ಕಲಬುರ್ಗಿ ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ನೇಮಕ ಮಾಡಲಾಯಿತು.
ಕಲಬುರ್ಗಿ ಆ.14

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) (ಮಹಾತ್ಮ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಕರಾದ ಶ್ರೀ ಡಿ.ಆರ್ ಪಾಂಡುರಂಗ ಸ್ವಾಮಿ, ಆದೇಶದ ಮೇರೆಗೆ ರಾಜ್ಯ ಸಂಘಟನಾ ಸಂಚಾಲಕರು ಶಿವಾನಂದ ಎಂ. ಸಾವಳಗಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

1). ಸತೀಶ ಬಟರ್ಕಿ ಜಿಲ್ಲಾ ಸಂಚಾಲಕರು ಕಲಬುರಗಿ
2), ಸಾಬಣ್ಣ ಬಡಗೇರ ಗದ್ದಾಂರ, ಜಿಲ್ಲಾ ಸಂಘಟನಾ ಸಂಚಾಲಕರು
3). ಸಚಿನ್ ಎಂ. ದೊಡ್ಡಮನಿ, ಜಿಲ್ಲಾ ಸಂಘಟನಾ ಸಂಚಾಲಕರು
4). ಇಂದುರಾಜ ಗುಡಸುಲಕರ್ ಜಿಲ್ಲಾ ಸಂಘಟನಾ ಸಂಚಾಲಕರು ಸೇಡಂ
5) ಬಾಬು ಸಿಂಗೆ, ಜಿಲ್ಲಾ ಖಜಾಂಚಿ,
ಇಂದಿನಿಂದಲೇ ಜಿಲ್ಲಾ ವ್ಯಾಪಕವಾಗಿ ಸಂಘಟನೆಯನ್ನು ಬಲಪಡಿಸಲು ಹಾಗೂ ಕ.ದ.ಸಂ.ಸ ಅಂಗ ಸಂಸ್ಥೆಗಳನ್ನು ರಚಿಸಲು ಹಾಗೂ ಎಲ್ಲಾ ತಾಲೂಕಾ ಪದಾಧಿಕಾರಿಗಳು ಪುನರ್ ನೇಮಕ ಮಾಡಬೇಕೆಂದು ಮತ್ತು ದಲಿತರ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರ ಮೇಲೆ ನಡೆಯುವ ಅನ್ಯಾಯ ಅತ್ಯಾಚಾರದ ವಿರುದ್ಧ ಹಾಗೂ ಹಿಂದುಳಿದ ಅಲ್ಪಸಂಖ್ಯಾತರ ಪರವಾಗಿ ನ್ಯಾಯ ದೊರಕಿಸಿ.

ಜಿಲ್ಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಸಂಘಟನೆಯನ್ನು ಬಲಿಷ್ಟ ಗೊಳಿಸವರೊಂದಿಗೆ ಜಿಲ್ಲಾ ಸಮಿತಿಯು ಕಾರ್ಯ ಪ್ರವೃತ್ತರಾಗಬೇಕೆಂದು ರಾಜ್ಯ ಸಂಘಟನಾ ಸಂಚಾಲಕರಾದ ಶಿವಾನಂದ ಎಂ. ಸಾವಳಗಿ ರವರು ಈ ಮೂಲಕ ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಸ್.ಸಾವಳಗಿ.ಕಲಬುರ್ಗಿ.