ಬೆಂಗಳೂರಿನ ಬಹುತೇಕ ಮಳಿಗೆಗಳು ಸೇರಿದಂತೆ ವ್ಯಾಪಕ ಕೇಂದ್ರಗಳು ಸೇಲ್ ಗಳ – ಪೈಪೋಟಿಯಲ್ಲಿ ತೊಡಗಿವೆ.
ಬೆಂಗಳೂರು ಆ.14

ದೊಡ್ಡ ದೊಡ್ಡ ಮಾಲ್ ಗಳು ನವ ವಧುವಿನಂತೆ ಕಂಗೊಳಿಸುತ್ತ ಶೃಂಗಾರ ಗೊಂಡಿವೆ. ಒಂದು ಕೊಂಡರೆ ಇನ್ನೊಂದು ಉಚಿತ ಅಷ್ಟು ರಿಯಾಯಿತಿ ಇಷ್ಟು ರಿಯಾಯಿತಿ ಅದು ಕೊಂಡರೆ ಇದು ಪ್ರೀ. ಎಂಬ ಟಿವಿ ಜಾಯಿರಾತು ಮತ್ತು ಬ್ಯಾನರ್ ಗಳಿಂದ ಪ್ರಚಾರವಾಗುತ್ತಿವೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ವರ ಮಹಾಲಕ್ಷ್ಮಿ ಹಬ್ಬದ ಸಡಗರ. ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮ ದಿಂದ ನಾವು ಆಚರಿಸುತ್ತೇವೆ. ನಾವೆಲ್ಲರೂ ಭಾರತೀಯರು ಎಂದು ಜಾತಿ, ಮತ, ಭೇದವಿಲ್ಲದೆ ಸಂಭ್ರಮಿಸುವ ದಿನವಿದು 77 ವಸಂತಗಳನ್ನು ಪೂರೈಸಿ 78 ನೇ. ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೇವೆ. ಈ ದಿನಾಚರಣೆಯ ದಿನದಂತ ದೇಶಭಕ್ತಿಯ ಹಾಡುಗಳು ಭಾಷಣಗಳು ಕಲೆ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾರುವ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ. ನಾವೆಲ್ಲರೂ ಭಾರತೀಯರು ಧರ್ಮ, ಜಾತಿ ಭಾಷೆ ಕುಲಗೋತ್ರ ಬಡವ, ಶ್ರೀಮಂತರು, ವಿದ್ಯಾವಂತ, ಅವಿದ್ಯಾವಂತ ಎಂಬ ಭೇದವಿಲ್ಲದೇ ನಮ್ಮ ಭಾರತ ದೇಶವನ್ನು ಪ್ರತಿಯೊಬ್ಬ ಪ್ರಜೆಯು ಪ್ರೀತಿಸುತ್ತಾನೆ. ಪ್ರೀತಿಸಲೇ ಬೇಕು, ಏಕೆಂದರೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ.

ಸ್ವಾತಂತ್ರ್ಯ ನಂತರ ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಕೃಷಿ ವಿದ್ಯೆ, ಆರೋಗ್ಯ, ಕೖೆಗಾರಿಕೆ, ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಸಿನಿಮಾ, ಕ್ರೀಡೆ ಇತ್ಯಾದಿ ರಂಗದಲ್ಲಿ ನಮ್ಮ ದೇಶ ಮುಂದುವರೆದ ರಾಷ್ಟ್ರಗಳ ಶ್ರೇಣಿಯಲ್ಲಿ ಇದೆ. ಪ್ರಗತಿ ಪಥ ದಲ್ಲಿರುವ ಈ ದೇಶದ ಪ್ರಗತಿ ನಮ್ಮ ಪ್ರಗತಿ ಎಂಬ ಭಾವನೆ ಸದಾ ನಮ್ಮಲ್ಲಿರಬೇಕು. “ಸತ್ಯಮೇವ ಜಯತೇ” ಇದು ನಮ್ಮ ರಾಷ್ಟ್ರೀಯ ದ್ಯೇಯ ವಾಕ್ಯ, ಈ ದ್ಯೇಯ ವಾಕ್ಯದ ಪರಿ ಪಾಲನೆ ಎಷ್ಟಾಗುತ್ತಿದೆ. ಎಲ್ಲ ಕಡೆ ಸುಳ್ಳು ವ್ಯಾಪಿಸಿ ಕೊಂಡು ಬಿಟ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹಿಳೆಯರು ಕೂಡ ಹೋರಾಡಿದ್ದಾರೆ. ದೇಶವನ್ನು ಗೌರವಿಸುವ ನಾವು ಮಹಿಳೆಯರನ್ನು ಗೌರವಿಸ ಬೇಕು. ತಾಯಿ ಎಂಬ ಗೌರವ, ಮಗಳೆಂಬ ವಾತ್ಸಲ್ಯ. ಅತ್ತೆ ಎಂಬ ಅಭಿಯಾನ. ಸೊಸೆ ಎಂಬ ಪ್ರೀತಿ ಸಹೋದರ ಸಹೋದರಿಯರ ಪ್ರೀತಿ ಭಾಂದವ್ಯ. ನಾವೆಲ್ಲರೂ ಒಂದೇ ನಮ್ಮೆಲ್ಲರ ಸೃಷ್ಟಿಕರ್ತನು ಒಬ್ಬನೆ ಆಗಿರುವಾಗ ನಾವೆಲ್ಲರೂ ಒಂದೇ ಸಹೋದರ ಸಹೋದರಿಯಾಗಿ ಒಂದೇ ದೇಶದ ನಿವಾಸಿಗಳಾಗಿ ಜಾತಿ ಮತ ಧರ್ಮ ಭಾಷೆ ಭೇದವಿಲ್ಲದೇ ನಾವು ಭಾರತೀಯರು ಎಂಬ ಒಗ್ಗಟ್ಟು ಹಾಗೂ ಏಕತೆಯನ್ನು ಪ್ರದರ್ಶಿಸ ಬೇಕಾಗಿದೆ. “ಸ್ವಾತಂತ್ರ್ಯ ದಿನಾಚರಣೆ” ಎನ್ನುವುದು ಕೇವಲ ಒಂದು ದಿನಕ್ಕೆ ಸೀಮಿತ ಗೊಳಿಸದ ನಾವೆಲ್ಲರು ಒಂದೇ ಎಂಬ ಭಾವನೆಯನ್ನು ಗಟ್ಚಿ ಗೊಳಿಸೋಣ ಸ್ವಾತಂತ್ರ್ಯ ದಿನಾಚರಣೆಯ ಎಲ್ಲಾರು ಸಡಗರ ಸಂಭ್ರಮದಿಂದ ಆಚರಿಸೋಣ. –
ವಿ.ಎಂ.ಎಸ್.ಗೋಪಿ ✍
ಲೇಖಕರು, ಸಾಹಿತಿಗಳು
ಬೆಂಗಳೂರು.