ನಿರಾಶ್ರಿತರಿಗೆ ನ್ಯಾಯ ಒದಗಿಸುವಲ್ಲಿ ಹೆಸರಾದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ.

ಬೆಳಗೋಡು ಆ.14

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಕಲ್ಯಾಣ ಕರ್ನಾಟಕದ ಸಂಘಟನೆ ಕಾರ್ಯದರ್ಶಿ ಹಾಗೂ ಆರ್‌.ಟಿ.ಐ ಮಾಹಿತಿ ಪತ್ರಿಕೆಯ ಸಹ ಸಂಪಾದಕ ಟಿ.ಹೆ.ಚ್.ಎಂ ರಾಜಕುಮಾರ್ ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷ ಹೆಚ್ ಗೋಪಾಲ್ ಗೌರವಾಧ್ಯಕ್ಷ ಶ್ರೀನಿವಾಸ್ ಇವರ ಸಮ್ಮುಖದಲ್ಲಿ ಬೆಳಗೋಡು ಮತ್ತು ಸಣ್ಣಾಪುರ ಗ್ರಾಮದ ನೈಜ ಫಲಾನುಭವಿಗಳು ಅಳಲು ತೋಡಿಕೊಂಡ ವಿಷಯವೇನೆಂದರೆ ಸರಿಸುಮಾರು 24 ವರ್ಷಗಳ ಹಿಂದೆ ಅತಿವೃಷ್ಟಿಯಿಂದ ತುಂಗಭದ್ರ ನದಿಯು ತುಂಬಿ ಹರಿಯುತ್ತಿದ್ದು. ಬೆಳಗೋಡು ಮತ್ತು ಸಣ್ಣಾಪುರ ಗ್ರಾಮದ ನದಿ ತೀರದಲ್ಲಿ ವಾಸಿಸುತ್ತಿದ್ದ ಗ್ರಾಮಸ್ಥರಿಗೆ ಖಾಯಂ ಸೂರು ಕಲ್ಪಿಸುವ ಸಲುವಾಗಿ ಆಗಿನ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಕಂಪ್ಲಿ ಹೋಬಳಿಯ ಅರಳಿ ಗ್ರಾಮದ ಸರ್ವೆ ನಂ 77/ಎ ವಿಸ್ತೀರ್ಣ 17 ಎಕರೆ ಸ್ಥಳದಲ್ಲಿ 30×40 ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿದ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ತಹಸೀಲ್ದಾರರು ಹೊಸಪೇಟೆ ಇವರಿಗೆ ಸೂಚಿಸಿ ನಿವೇಶನಗಳನ್ನು ಹಂಚಿಕೆ ಮಾಡಿದರು 1993-94 ರಲ್ಲಿ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿ ರೂ. 15,000 ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಿ ಅದರಲ್ಲಿ 5000 ಮತ್ತು 10 000 ರೂ.ಗಳನ್ನು 10% ಬಡ್ಡಿದರಂತೆ 22 ವಾರ್ಷಿಕ ಕಂತುಗಳಲ್ಲಿ ಸಾಲದ ವಾಕ್ಯವನ್ನು ಮರು ಪಾವತಿಸಲು ಫಲಾನುಭವಿ ಬದ್ಧರಾಗಿದ್ದೇವೆ ಎಂದು ಒಡಂಬಡಿಕೆಯ ಮೂಲಕ ಕಂಪ್ಲಿ ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಆಯ್ಕೆ ಸಹ ಮಾಡಿಸಿರುತ್ತಾರೆ ಈ ನಿವೇಶನ ಮತ್ತು ಕಟ್ಟಡಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಿದ ಆಗಿನ ಅಧಿಕಾರಿಗಳು ಮತ್ತು ಕೆಲವು ಹಿರಿಯ ರೈತರು ಕಬ್ಬಿನ ಕಟಾವಿಗೆ ಬಂದಂತಹ ಲಂಬಾಣಿಗಳು ತಾತ್ಕಾಲಿಕವಾಗಿ ಉಪಯೋಗಿಸಲು ಅನುವು ಮಾಡಿ ಕೊಟ್ಟಿದ್ದೆ ತಡ ಪ್ರತಿ ಬಾರಿ ವಾಡಿಕೆಯಂತೆ ಕಬ್ಬು ಕಟಾವಿಗೆ ಬಂದು ತಾತ್ಕಾಲಿಕವಾಗಿ ವಾಸವಾಗಿದ್ದ ಈ ವಲಸೆಗಾರರು ಕಂಪ್ಲಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡ ನಂತರ ಶಾಶ್ವತವಾಗಿ ವಾಸಿಸಲು ತೊಡಗಿದರು ಇದಕ್ಕೆ ನೈಜ ಪಲಾನುಭವಿಗಳು ಗ್ರಾಮ ಪಂಚಾಯಿತಿ ಸಣ್ಣಾಪುರ ಮತ್ತು ಮುದ್ದಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ, ತಹಸಿಲ್ದಾರರಿಗೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಮಾನ್ಯ ಸಹಾಯಕ ಆಯುಕ್ತರಿಗೆ, ಮಾನ್ಯ ಜಿಲ್ಲಾಧಿಕಾರಿಗಳಿಗೆ, ಅಕ್ರಮ ವಾಗಿ ವಾಸಿಸುತ್ತಿರುವ ವಲಸೆಗಾರರನ್ನು ತೆರವು ಗೊಳಿಸಲು ಮನವಿ ಕೊಟ್ಟಿದ್ದರು ಇವರ ಮನವಿಗೆ ಸ್ಪಂದಿಸಿದ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ತನಿಖೆಗಾಗಿ ಆದೇಶಿಸಿದ ನಂತರ ವರದಿ ಪ್ರಕಾರ ಅಕ್ರಮವಾಗಿ ವಾಸಿಸುತ್ತಿರುವವರು ಮತ್ತು ಅನಧಿಕೃತವಾಗಿ ನಿವೇಶನ ಪಡೆದ ವರದಿ ನೋಡಿ ಇದೇ ಸಮಯದಲ್ಲಿ ವಿಜಯನಗರ ಮತ್ತು ಬಳ್ಳಾರಿ ವಿಭಜನೆ ಆದನಂತರ ಕಡತಗಳ ಹಸ್ತಾಂತರ ವಿಚಾರದಲ್ಲಿ ತಡವಾಗಿದ್ದರಿಂದ ವಿಳಂಬವಾಯಿತು.

ನಂತರ ಬಳ್ಳಾರಿ ಜಿಲ್ಲೆಯ ನ್ಯಾಯದ ಪರವಾಗಿ ತೀರ್ಪು ಕೊಡುವಂತಹ ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಆಕಾಶ್ ಶಂಕರ್ ಇವರು ಅಕ್ರಮವಾಗಿ ವಾಸಿಸುತ್ತಿರುವವರಿಗೆ ನೋಟಿಸ್ ಜಾರಿ ಮಾಡಿದರು ನಂತರ ಮನೆಗೆ ನೋಟಿಸ್ ಹಂಚಿ ಬರಲು ತಿಳಿಸಿದರು. ಆದರೂ ಬಗ್ಗದ ಇವರಿಗೆ ಪೊಲೀಸ್ ಬಂದೂಬಸ್ತ್ ನೊಂದಿಗೆ ತೆರವು ಗೊಳಿಸಲು ಆದೇಶಿಸ ಬೇಕಾದರೆ ಅವರಿಗೆ ವರ್ಗಾವಣೆ ಆಯಿತು. ಅಲ್ಲಿಂದ ಇಲ್ಲಿಯವರೆಗೆ ನಾನು ಕಚೇರಿಯಿಂದ ಕಚೇರಿಗೆ ಅಲೆಯುವುದೇ ಆಯಿತು. ಎಂದು ನಮ್ಮ ಸಂಘಟನೆಯ ಪದಾಧಿಕಾರಿಗಳ ಮುಂದೆ ಅಳಲು ತೋಡಿ ಕೊಂಡಿದ್ದರಿಂದ ದಕ್ಷತೆ ಮತ್ತು ಕಾರ್ಯಕ್ಷಮತೆಗೆ ಹೆಸರುವಾಸಿಯಾದ ತಾವುಗಳು ಸಂಬಂಧಪಟ್ಟ ಇಲಾಖೆಗಳಿಂದ ನೈಜವಾದ ಫಲಾನುಭವಿಗಳಿಗೆ ಮಂಜೂರಾದ ದಾಖಲೆಗಳನ್ನು ಮತ್ತು ಉಪ ನೊಂದಣಿ ಕಚೇರಿಯಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಕಟ್ಟಡ ನಿರ್ಮಾಣವಾಗಿ ಆಯ್ಕೆಯಾದ ಫಲಾನುಭವಿಗಳ ಪ್ರತಿಗಳನ್ನು ತರಿಸಿಕೊಂಡು ತನಿಖೆಗೆ ಆದೇಶಿಸಿ ಸೂಕ್ತ ಕಾನೂನು ಕ್ರಮದೊಂದಿಗೆ ನೈಜ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕೆಂದು ಸಂಘಟನೆ ಮುಖಾಂತರ ಮತ್ತು ಪತ್ರಿಕಾ ತಮ್ಮಲ್ಲಿ ಕೋರುವೆವು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಟಿ.ಎಚ್.ಎಂ ರಾಜಕುಮಾರ್.ಕಂಪ್ಲಿ.ಬಳ್ಳಾರಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button