ಯರೇ ಹಂಚಿನಾಳದಲ್ಲಿ ರೈತರು ಒಣಗಲು ಹಾಕಿದ ಹೆಸರು ಮಳೆಗೆ ನೀರುಪಾಲು ಪರಿಹಾರ ನೀಡಲು – ರಾಜ್ಯ ರೈತ ಸಂಘದಿಂದ ಆಗ್ರಹ.
ಯರೇ ಹಂಚಿನಾಳ ಆ.14

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇ ಹಂಚಿನಾಳ ಗ್ರಾಮದಲ್ಲಿ ರೈತರು ಹೆಸರು ರಾಶಿ ಮಾಡಿ ಹೊಲದಲ್ಲಿ ಒಣ ಹಾಕಿದ್ದು. ರಾತ್ರಿ ವೇಳೆಯಲ್ಲಿ ಹೆಸರು ಕಾಳಿಗೆ ಹಾಳಿ ಮುಚ್ಚಿದ್ದರು. ಈ ಸಂದರ್ಭದಲ್ಲಿ ಬೆಳ್ಳಂ ಬೆಳಿಗ್ಗೆ ಮಳೆ ಬಂದು ಮಳೆ ಹೊಡೆತಕ್ಕೆ ಮುಚ್ಚಿದ ಹೆಸರಿನ ರಾಶಿಯಲ್ಲಿ ಕೆಳಗಡೆ ಮೇಲ್ಗಡೆ ಮಳೆ ನೀರಿನ ರಭಸಕ್ಕೆ ರಾಶಿಯಲ್ಲಿ ಹೊಕ್ಕು ಹೆಸರು ನೀರು ಪಾಲಾಗಿ ಹಾಳಾಗಿದ್ದು.ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ಕೊಡ ಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು.

ಹೌದು ರೈತರು ಹೆಸರು ರಾಶಿ ಮಾಡಿ ಒಣಗಿಸಿ ಸಿದ್ಧತೆ ಮಾಡಿ ಕೊಂಡರೆ ಖರೀದಿ. ಕೇಂದ್ರಕ್ಕೆ ಕೊಡುವುದಾಗಲಿ ಖಾಸಗಿ ಮಾರುಕಟ್ಟೆಯಲ್ಲಿ ಕೊಡುವುದಾಗಲಿ ರೈತರು ಹೆಸರು ರಾಶಿ ಮಾಡಿ ಒಣಗಿಸುವು ಸಂಪ್ರದಾಯದಂತೆ ರೈತರು ಹೆಸರು ರಾಶಿ ಮಾಡಿ ಒಣಗಿಸಿ ಚಿಲಕ್ಕೆ ತುಂಬಬೇಕು ಎನ್ನುವ ಸಂದರ್ಭದಲ್ಲಿ ರೈತರು ಒಣಗಲು ಹಾಕಿದ ಹೆಸರಿನ ರಾಶಿಗೆ ಏಕಾಏಕಿ ಬೆಳಗಿನ ಜಾವದ ಮಳೆ ರಭಸಕ್ಕೆ ಸಿಕ್ಕು ಹೆಸರು ಕಾಳಲ್ಲಿ ನೀರು ನಿಂತು ಎಲ್ಲಾ ರೈತರ ಹೆಸರು ಕಾಳು ಹಾಳಾಗಿ ಹೋಗಿದೆ.

ಹೆಸರು ಕಾಳು ಹಾಳಾದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕೆಂದು ಯರೇ ಹಂಚಿನಾಳ ಗ್ರಾಮದ ರೈತ ಸಂಗಪ್ಪ ಹೂಗಾರ. ಇವರು ಆಗ್ರಹಿಸಿದರು.ಈ ಸಂದರ್ಭದಲ್ಲಿ ನಾಗಪ್ಪ ಅಸೂಟಿ. ಪ್ರಭಯ್ಯ. ಮುತ್ತಪ್ಪ ಯಲಬುರ್ಗಿ. ಅನೇಕ ರೈತರು ಸರ್ಕಾರಕ್ಕೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ