ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು – ಲೆಫ್ಟ್ ರೈಟ್ ತೆಗೆದುಕೊಂಡು ಲೋಕಾಯುಕ್ತರು.

ಹುನಗುಂದ ಆ.14

ಪಟ್ಟಣದ ಮೇಗಲ ಪೇಟಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರ ವಸತಿ ನಿಲಯ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯದ ಶೌಚಾಲಯದ ಕೊಳಚೆ ನೀರು ಮಡುಗಟ್ಟಿ ನಿಂತು ದುರ್ವಾಸನೆ ಬೀರುತ್ತಿದ್ದರೂ ಕೂಡಾ ಸಂಬಂಧಸಿದ ಅಧಿಕಾರಿಗಳು ಕ್ರಮ ಕೈಕೊಳ್ಳುತ್ತಿಲ್ಲ ಎನ್ನುವ ದೂರಿನ ಆಧಾರ ಮೇಲೆ ಬಾಗಲಕೋಟಿ ಲೋಕಾಯುಕ್ತ ಎಸ್.ಪಿ ಸತೀಶ ಚಿಟಗುಬ್ಬಿ ಮತ್ತು ಡಿವೈಎಸ್‌ಪಿ ಸಿದೇಶ್ವರ ಸ್ಥಳಕ್ಕೆ ಭೇಟಿ ನೀಡಿ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ಪುರಸಭೆ ಅಧಿಕಾರಿ ಮುತ್ತುರಾಜ ಕಳ್ಳಿಗುಡ್ಡ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಕಟ್ಟಮನಿ ಅವರನ್ನು ಲೇಫ್ಟ್ ರೈಟ್ ತಗೆದುಕೊಂಡು ಘಟನೆ ನಡೆಯಿತು.ಕಳೆದ ಎರಡು ವರ್ಷದಿಂದ ಎರಡು ವಸತಿ ನಿಲಯಗಳ ಶೌಚಾಲಯದ ಕೊಳಚೆ ನೀರು ಬಂದು ನಿಂತು ಗಬ್ಬೆದ್ದು ನಾರುತ್ತಿದೆ. ಅದನ್ನು ಸ್ವಚ್ಚಗೊಳಿಸಿ ಇಲ್ಲಿ ವಸತಿ ನಿಲಯದ ಸ್ವಲ್ಪೇ ದೂರದಲ್ಲಿ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ೪೪೯ ವಿದ್ಯಾರ್ಥಿಗಳ ಅಧ್ಯಯನ ಮಾಡುತ್ತಿದ್ದು ಅದು ಅಲ್ಲದೇ ವಸತಿ ನಿಲಯದ ವಿದ್ಯಾರ್ಥಿಗಳಿಗೂ ದುರ್ವಾಸನೆ ಬೀರುತ್ತಿದೆ. ಅದು ಅಲ್ಲದೇ ಕೊಳಚೆ ನೀರು ನಿಂತ ಸ್ಥಳದ ಕೆಳಗೇನೆ ಕುಡಿಯುವ ನೀರಿನ ಪೈಪ ಲೈನ್ ಕೂಡಾ ಇದೆ ಆ ಪೈಪ್ ಹೊಡೆದು ಪಟ್ಟಣದ ಅನೇಕ ಬಡಾವಣೆಗಳಿಗೆ ಕುಡಿಯುವ ನೀರಿನ ಜೊತೆ ಈ ಕೊಳಚೆ ನೀರು ಸೇರಿ ಹೋಗುತ್ತಿದೆ ಎಂದು ಪುರಸಭೆಯ ಅಧಿಕಾರಿಗಳಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಸಾಕಷ್ಟು ಸಾರಿ ಮೌಖಿಕ ಮತ್ತು ಲಿಖಿತ ಮನವಿ ಮಾಡಿದರೂ ಕೂಡಾ ಸ್ವಚ್ಚ ಮಾಡುತ್ತಿಲ್ಲ ನಿತ್ಯ ಈ ದುರ್ವಾಸನೆ ಮತ್ತು ಸೊಳ್ಳೆಯ ಕಾಟಕ್ಕೆ ಇಲ್ಲಿ ವಾಸವಾಗಿರುವ ಜನರಿಗೆ ಸಾಕು ಸಾಕಾಗಿ ಹೋಗಿದೆ ಸರ್ ಎಂದು ಬಂದ ಲೋಕಾಯುಕ್ತರ ಮುಂದೆ ಅಲ್ಲೀನ ಜನರು ತಮ್ಮ ಅಳಲನ್ನು ತೋಡಿಕೊಂಡಾಗ ವಾಸ್ತವ ಸ್ಥಿತಿಯನ್ನು ಗಮನಿಸಿದ ಲೋಕಾಯುಕ್ತ ಎಸ್.ಪಿ ಮತ್ತು ಡಿವೈಎಸ್‌ಪಿ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ವರ್ಷದಲ್ಲಿ ಎಷ್ಟು ಬಾರಿ ಈ ನೀರು ತಗಸ್ತೀರಿ ಎಂದು ಪ್ರಶ್ನಿಸಿದಾಗ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಎಂ.ಎಚ್.ಕಟ್ಟಿಮನಿ ಎರಡು ಬಾರಿ ತಗೆಸಿದ್ದೇನೆ ಎಂದು ಉತ್ತರಿಸುತ್ತಿದಂತೆ ಮತ್ತಷ್ಟು ಗರಂಗೊಂಡ ಲೋಕಾಯುಕ್ತ ಡಿಎಸ್‌ಪಿ ಸಿದೇಶ್ವರ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆ ತಗೆದುಕೊಂಡು ತಕ್ಷಣವೇ ಕ್ರಮ ಕೈಕೊಳ್ಳುವಂತೆ ಸೂಚಿಸಿದರು. ನಂತರ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅದರ ಪಕ್ಕದಲ್ಲಿರುವ ಮೆಟ್ರಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲೀನ ಶೌಚಾಲಯ ಮತ್ತು ಪ್ಲಂಬರ್ ಸೋರಿಕೆಯ ಅವ್ಯವಸ್ಥೆಯನ್ನು ನೋಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಹಿಗ್ಗಾ ಮುಗ್ಗಾ ತೊಳೆದಿದ್ದಲ್ಲದೇ ತಕ್ಷಣವೇ ಇವುಗಳನ್ನು ರಿಪೇರಿ ಮಾಡುವಂತೆ ಖಡಕ್ ವಾರ್ನಿಂಗ್ ಮಾಡಿದರು.ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಪಿಐ ಬಸವರಾಜ ಮೂಕರ್ತಿಹಾಳ,ಎಸೈ ಮಲ್ಲು ಬಿದರಿ, ತಹಶೀಲ್ದಾರ ನಿಂಗಪ್ಪ ಬಿರಾದಾರ, ತಾ.ಪಂ ಇಓ ಮುರಳಿಧರ ದೇಶಪಾಂಡೆ ಸೇರಿದಂತೆ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button