“ಭೂ ಮಾತೆಯ ಮಡಿಲಲಿ ಹರುಷದಿ ಸಲಹುವ ಪುಣ್ಯಾತ್ಮರು”…..

ಸೃಷ್ಟಿಯ ದೇವ ತಂದೆ ತಾಯಿ
ಭೂಮಾತೆ ಮಡಿಲಲಿ ಹರುಷದಿ ಸಲಹುವ
ಸಹ ಪುಣ್ಯಾತ್ಮರು
ಗುರು ಹಿರಿಯರು
ಸುಮಾರ್ಗ ದರ್ಶನ
ಜ್ಞಾನ ತೋರುವ
ಅಣ್ಣತಮ್ಮ ಎಡಬಲ
ಭುಜಶಕ್ತಿ ಅಕ್ಕತಂಗಿ
ಕಕುಲತೆ ಸ್ನೇಹ ತೋರಿವ
ಸಹೋದರ/ದರಿ ಭಾವದ
ಮನದಿ ವಾತ್ಸಲ್ಯ
ಸತಿಪತಿ ಬೆಸುಗೆ
ಜೇನು ಸಿಹಿ ಹಂಚುವ
ಬಂಧು ಬಳಗ
ಬದುಕೆಗೆ ಬೆಳಕು
ದೊಡ್ಡ ಅಪ್ಪ ಅಮ್ಮ
ಗೌರವ ಸರಳತೆ
ಚಿಕ್ಕ ಅಪ್ಪ ಅಮ್ಮಮುತ್ತು
ಹೊತ್ತಿಗೆ ತುತ್ತು ನಿಡುವರು
ಮಾವ ಅತ್ತೆ ಜಗದ
ಅರಿವಿಗೆ ಜ್ಯೋತಿ ಸುಪುತ್ರ ಸುಪುತ್ರಿ
ಜಗದ ವಂಶವೃಕ್ಷ
ಹಸಿರಿಗೆ ಉಸಿರು ಅಳಿಯ ಸೊಸೆ
ನೆಮ್ಮದಿ ಜೀವನ
ಶಾಂತಿ ದ್ಯೋತಕ
ಸ್ನೇಹ ಕೂಟ
ಸುಖ ದುಃಖ
ನಲಿವು ಒಲವು
ನಗುವಿಗೆ ಮೆರುಗು
ನೆರೆಹೊರೆ ಆತ್ಮೀಯರ
ಸುಮನ ಸುಭಾವದ
ಶುಭ ಹಾರೈಕೆಗಳು
ಜೀವನ ಪಯಣದಿ
ಸದೃಶ ಬಾಳಿನ ಬೆಳಕು
ಉತ್ತಮ ಜೀವನ ಚಕ್ರ
ಸದಾ ಶುಭ ಶ್ರೀರಕ್ಷೆ
ವರಪ್ರದಾಯ ಅನವರತ
ಹರಸಲಿ ಸರ್ವರು.
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ.
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ .