ವ್ಯಕ್ತಿತ್ವ ಬೆಳವಣಿಗೆ ಕ್ರೀಡೆ ಮುಖ್ಯ – ನರಗೋಧಿ.
ಸಿಂದಗಿ ಆ.12

ವಿಶ್ವರಾಧ್ಯ ಮಠ ಬೋರಗಿ ಪುರದಾಳದಲ್ಲಿ ಸಿಎಂ ಮನಗೂಳಿ ಮಹಾವಿದ್ಯಾಲಯದ ಎನ್.ಎಸ್.ಎಸ್ ವಿಶೇಷ ವಾರ್ಷಿಕ ಶಿಬಿರದ 6 ನೇ. ದಿನದ ಕಾರ್ಯಕ್ರಮವು ಜರುಗಿತು. ಶ್ರೀ ಬಸವರಾಜ್ ಚಾವರ್ ಗ್ರಾಮ ಪಂಚಾಯತಿ ಸದಸ್ಯರು ಬೋರಗಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಂದಗಿಯ ಶ್ರೀ ರಾಜಶೇಖರ್ ನರಗೋಧಿ ಹಾಗೂ ಪ್ರೊಫೆಸರ್ ಬಸವರಾಜ್ ಹಡಪದ್ ಮುದ್ದೇಬಿಹಾಳ ಶ್ರೀ ಶಿವಾನಂದ್ ಚಾವರ್ ಶ್ರೀ ಸಿದ್ದಯ್ಯ ಮಠ ಭಾಗವಹಿಸಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊಫೆಸರ್ ಬಿಡಿ ಮಾಸ್ತಿ ಹಾಗೂ ರಾಹುಲ್ ಕಾಂಬಳೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ರಾಜಶೇಖರ್ ನರಗೋಧಿಯವರು ಯುವಕರಲ್ಲಿ ಆರೋಗ್ಯ ಜಾಗೃತಿ ಮತ್ತು ವ್ಯಕ್ತಿತ್ವ ಬೆಳವಣಿಗೆಯಲ್ಲಿ ಕ್ರೀಡೆಯ ಪಾತ್ರ ಕುರಿತು ಮಾತನಾಡಿದರು.

ಯುವಕರು ತಮ್ಮ ಗುರಿ ಮುಟ್ಟಬೇಕಾದರೆ ಆತ್ಮವಿಶ್ವಾಸ ಇಚ್ಛಾ ಶಕ್ತಿ ಸತತ ಪ್ರಯತ್ನದಿಂದ ಎದೆಗುಂದದೆ ಮುನ್ನುಗ್ಗಬೇಕು. ದುಶ್ಚಟಗಳಿಂದ ದೂರ ಇರಬೇಕು. ದೇಶಭಕ್ತಿ ನಾಡಿನ ನೆಲ ಜಲ ಗೌರವಿಸಬೇಕು. ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆಯ ಬಾರದು. ಯುವಕರು ಸಮಾಜದ ಆಧಾರ ಸ್ಥಂಭ. ನಮ್ಮ ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ. ಯುವಕರು ದೈಹಿಕವಾಗಿ ಮಾನಸಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ನೈತಿಕವಾಗಿ ಧಾರ್ಮಿಕವಾಗಿ ಆರೋಗ್ಯಕರ ವಾಗಿದ್ದರೆ ಮಾತ್ರ ಭವ್ಯ ಭಾರತದ ಕನಸು ನನಸಾಗುತ್ತದೆ ಎಂದು ನುಡಿದರು. ಕಾರ್ತಿಕ್ ಹಿರೇಮಠ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.