ಭಾವೈಕ್ಯತೆಯ ಮೊಹರಂಗೆ ಅದ್ದೂರಿ ತೆರೆ.
ಹೊಸಪೇಟೆ ಜುಲೈ.30

ಚಿತ್ತವಾಡಿಗಿ ಕಳೆದ 10 ದಿನಗಳಿಂದ ನಗರದ ಶ್ರೀರಾಮಮಲಿ ಮಸೀದಿಯಲ್ಲಿ ಪ್ರತಿಷ್ಠಾಪನೆ ಮಾಡಿದ ರಾಮಲಿ ಸ್ವಾಮಿ, ಚಿತ್ತವಾಡಿಯಲ್ಲಿ ಶತಮಾನದ ಇತಿಹಾಸವಿರುವ ಅಗಸರ ಓಣಿಯ ಸಣ್ಣ ರಾಮಾಲಿ ಸ್ವಾಮಿ ಮಸೀದಿಯ ಮೊಹರಂ ದೇವರು ಹಾಗೂ ದೊಡ್ಡ ಮಸೀದಿಯ ದೇವರು, ಕಮಲಾಪುರದ ಸಂಡೂರುಸ್ವಾಮಿ, ಮುಸ್ತಫಾ, ಮುದುಗಲ್ ಮಸೀದ್, ಕೆರೆತಾಂಡಾ ಸೇರಿ ವಿವಿಧೆಡೆ ಪ್ರತಿಷ್ಠಾಪಿಸಿದ್ದ 200ಕ್ಕೂ ಹೆಚ್ಚು ಪೀರಲ ದೇವರುಗಳನ್ನು ವಿಸರ್ಜಿಸಲಾಯಿತು.

ಊರಿನ ಎಲ್ಲಾ ಜಾತಿಯ ಜನರು ಮತ್ತು ಎಲ್ಲಾ ಧರ್ಮದ ಜನರು ಸೇರಿ ಮಾಡುವ ಏಕೈಕ ಹಬ್ಬವೆಂದರೆ ಮೊಹರಂ. ಊರಿನ ಮಹಿಳೆಯರು ದೇವರನ್ನು ನೋಡಲು ಬೀದಿಯ ಅಕ್ಕಪಕ್ಕದಲ್ಲಿ ನಿಂತು ಜರುಗುವ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುತಾರೆ. ಈ ಮೆರವಣಿಗೆಯಲ್ಲಿ ಹಲವು ದಾರಿಯುದ್ದಕ್ಕೂ ಅಲ್ಲಲ್ಲಿ ಬಾಣಗಳ ಸದ್ದು ಕೇಳಿಸುತ್ತಿತ್ತು. ಹಬ್ಬದಲ್ಲಿ ಹೆಜ್ಜೆ ಕುಣಿತ, ಗೆಜ್ಜೆ ಕುಣಿತ, ಹುಲಿವೇಷಧಾರಿಗಳ ಕುಣಿತ ಗಮನ ಸೆಳೆಯಿತುಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ತಾಲೂಕ ವರದಿಗಾರರು:ಮಾಲತೇಶ್. ಶೆಟ್ಟರ್. ಹೊಸಪೇಟೆ