ ಅಧ್ಯಕ್ಷ ಪಿ.ಎಂ. ಈಶ್ವರಯ್ಯ ಹೇಳಿದರು.ಶಾಲಾ ಕೊಠಡಿ ಸಮರ್ಪಣಾ ಸಮಾರಂಭದಲ್ಲಿ ಶಾಲಾ ಶಿಕ್ಷಕ ಶಿಕ್ಷಕಿಯರು ಹಾಗೂ ವಲಯ ಶಿಕ್ಷಣಾಧಿಕಾರಿ ನಿಂಗಪ್ಪ ಹಾಗೂ ಪಟ್ಟಣದ ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ. ಕೊಟ್ಟೂರು.